ಭಾರತದಲ್ಲಿ ನಡೆಯುವ U-17 ಮಹಿಳಾ ಫೀಫಾ ವಿಶ್ವಕಪ್ ವೇಳಾಪಟ್ಟಿ ಪ್ರಕಟ

ನವದೆಹಲಿ, ಮೇ 12: ಕೊರೊನಾವೈರಸ್ ಕಾರಣದಿಂದಾಗಿ ಭಾರತದಲ್ಲಿ ನಡೆಯಲಿದ್ದ ಅಂಡರ್ 17 ಮಹಿಳೆಯರ ಫೀಫಾ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿತ್ತು. ಈ ಪ್ರತಿಷ್ಠಿತ ಟೂರ್ನಿಗೆ ಬದಲಿ ದಿನಾಂಕ ನಿಗದಿಯಾಗಿದೆ. ಮಂಗಳವಾರ (ಮೇ 12) ಫೀಫಾ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನಿಜವಾಗಿ ಅಂಡರ್ 17 ಮಹಿಳೆಯರ ಫೀಫಾ ವಿಶ್ವಕಪ್ ಟೂರ್ನಿ 2020ರ ನವೆಂಬರ್ 2ರಿಂದ 21ರೊಳಗೆ ನಡೆಯಬೇಕಿತ್ತು. ಕೊರೊನಾ ಕಾರಣ ಪಂದ್ಯಾಟವನ್ನು 2021ಕ್ಕೆ ಮುಂದೂಡಲಾಗಿದೆ. ಮುಂದಿನ ವರ್ಷ ಫೆಬ್ರವರಿ 17ರಿಂದ ಮಾರ್ಚ್ 7ರ ವರೆಗೆ ಟೂರ್ನಿ ನಡೆಯಲಿದೆ.
ಪ್ರತಿಷ್ಠಿತ ಟೂರ್ನಿ ನಿರ್ದಿಷ್ಟ ವಯೋಮಾನದವರಿಗಾಗಿ ಇರುವುದರಿಂದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮೂಲ ಅರ್ಹತೆಯ ಮಾನದಂಡವನ್ನು ಫೀಫಾ ವಿಧಿಸಿದೆ. '2003ರ ಜನವರಿ 1ರ ನಂತರ, 2005ರ ಡಿಸೆಂಬರ್ 31ರ ಒಳಗೆ ಜನಿಸಿದವರು ಮಾತ್ರ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದು,' ಎಂದು ಫೀಫಾ ಹೇಳಿದೆ.
ಭಾರತದ ಐದು ಬೇರೆ ಬೇರೆ ತಾಣಗಳಲ್ಲಿ ಟೂರ್ನಿ ನಡೆಯಲಿದೆ. ಒಟ್ಟು 16 ರಾಷ್ಟ್ರಗಳು ಟ್ರೋಫಿಗಾಗಿ ಸೆಣಸಾಡಲಿವೆ. ಅಂಡರ್ 17 ಮಹಿಳೆಯರ ಫೀಫಾ ವಿಶ್ವಕಪ್‌ನ ಸದ್ಯದ ಚಾಂಪಿಯನ್ ಪಟ್ಟ ಸ್ಪೇನ್ ಹೆಸರಿನಲ್ಲಿದೆ. ನಾರ್ತ್ ಕೊರಿಯಾ ಒಟ್ಟಿಗೆ 2 ಬಾರಿ ಟ್ರೋಫಿ ಗೆದ್ದು ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications