Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರಾನ್ ಸ್ಟ್ರೈಕರ್ 23 ವರ್ಷಕ್ಕೆ ದಿಢೀರ್ ನಿವೃತ್ತಿ ಘೋಷಣೆ

FIFA WC 2018: Irans Sardar Azmoun retires after fans abuse and mother health issues

ಮಾಸ್ಕೋ, ಜೂನ್ 29: ಇರಾನ್ ತಂಡದ ಪ್ರಮುಖ ಸ್ಟ್ರೈಕರ್ ಸರ್ದಾರ್ ಅಝಮೌನ್ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಫಿಫಾ ವಿಶ್ವಕಪ್​ನಿಂದ ಇರಾನ್ ತಂಡ ಹೊರಬಿದ್ದ ಬಳಿಕ ನಿವೃತ್ತಿ ಘೋಷಿಸಿದ್ದರು.

ಫಿಫಾ ವಿಶ್ವಕಪ್​ 2018ಗೆ ಇರಾನ್​ ತಂಡ ಮೊದಲ ಪಂದ್ಯ ಗೆದ್ದು ಭರ್ಜರಿಯಾಗಿ ಎಂಟ್ರಿ ಕೊಟ್ಟರೂ ಉಳಿದ ಪಂದ್ಯಗಳಲ್ಲಿ ಒಂದು ಸೋತು ಒಂದು ಡ್ರಾ ಮಾಡಿಕೊಂಡು, ಟೂರ್ನಮೆಂಟ್ ನಿಂದ ಹೊರ ನಡೆದಿದೆ.

ಉತ್ತಮ ಫಾರ್ಮ್​ನಲ್ಲಿದ್ದ ಇರಾನಿನ ಸ್ಟ್ರೈಕರ್​ ಸರ್ದಾರ್​ ಅಝೌನ್, ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಒಂದೇ ಒಂದು ಗೋಲ್​ಅನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಭಾರಿ ಟೀಕೆಗೆ ಗುರಿಯಾಗಿದ್ದರು. ಅಭಿಮಾನಿಗಳು ಕೂಡಾ ದೂಷಿಸತೊಡಗಿದರು. ಇದೇ ಸಮಯಕ್ಕೆ ಸರ್ದಾರ್ ಅವರ ತಾಯಿಯ ಅನಾರೋಗ್ಯ ಉಲ್ಬಣವಾಯಿತು.

ರಾಷ್ಟ್ರೀಯ ತಂಡಕ್ಕಾಗಿ ಆಡುವುದು ನನ್ನ ಕನಸಾಗಿತ್ತು. ತಂಡಕ್ಕಾಗಿ ಆಡಿರುವುದು ನನ್ನ ಪಾಲಿನ ಹೆಮ್ಮೆಯ ವಿಷಯ. ಆದರೆ, ಈಗ ರಾಷ್ಟ್ರೀಯ ತಂಡದಿಂದ ಹೊರನಡೆಯಬೇಕಾಗಿದೆ. ಇದು ಅನಿವಾರ್ಯ, ತಾಯಿ ಅನಾರೋಗ್ಯದಿಂದ ಚೇತರಿಸಿಕೊಂಡಿಲ್ಲ, ನನ್ನ ಹಾಗೂ ದೇಶದ ಬಗ್ಗೆ ಮಾಡಿದ ಅವಮಾನದಿಂದ ಅವರಿಗೆ ನೋವಾಗಿದೆ. ಮತ್ತೆ ನನಗೆ ಫುಟ್ಬಾಲ್​ನಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು 23 ವರ್ಷ ವಯಸ್ಸಿನ ಅಝಮೌನ್ ಹೇಳಿದ್ದಾರೆ.

Story first published: Friday, June 29, 2018, 15:20 [IST]
Other articles published on Jun 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+