ರೂನಿ ಗೋಲು ಹೊಡೆದ್ರು ಇಂಗ್ಲೆಂಡ್ ಗೆಲ್ಲಲಿಲ್ಲ
ಸಾವಾ ಪೊಲೋ, ಜೂ.20: ಪ್ರಪ್ರಥಮ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡಿನ ಸ್ಟಾರ್ ಆಟಗಾರ ವೇಯ್ನ್ ರೂನಿ ಗೋಲು ಗಳಿಸಿದ ಸಂಭ್ರಮ ಆಂಗ್ಲರಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಡಿ ಗುಂಪಿನ ಪಂದ್ಯದಲ್ಲಿ ಹಳೆ ಹುಲಿ ಉರುಗ್ವೆ ತಂಡ ಆಂಗ್ಲರನ್ನು 2-1 ಅಂತರದಿಂದ ಸೋಲಿಸಿ ಜಯದ ನಗೆ ಬೀರಿದೆ.
ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಲಿವರ್ ಪೂಲ್ ಪರ ಆಡುವ 30 ಕ್ಕೂ ಅಧಿಕ ಗೋಲು ದಾಖಲಿಸಿ ಉತ್ತಮ ಲಯದಲ್ಲಿರುವ ಲೂಯಿಸ್ ಸ್ವರೇಜ್ ಉರುಗ್ವೆ ತಂಡದ ಪಾಲಿಗೆ ಆಪದ್ಭಾಂದವ ಎನಿಸಿದರು. ಗಾಯದ ಸಮಸ್ಯೆಯಿಂದ ಕೋಸ್ಟರಿಕಾ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ವರೇಜ್ ತನ್ನ ತಂಡಕ್ಕೆ ಮೊದಲ ಜಯ ದೊರಕಿಸಿಕೊಟ್ಟರು. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]
ಈ ಮೂಲಕ ಡಿ ಗುಂಪಿನಿಂದ ಮುಂದಿನ ಹಂತಕ್ಕೆ ಹೋಗುವ ತಂಡದ ಬಗ್ಗೆ ಭಾರಿ ಕುತೂಹಲ ಉಂಟಾಗಿದೆ. ಕೋಸ್ಟರಿಕಾ ಮೊದಲ ಪಂದ್ಯದಲ್ಲಿ ಉರುಗ್ವೆ ಮೇಲೆ 3-1 ಅಂತರದ ಗೆಲುವು ಸಾಧಿಸಿದೆ.[ಪೂನಂಗೂ ಫುಟ್ಟಾಲ್ ಫೀವರ್, ಬಿಕಿನಿ ಡ್ಯಾನ್ಸ್]
ಪಂದ್ಯದ 39ನೇ ನಿಮಿಷದಲ್ಲಿ ಕವಾನಿ ಕೊಟ್ಟ ಪಾಸ್ ಅನ್ನು ಸ್ವರೇಜ್ ಸುಲಭವಾಗಿ ಗೋಲಾಗಿಸಿದರು. ವೇಯ್ನ್ ರೂನಿ ಪಂದ್ಯದ 75ನೇ ನಿಮಿಷದಲ್ಲಿ ಸಮ ಮಾಡಿದರು. ಆದರೆ, ನಂತರದ ಹತ್ತು ನಿಮಿಷದಲ್ಲಿ ಸ್ವರೇಜ್ ಮತ್ತೊಮ್ಮೆ ಗೋಲು ಗಳಿಸಿ ತಂಡಕ್ಕೆ ಜಯ ತಂದಿತ್ತರು. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ 1-2 ಅಂತರದಲ್ಲಿ ಸೋಲುಂಡಿದೆ.

ಇಂಗ್ಲೆಂಡ್ ಭವಿಷ್ಯ ಕಷ್ಟಕರ ಎನ್ನಬಹುದು
ಜೂ.24ರ ಇಟಲಿ ಹಾಗೂ ಉರುಗ್ವೆ ನಡುವಿನ ಪಂದ್ಯ ಕುತೂಹಲ ಕೆರಳಿಸಿದ್ದು, ಈ ಪಂದ್ಯದ ಫಲಿತಾಂಶದ ಮೇಲೆ ಇಂಗ್ಲೆಂಡ್ ಭವಿಷ್ಯ ನಿಂತಿದೆ. ಕೋಸ್ಟರಿಕಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಇಂಗ್ಲೆಂಡ್ ನಂತರ ಆಡಲಿದೆ. ಬಹುತೇಕ ಇಂಗ್ಲೆಂದ್ ಮುಂದಿನ ಹಂತ ತಲುಪುವುದು ಕಷ್ಟಕರ ಎನ್ನಬಹುದು.

ಆಪದ್ಭಾಂದವ ಲೂಯಿಸ್ ಸ್ವರೇಜ್
ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಲಿವರ್ ಪೂಲ್ ಪರ ಆಡುವ 30 ಕ್ಕೂ ಅಧಿಕ ಗೋಲು ದಾಖಲಿಸಿ ಉತ್ತಮ ಲಯದಲ್ಲಿರುವ ಲೂಯಿಸ್ ಸ್ವರೇಜ್ ಉರುಗ್ವೆ ತಂಡದ ಪಾಲಿಗೆ ಆಪದ್ಭಾಂದವ ಎನಿಸಿದರು

ಉರುಗ್ವೆ ತಂಡ ಜಯದ ನಗೆ ಬೀರಿದೆ
ಡಿ ಗುಂಪಿನ ಪಂದ್ಯದಲ್ಲಿ ಹಳೆ ಹುಲಿ ಉರುಗ್ವೆ ತಂಡ ಆಂಗ್ಲರನ್ನು 2-1 ಅಂತರದಿಂದ ಸೋಲಿಸಿ ಜಯದ ನಗೆ ಬೀರಿದೆ.

ಉರುಗ್ವೆ ತಂಡದ ಕವಾನಿ ಉತ್ತಮ ಆಟ
ಪಂದ್ಯದ 39ನೇ ನಿಮಿಷದಲ್ಲಿ ಕವಾನಿ ಕೊಟ್ಟ ಪಾಸ್ ಅನ್ನು ಸ್ವರೇಜ್ ಸುಲಭವಾಗಿ ಗೋಲಾಗಿಸಿದರು.

ಪಂದ್ಯದಲ್ಲಿ ರೂನಿಗೆ ಲಕ್ ಇರಲಿಲ್ಲ
ಇಂಗ್ಲೆಂಡಿನ ಸ್ಟಾರ್ ಆಟಗಾರ ರೂನಿ ಅವರು ಕನಿಷ್ಠ ಮೂರು ಗೋಲಾದರೂ ಹೊಡೆಯುವ ಅವಕಾಶ ಸ್ವಲ್ಪದರಲ್ಲೇ ಮಿಸ್ ಆಯಿತು. ರೂನಿಗೆ ಲಕ್ ಇರಲಿಲ್ಲ. ಈ ಚಿತ್ರದಲ್ಲಿ ರೂನಿ ಮಾಡಿದ ಹೆಡ್ ಗೋಲ್ ಪೋಸ್ಟ್ ಗೆ ತಾಗಿ ಹೊರ ಬಿತ್ತು. ಉರುಗ್ವೆ ಡಿಫೆಂಡರ್ ಮಾರ್ಟಿನ್ ಕಾಸೆರೆಸ್ ಕೂಡಾ ನೋಡಬಹುದು ಚಿತ್ರ ಪಿಟಿಐ

ಉರುಗ್ವೆ ಆಟಗಾರರಿಂದ ಬಿರುಸಿನ ಆಟ
ಉರುಗ್ವೆ ಆಟಗಾರರಿಂದ ಬಿರುಸಿನ ಆಟ ಕಂಡು ಬಂದಿತು.ಉರುಗ್ವೆಯ ಮಾರ್ಟಿನ್ ಕಾಸಿರೆಸ್ ಹಾಗೂ ಇಂಗ್ಲೆಂಡಿನ ಜೋರ್ಡನ್ ಹೆಂಡರ್ಸನ್ ಬಾಲಿಗಾಗಿ ಪೈಪೋಟಿ ನಡೆಸಿದ್ದಾರೆ.

ನೆಲಕ್ಕೆ ಬಿದ್ದ ವೇಯ್ನ್ ರೂನಿ
ನೆಲಕ್ಕೆ ಬಿದ್ದ ವೇಯ್ನ್ ರೂನಿ ಸುತ್ತಲೂ ಉರುಗ್ವೆ ಆಟಗಾರರು ಹಿಂಬದಿಯಲ್ಲಿ ಕವಾನಿ

ಲೂಯಿಸ್ ಸ್ವರೇಜ್ ಉರುಗ್ವೆ ತಂಡ ಸ್ಟಾರ್
ಲೂಯಿಸ್ ಸ್ವರೇಜ್ ಉರುಗ್ವೆ ತಂಡ ಸ್ಟಾರ್ ಮೊದಲ ಗೋಲು ಹೊಡೆದ ಸಂಭ್ರಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications