For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ 2017 : ಭಾರತವನ್ನು ಮಣಿಸಿದ ಪ್ರಬಲ ಅಮೆರಿಕ

By Prasad

ನವದೆಹಲಿ, ಅಕ್ಟೋಬರ್ 06 : ಫೀಫಾ ಅಂಡರ್ 17 ವಿಶ್ವಕಪ್ ಚಾಂಪಿಯನ್ ಶಿಪ್‌ನ ಮೊದಲ ಪಂದ್ಯದಲ್ಲಿ ಪ್ರಬಲ ಎದುರಾಳಿ ಅಮೆರಿಕದ ವಿರುದ್ಧ ಭಾರತ 3-0 ಅಂತರದಿಂದ ಸೋಲು ಅನುಭವಿಸಿದೆ.

ಜವಾಹರಲಾಲ್ ಸ್ಟೇಡಿಯಂನಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಹೋರಾಟ ತೋರಿದರೂ ಎದುರಾಳಿ ಅಮೆರಿಕದ ಆಟಗಾರರು ಪ್ರತಿ ಹಂತದಲ್ಲಿಯೂ ಪ್ರಾಬಲ್ಯ ಮೆರೆದರು.

ಗ್ಯಾಲರಿ: ಅಂಡರ್ 17 ವಿಶ್ವಕಪ್ ಕಾಲ್ಚೆಂಡಾಟ

29ನೇ ನಿಮಿಷದಲ್ಲಿ ಜೋಶುವಾ ಸಾರ್ಜೆಂಟ್, 50ನೇ ನಿಮಿಷದಲ್ಲಿ ಕ್ರಿಸ್ಟೋಫರ್ ಡರ್ಕಿನ್ ಮತ್ತು 83ನೇ ನಿಮಿಷದಲ್ಲಿ ಆಂಡ್ರ್ಯೂ ಕಾರ್ಲಟನ್ ಗೋಲನ್ನು ಬಾರಿಸಿದರು. ಮೊದಲ ಪಂದ್ಯದಲ್ಲಿ ಸೋತರೂ ಕೂಡ ಮೊದಲ ಬಾರಿ ವಿಶ್ವಕಪ್ ಪ್ರವೇಶಿಸಿ ಭಾರತ ಇತಿಹಾಸ ಸೃಷ್ಟಿಸಿದೆ.

FIFA U-17 World Cup: Dominant USA beat India 3-0 in opening match

ವಿಶ್ವಕಪ್ ಚಾಂಪಿಯನ್ ಶಿಪ್‌ನ ಆತಿಥ್ಯ ವಹಿಸಿದ್ದರಿಂದ ಭಾರತ ಆಡಲು ಅರ್ಹತೆ ಪಡೆದಿತ್ತು. ಕ್ರೀಡಾಂಗಣ ತುಂಬಿಕೊಂಡಿದ್ದ ಪ್ರೇಕ್ಷಕರು ನೀಲಿ ದಿರಿಸಿನಲ್ಲಿ ಆಡುತ್ತಿದ್ದ ಭಾರತದ ಆಟಗಾರರನ್ನು ಅನುಕ್ಷಣವೂ ಉತ್ತೇಜಿಸುತ್ತಿದ್ದರೂ ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಮಾಲಿ ದೇಶವನ್ನು 3-2ರ ಅಂತರದಿಂದ ಪರಾಗ್ವೆ ಸೋಲಿಸಿದೆ. ಆರಂಭದಲ್ಲಿ 12ನೇ ನಿಮಿಷದಲ್ಲಿ ಗೆಲಿಯಾನೋ ಮತ್ತು 17ನೇ ನಿಮಿಷದಲ್ಲಿ ಸ್ಯಾಂಚೆಜ್ ಬಾರಿಸಿದ ಗೋಲಿನಿಂದ ಪರಾಗ್ವೆ ಮುನ್ನಡೆ ಸಾಧಿಸಿತು.

ಅಷ್ಟೇ ಉತ್ತಮವಾಗಿ ಆಡುತ್ತಿದ್ದ ಮಾಲಿ 20 ಮತ್ತು 34 ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸಿ ಸರಿಸಮ ಮಾಡಿಕೊಂಡಿತು. ಎರಡೂ ತಂಡಗಳು ಸರಿಸಮ ಹೋರಾಟ ತೋರಿದವು. ಆದರೆ, 55ನೇ ನಿಮಿಷದಲ್ಲಿ ರೋಡ್ರಿಗ್ಸ್ ಬಾರಿಸಿದ ಗೋಲಿನಿಂದ ಗೆಲುವಿನ ಹಾರ ಧರಿಸಿತು.

Story first published: Wednesday, January 3, 2018, 10:06 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+