ವಿಶ್ವಕಪ್ 2018 : ರೊನಾಲ್ಡೋ ಕಟ್ಟಿ ಹಾಕಲು ಉರುಗ್ವೆ ಯೋಜನೆ

ಸೋಚಿ, ಜೂನ್ 29: ಫೀಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಜೂನ್ 30ರಿಂದ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ.
ಜೂನ್ 30ರಂದು ಸಿ ಗುಂಪಿನ ವಿಜೇತ ತಂಡ ಹಾಗೂ ಡಿ ಗುಂಪಿನ ರನ್ನರ್ ಅಪ್ ನಡುವೆ ಮೊದಲ ನಾಕೌಟ್ ಪಂದ್ಯ ನಡೆದರೆ, ಎ ಗುಂಪಿನ ಅಗ್ರಸ್ಥಾನಿ ಹಾಗೂ ಬಿ ಗುಂಪಿನ ಎರಡನೇ ಸ್ಥಾನಿ ನಡುವೆ ಎರಡನೇ ಪಂದ್ಯ ನಡೆಯಲಿದೆ.
ಕ್ರಿಶ್ಚಿಯಾನೋ ರೊನಾಲ್ಡೋ, ಕ್ವಾರೆಸ್ಮಾ, ಲೂಯಿಸ್ ಸ್ವಾರೇಜ್, ಕವಾನಿ, ಗಿಮೇನೆಜ್ ಆಟ ನೋಡಲು ಅಭಿಮಾನಿಗಳು ಕಾದಿದ್ದಾರೆ. ಅನುಭವಿ ಕೋಚ್ ಗಳಾದ ಆಸ್ಕರ್ ತಬರೇಜ್ ಹಾಗೂ ಫರ್ನಾಂಡೋ ಸ್ಯಾಂಟೋಸ್ ಯಾವ ರೀತಿ ರಣತಂತ್ರ ಅನುಸರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಪ್ರಮುಖ ಆಟಗಾರರು:
ಉರುಗ್ವೆ-ಲೂಯಿಸ್ ಸ್ವಾರೇಜ್
ವಿಶ್ವಕಪ್ ನಲ್ಲಿ ಕಹಿನೆನಪುಗಳನ್ನು ಹೊತ್ತುಕೊಂಡಿರುವ ಸ್ವಾರೇಜ್ ಗೆ ಈ ಬಾರಿ ಕೂಡಾ ಈಜಿಪ್ಟ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಾಗದೆ ಹೆಣಗಾಡಿದರು. 2010ರಲ್ಲಿ ಹ್ಯಾಂಡ್ ಬಾಲ್, 2014ರಲ್ಲಿ ಕೆಲ್ಲಿನಿಗೆ ಕಚ್ಚಿದ ಪ್ರಸಂಗದ ನಂತರ ಬಾರ್ಸಿಲೋನಾ ಪರ ಉತ್ತಮ ಪ್ರದರ್ಶನ ನೀಡಿರುವ ಸ್ವಾರೇಜ್ ಈ ವಿಶ್ವಕಪ್ ನಲ್ಲಿ ತಂಡಕ್ಕೆ ಆಸರೆಯಾಗಲು ಮುಂದಾಗಿದ್ದಾರೆ. ಒಟ್ಟಾರೆ, ವಿಶ್ವಕಪ್ ನಲ್ಲಿ ಏಳು ಗೋಲು ಬಾರಿಸಿದ್ದಾರೆ.
ಪೋರ್ಚುಗಲ್ : ಕ್ರಿಶ್ಚಿಯಾನೋ ರೋನಾಲ್ಡೊ
ಪೋರ್ಚುಗಲ್ ತಂಡ ಹೆಚ್ಚಾಗಿ ರೋನಾಲ್ಡೊ ಮೇಲೆ ಅವಲಂಬಿತವಾಗಿದೆ. ವಿಶ್ವಕಪ್ ನ ನಾಕೌಟ್ ಹಂತದಲ್ಲಿ ಇಲ್ಲಿ ತನಕ 424 ನಿಮಿಷ ಆಡಿರುವ ರೊನಾಲ್ಡೋ ಒಂದು ಗೋಲು ಗಳಿಸಿಲ್ಲ. ರೋನಾಲ್ಡೋ ಕಟ್ಟಿ ಹಾಕಿದರೆ, ಉರುಗ್ವೆ ಸುಲಭವಾಗಿ ಮುಂದಿನ ಹಂತದ ಕನಸು ಕಾಣಬಹುದು. ಕ್ವಾರೆಸ್ಮಾ, ಗುರೆರೆಯೊ, ಸಿಲ್ವಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications