ಫೀಫಾ 2018: ಸ್ಪೇನ್ ಹಾಗೂ ಮೊರಕ್ಕೋ ಆಟ, ಸಮಬಲದಲ್ಲಿ ಅಂತ್ಯ

ಬೆಂಗಳೂರು, ಜೂನ್ 25: ಫೀಫಾ ವಿಶ್ವಕಪ್ 2018ರ ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ಹಾಗೂ ಮೊರಾಕ್ಕೋ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡು ಬಂದಿದೆ.
ಸ್ಪೇನ್ ವಿರುದ್ಧ ಮೊರಕ್ಕೋ ಲೈವ್ ಸ್ಕೋರ್ ಹಾಗೂ ಕಾಮೆಂಟ್ರಿ
ಈ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆದ್ದರೆ ಸ್ಪೇನ್ ತಂಡವು ಬಿ ಗುಂಪಿನಲ್ಲಿ ಪೋರ್ಚುಗಲ್ ಗಿಂತ ಮೇಲಕ್ಕೇರಿ, ಅಗ್ರಸ್ಥಾನ ತಲುಪಲಿದೆ. 16ರ ಹಂತಕ್ಕೇರಲು ಸ್ಪೇನ್ ಹಾಗೂ ಪೋರ್ಚುಗಲ್ ಎರಡು ತಂಡಗಳು ಅರ್ಹವಾಗಿವೆ.
ಪಂದ್ಯದ ಮೊದಲ 20 ನಿಮಿಷದಲ್ಲೇ ಎರಡು ಗೋಲುಗಳು ದಾಖಲಾಗಿವೆ. ಮೊರಕ್ಕೋ ತಂಡದ ಬೌತಾಯಿ ಅದ್ಭುತವಾಗಿ ಮುನ್ನುಗ್ಗಿ 14ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ, ಸ್ಪೇನ್ ತಂಡದ ಇಸ್ಕೋ ಅವರು 19ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿದರು.
ಎರಡನೇ ಅವಧಿಯಲ್ಲಿ ಯೂಸುಫ್ ಎನ್ ನೆಸ್ರಿ 81ನೇ ನಿಮಿಷದಲ್ಲಿ ಗೋಲು ಗಳಿಸಿ, ಮೊರಕ್ಕೋ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಪಂದ್ಯ ಮುಗಿಯಲು ಇನ್ನೇನು ಕೆಲ ನಿಮಿಷಗಳು ಬಾಕಿ ಇರುವಾಗ 90+2 ನಿಮಿಷದಲ್ಲಿ ಆಸ್ಪಾಸ್ ಚಮತ್ಕಾರ ಮಾಡಿದರು. ಚೆಂಡನ್ನು ಹಿಂಗಾಲಿನಿಂದ ತಳ್ಳಿ ಗೋಲು ಬಾರಿಸಿದರು. ಈ ಮೂಲಕ ಪಂದ್ಯ 2-2ರಲ್ಲಿ ಅಂತ್ಯ ಕಂಡಿತು.
ಈ ಗೆಲುವಿನೊಂದಿಗೆ 5 ಅಂಕ ಗಳಿಸಿದರೂ ಗೋಲುಗಳ ಅಂತರದಿಂದ ಸ್ಪೇನ್ ಬಿ ಗುಂಪಿನ ಅಗ್ರಸ್ಥಾನಕ್ಕೇರಿದೆ. 16ರ ಹಂತದಲ್ಲಿ ಸ್ಪೇನ್ (ಬಿ1) ವಿರುದ್ಧ ರಷ್ಯಾ(ಎಬಿ) ಸೆಣಸಲಿದೆ. ಪೋರ್ಚುಗೀಸ್ (ಬಿ2) ವಿರುದ್ಧ ಉರುಗ್ವೆ(ಎ1) ಕಾದಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications