ನಾಕೌಟ್ ಸುತ್ತಿಗೆ ಬ್ರೆಜಿಲ್ ಎಂಟ್ರಿ, ಚಿಲಿ ಜತೆ ಫೈಟ್
ಬ್ರೆಸಿಲಿಯಾ, ಜೂ.24:ಫೀಫಾ ವಿಶ್ವಕಪ್ ಟೂರ್ನಿಯ ಎ ಗುಂಪಿನ ಅಗ್ರಸ್ಥಾನಿಯಾಗಿ ಬ್ರೆಜಿಲ್ ತಂಡ 16ರ ಹಂತ ತಲುಪಿದೆ. ಕ್ಯಾಮರೂನ್ ತಂಡವನ್ನು ನೇಮಾರ್ ತಂಡ 1-4 ಅಂತರದಿಂದ ಸುಲಭವಾಗಿ ಸೋಲಿಸಿ ವಿಜಯೋತ್ಸವ ಆಚರಿಸಿದೆ.
ನೇಮಾರ್ ಎರಡು ಗೋಲು ದಾಖಲಿಸಿದರೆ, ಫ್ರೆಡ್ ಹಾಗೂ ಫೆರ್ನಾಂಡಿನೊ ತಲಾ ಒಂದು ಗೋಲು ದಾಖಲಿಸಿ ಪ್ರಾಬಲ್ಯ ಮೆರೆದರು. ಕ್ಯಾಮರೂನ್ ಒಂದು ಗೋಲು ಮಾತ್ರ ದಾಖಲಿಸಿ ಸೋತು ಸುಣ್ಣವಾಯಿತು.[ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?]
ಮೆಕ್ಸಿಕೊ ತಂಡದ ವಿರುದ್ಧ ಡ್ರಾ ಮಾಡಿಕೊಂಡಿದ್ದ ಬ್ರೆಜಿಲ್ ಎರಡು ಪಂದ್ಯಗಳನ್ನು ಗೆದ್ದು ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ನಾಕೌಟ್ ಹಂತದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ. [ಚಿಲಿ ಗೆದ್ದ ಖುಷಿಯಲ್ಲಿ 'ಮ್ಯಾರಥಾನ್' ಸಂಭೋಗ]
ಲೀಗ್ ಹಂತದ ನಂತರ ಎ ಗುಂಪು
* ಬ್ರೆಜಿಲ್ : 3 ಪಂದ್ಯದಲ್ಲಿ 2 ಗೆಲುವು, 1 ಡ್ರಾ, 7 ಪರ ಗೋಲು, 2 ವಿರುದ್ಧ ಗೋಲು, ಅಂಕ 7
* ಮೆಕ್ಸಿಕೋ : 3 ಪಂದ್ಯದಲ್ಲಿ 2 ಗೆಲುವು, 1 ಡ್ರಾ, 4 ಪರ ಗೋಲು, 1 ವಿರುದ್ಧ ಗೋಲು, ಅಂಕ 7
* ಕ್ರೊವೇಷಿಯಾ: 3 ಪಂದ್ಯದಲ್ಲಿ 1 ಗೆಲುವು, 2 ಸೋಲು, 6 ಪರ ಗೋಲು, 6 ವಿರುದ್ಧ ಗೋಲು, ಅಂಕ 3
* ಕ್ಯಾಮರೂನ್ : 3 ಪಂದ್ಯದಲ್ಲಿ 3 ಸೋಲು, 1 ಪರ ಗೋಲು, 9 ವಿರುದ್ಧ ಗೋಲು, ಅಂಕ 0
ಬ್ರೆಜಿಲ್ ಹಾಗೂ ಮೆಕ್ಸಿಕೋ ಸಮಾನ ಅಂಕಗಳನ್ನು ಗಳಿಸಿದ್ದರೂ ಪರ ಹಾಗೂ ವಿರುದ್ಧ ಗೋಲುಗಳ ಅಂತರದ ಗಣನೆಯಂತೆ ಬ್ರೆಜಿಲ್ ಗುಂಪಿನ ಅಗ್ರಸ್ಥಾನ ಪಡೆದುಕೊಂಡು ಮುಂದಿನ ಹಂತಕ್ಕೇರಿದೆ.

ಮೊದಲ ವಿಶ್ವಕಪ್ ನಲ್ಲೇ ನೇಮಾರ್ ಮಸ್ತ್ ಶೋ
ಮೊದಲ ವಿಶ್ವಕಪ್ ನಲ್ಲೇ ನೇಮಾರ್ ಸಕತ್ ಪ್ರದರ್ಶನ ನೀಡುತ್ತಿದ್ದು ನಾಲ್ಕು ಗೋಲು ಗಳಿಸಿದ್ದಾರೆ. ಈ ಪಂದ್ಯದಲ್ಲಿ 17ನೆ ನಿಮಿಷ ಹಾಗೂ 35ನೇ ನಿಮಿಷದಲ್ಲಿ ನೇಮಾರ್ ಗೋಲು ಗಳಿಸಿ ಮುನ್ನಡೆ ತಂದು ಕೊಟ್ಟರು.
ಮೊದಲ ಗೋಲಿಗೆ ಲೂಯಿಸ್ ಗುಸ್ಟವೋ ಪಾಸ್ ನೀಡಿದರೆ ಎರಡನೇ ಗೋಲಿಗೆ ಮಾರ್ಸೆಲೋ ಪಾಸ್ ನೀಡಿದ್ದನ್ನು ಬಾರ್ಸಿಲೋನದ ಸ್ಟಾರ್ ಆಟಗಾರ ಗೋಲಾಗಿಸಿದರು.

ಮತ್ತೆರಡು ಗೋಲು, ಕ್ಯಾಮರೂನ್ ಕಂಗಾಲು
ಡೇವಿಡ್ ಲೂಯಿಸ್ ಪಾಸ್ ಪಡೆದು ಫ್ರೆಡ್ ಪಂದ್ಯದ 49ನೇ ನಿಮಿಷದಲ್ಲಿ ಗೋಲು ಹೊಡೆದು ಗೋಲಿನ ಬರ ನೀಗಿಸಿಕೊಂಡರು. ಅಂತಿಮವಾಗಿ ಫರ್ನಾಂಡಿನ್ಹೋ ಅವರು ಆಸ್ಕರ್ ಸಹಾಯದಿಂದ ಪಂದ್ಯದ 84ನೇ ನಿಮಿಷ ಮತ್ತೊಂದು ಗೋಲು ಗಳಿಸಿ ಭರ್ಜರಿ ಜಯ ತಂದಿತ್ತರು.

ಅರಂಭದಲ್ಲಿ ಇದ್ದ ಶೂರತ್ವ ನಂತರ ಮಾಯ
ಕ್ಯಾಮರೂನ್ ಆಟಗಾರರು ಪಂದ್ಯದ 26ನೇ ನಿಮಿಷದಲ್ಲೆ 1-1ರ ಗೋಲು ಸಮನಾಗಿಸಿ ಕುಣಿದಾಡಿದರು. ಆದರೆ, ಆರಂಭದಲ್ಲಿದ್ದ ಶೂರತ್ವ ನಂತರ ಮಾಯವಾಯಿತು. ಕ್ಯಾಮರೂನ್ ಪರ ಜೋ ಮಾಟಿಪ್ ಅವರು ಅಲಾನ್ ಯಾನ್ ಪಾಸನ್ನು ಗೋಲಾಗಿಸಿದ್ದರು.

