ಫಿಫಾ ಶ್ರೇಯಾಂಕಪಟ್ಟಿಯಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಆರು ವರ್ಷಗಳ ನಂತರ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಸಾಧಿಸಿದ ಎರಡು ಗೆಲುವುಗಳಿಂದಾಗಿ ಅರ್ಜೆಂಟಿನಾ ತಂಡ ಬ್ರೆಜಿಲ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಕಳೆದ ಒಂದು ವರ್ಷಗಳಿಂದ ಬ್ರೆಜಿಲ್ ತಂಡದ ಅಗ್ರಸ್ಥಾನದ ಓಟ ಅಂತ್ಯವಾಯಿತು. ಇದು ಮೊರಾಕೊ ವಿರುದ್ಧ 2-1 ರಿಂದ ಪರಿಣಾಮವಾಗಿ ಬ್ರೆಜಿಲ್ ಎರಡು ಸ್ಥಾನಗಳ ಕುಸಿತ ಕಂಡಿದ್ದು ಮೂರನೇ ಸ್ಥಾನವನ್ನು ತಲುಪಿದೆ.
ವಿಶ್ವಕಪ್ ರನ್ನರ್‌ಅಪ್ ತಂಡವಾಗಿರುವ ಫ್ರಾನ್ಸ್ ಎರಡನೇ ಸ್ಥಾನಕ್ಕೆರಿದ್ದು ಅರ್ಜೆಂಟಿನಾ ನಂತರದ ಸ್ಥಾನದಲ್ಲಿದೆ. ಫ್ರಾನ್ಸ್ ತಂಡ ಯುರೋಪಿಯನ್ ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯಗಳಲ್ಲಿ ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್ ವಿರುದ್ಧ ಸತತ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಎರಡು ತಮಡಗಳು ಕುಡ ಶ್ರೇಯಾಂಕ ಪಟ್ಟಿಯಲ್ಲಿ ಆರನೇ ಶ್ರೇಯಾಂಕದಲ್ಲಿದೆ.

ಮೊದಲ ಸ್ಥಾನದಲ್ಲಿರುವ ಅರ್ಜೆಂಟೀನಾ ತಂಡ 1840.93 ಅಂಕಗಳನ್ನು ಹೊಂದಿದ್ದರೆ ಎರಡನೇ ಸ್ಥಾನದಲ್ಲಿರುವ ಫ್ರಾನ್ಸ್ 1838.45 ಅಂಕಗಳನ್ನು ಹಾಗು ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ 1834.21 ಅಂಕಗಳನ್ನು ಹೊಂದಿದೆ. ಇನ್ನು ಬೆಲ್ಜಿಯಂ 4 ನೇ ಸ್ಥಾನದಲ್ಲಿ ಮುಂದುವರಿದಿದ್ದು ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ. ಕ್ರೊಯೇಷಿಯಾ, ಇಟಲಿ, ಪೋರ್ಚುಗಲ್ ಮತ್ತು ಸ್ಪೇನ್ ನಂತರದ ಸ್ಥಾನದಲ್ಲಿದೆ.
2030ರ ವಿಶ್ವಕಪ್ ಆತಿಥ್ಯದ ಮೇಲೆ ಕಣ್ಣಿಟ್ಟು ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಜೊತೆಗೆ ಸ್ಪರ್ಧೆಯಲ್ಲಿರುವ ಮೊರಾಕೊ ಆಫ್ರಿಕನ್ ತಂಡಗಳ ಪೈಕಿ ಅಗ್ರಸ್ಥಾನದಲ್ಲಿದ್ದು ಮುನ್ನಡೆಸಲು 11ನೇ ಶ್ರೇಯಾಂಕ ಪಡೆದುಕೊಂಡಿದೆ. ಇನ್ನು ಯುನೈಟೆಡ್ ಸ್ಟೇಟ್ಸ್ 13 ನೇ ಸ್ಥಾನದಲ್ಲಿತ್ತು ಸ್ಥಳೀಯ ಪ್ರತಿಸ್ಪರ್ಧಿ ಮೆಕ್ಸಿಕೊಕ್ಕಿಂತ ಎರಡು ಸ್ಥಾನ ಮುಂದಿದೆ. 2026ರ ವಿಶ್ವಕಪ್‌ನ ಸಹ ಆತಿಥೇಯ ರಾಷ್ಟ್ರವಾದ ಕೆನಡಾ ಆರು ಸ್ಥಾನಗಳ ಏರಿಕೆ ಕಂಡಿದ್ದು 47 ನೇ ಸ್ಥಾನಕ್ಕೆ ಏರಿದೆ.
ಏಷ್ಯಾದ ತಂಡಗಳ ಪೈಕಿ ಜಪಾನ್ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು 20ನೇ ಶ್ರೇಯಾಂಕವನ್ನು ಹೊಂದಿದೆ. ಇನ್ನು 2022ರ ವಿಶ್ವಕಪ್‌ನ ಆತಿಥೆಯ ರಾಷ್ಟ್ರವಾದ ಕತಾರ್ 61ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಭಾರತೀಯ ಫುಟ್ಬಾಲ್ ತಂಡ ಐದು ಸ್ಥಾನಗಳ ಏರಿಕೆ ಕಂಡಿದ್ದು 1200.66 ಅಂಕಗಳೊಂದಿಗೆ 101ನೇ ಸ್ಥಾನವನ್ನು ಪಡೆದುಕೊಂಡಿದೆ.