ಬ್ರೆಜಿಲ್ ಅಭಿಮಾನಿಗಳಿಗೆ ಭರಪೂರ ರಂಜನೆ
ಪಂದ್ಯದ 71ನೇ ನಿಮಿಷದ ತನಕ ಕಣದಲ್ಲಿದ್ದ ಸ್ಟಾರ್ ಆಟಗಾರ ನೇಮಾರ್ ಎರಡು ಗೋಲು ಗಳಿಸಿದ್ದಲ್ಲದೆ ಅದ್ಭುತ ಆಟ ಪ್ರದರ್ಶಿಸಿದರು. ಒಟ್ಟಾರೆ ಬ್ರೆಜಿಲ್ ಅಭಿಮಾನಿಗಳಿಗೆ ಭರಪೂರ ರಂಜನೆ ಸಿಕ್ಕಿತು.

ಬ್ರೆಜಿಲ್ -ಕ್ಯಾಮರೂನ್ ಪಂದ್ಯದ ಅಂಕಿ ಅಂಶ
ಕ್ಯಾಮರೂನ್ vs ಬ್ರೆಜಿಲ್
1 ಶಾಟ್ ಆನ್ ಟಾರ್ಗೆಟ್ 9
45% ಚಂಡಿನ ಹಿಡಿತ 55%
6 ಕಾರ್ನರ್ 7
14 ಫೌಲ್19
1 ಆಫ್ ಸೈಡ್3
3 ಬದಲಿ ಆಟಗಾರರು3
1 ಹಳದಿ ಕಾರ್ಡ್ 0

16ರ ಹಂತದಲ್ಲಿ ರೋಚಕ ಪಂದ್ಯ
16ರ ಹಂತದಲ್ಲಿ ರೋಚಕ ಪಂದ್ಯಗಳು ಕಾದಿದ್ದು, ಬ್ರೆಜಿಲ್ ಮೊದಲ ಪಂದ್ಯದಲ್ಲಿ ಚಿಲಿಯನ್ನು ಎದುರಿಸಲಿದೆ. ಕೊನೆ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಚಿಲಿ 2-0 ಅಂತರದಿಂದ ಸೋಲು ಕಂಡಿರುವ ಕಾರಣ ಬ್ರೆಜಿಲ್ ವಿರುದ್ಧ ಸೆಣಸಬೇಕಾಗಿದೆ.
ನೆದರ್ಲೆಂಡ್ ವಿರುದ್ಧ ಮೆಕ್ಸಿಕೋ ಸೆಣಸಲಿದೆ. ಕ್ರೊವೆಷಿಯಾ ವಿರುದ್ಧ ಮೆಕ್ಸಿಕೋ 1-3 ಅಂತರದ ಗೆಲುವು ದಾಖಲಿಸಿದೆ.

100ನೇ ಪಂದ್ಯದಲ್ಲಿ 100ನೇ ಗೋಲು
ಎರಡನೇ ಗೋಲು ದಾಖಲಿಸುತ್ತಿದ್ದಂತೆ ವಿಶ್ವಕಪ್ ನಲ್ಲಿ ಸಾರ್ವಕಾಲಿಕ ಹೆಚ್ಚು ಗೋಲು ದಾಖಲಿಸಿದ ಬ್ರೆಜಿಲ್ ವೀರರ ಪಟ್ಟಿಗೆ ನೇಮಾರ್ ಸೇರ್ಪಡೆಗೊಂಡರು.ಬ್ರೆಜಿಲ್ಲಿನ 100ನೇ ಪಂದ್ಯದಲ್ಲಿ 100ನೇ ಗೋಲು ದಾಖಲಿಸಿದ ಕೀರ್ತಿಗೂ ಲಭಿಸಿತು.

ಬ್ರೆಜಿಲ್ಲಿನ ಅತ್ಯಧಿಕ ಗೋಲು ದಾಖಲೆ ವೀರ
ಪೀಲೆ, ಜಿಕೋ, ರೊನಾಲ್ಡೋ, ರೊಮಾರಿಯೋ, ಬೆಬೆಟೋ ನಂತರದ ಸ್ಥಾನದಲ್ಲಿ ನೇಮಾರ್ ಇದ್ದಾರೆ. 22 ವರ್ಷದ ನೇಮಾರ್ 52 ಪಂದ್ಯಗಳಿಂದ 35 ಗೋಲು ದಾಖಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications