ಬ್ರೆಜಿಲ್ಲಿಗೆ ಸೀಸರ್ ಬಲ, ಶೂಟೌಟ್ ನಲ್ಲಿ ಚಿಲಿ ಔಟ್
ಬೆಲೊ ಹಾರಿಜಾಂಟೆ(ಬ್ರೆಜಿಲ್), ಜೂ.29 : ಐದು ಬಾರಿ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ಅವರು ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ತಲುಪಿದೆ. ಚಿಲಿಗೆ ವಿರೋಚಿತ ಸೋಲು ದಕ್ಕಿದೆ. ಪೆನಾಲ್ಟಿ ಶೂಟೌಟ್ ನಲ್ಲಿ ಬ್ರೆಜಿಲ್ ತಂಡ 3-2 ಗೋಲುಗಳ ಅಂತರದಲ್ಲಿ ಚಿಲಿಯನ್ನು ಸೋಲಿಸಿದೆ.
ಕ್ಷಣಕ್ಷಣಕ್ಕೂ ಪ್ರೇಕ್ಷಕರ ಎದೆ ಬಡಿತವನ್ನು ಹೆಚ್ಚಿಸಿದ ಈ ಪಂದ್ಯದಲ್ಲಿ ವಿಜಯಲಕ್ಷ್ಮಿ ಚಂಚಲೆಯಾಗಿ ಅತ್ತಿತ್ತ ಸಾಗುತ್ತಿದ್ದಳು. ಬ್ರೆಜಿಲ್ಲಿನ ಗೋಲಿ ಸೀಸರ್ ಬಲದಿಂದ ಪೆನಾಲ್ಟಿ ಶೂಟೌಟ್ ಸೇರಿದಂತೆ ಬ್ರೆಜಿಲ್ ತಂಡ ಒಟ್ಟಾರೆ 4-3 ಅಂತರದಲ್ಲಿ ಜಯ ದಾಖಲಿಸಿತು.
ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲುಗಳನ್ನು ಗಳಿಸಿ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಅವಧಿಯಲ್ಲೂ ಗೋಲು ದಾಖಲಿಸಲು ಸಾಧ್ಯವಾಗದ ಕಾರಣ ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಭೇಕಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ಸಿಕ್ಕ ಐದು ಅವಕಾಶವನ್ನು ಬ್ರೆಜಿಲ್ ಮೂರು ಗೋಲು ದಾಖಲಿಸಿದರೆ, ಚಿಲಿ ನಾಲ್ಕು ಅವಕಾಶದಲ್ಲಿ 2 ಗೋಲು ಗಳಿಸಿ ಸೊಲೊಪ್ಪಿಕೊಂಡಿತು.

ನೇಮಾರ್ ಕಮಾಲ್ ನಡೆಯಲಿಲ್ಲ
ಪಂದ್ಯದ ಆರಂಭದಲ್ಲೇ ಕಾಲಿಗೆ ಪೆಟ್ಟು ಮಾಡಿಕೊಂಡ ನೇಮಾರ್ ಗೋಲು ಗಳಿಕೆಯ ಯಾವ ಪ್ರಯತ್ನವೂ ಸಫಲವಾಗಲಿಲ್ಲ.

ಬ್ರೆಜಿಲ್ಲಿಗೆ ಮುನ್ನಡೆ ಸಿಕ್ಕ ಕ್ಷಣ
ಡೇವಿಡ್ ಲೂಯಿಜ್ 18ನೇ ನಿಮಿಷದಲ್ಲಿ ಥಿಯಾಗೋ ಸಿಲ್ವ ಕೊಟ್ಟ ಪಾಸನ್ನು ಗೋಲಾಗಿಸಿ ಬ್ರೆಜಿಲ್ ಗೆ ಮುನ್ನಡೆ ದೊರಕಿಸಿಕೊಟ್ಟರು.

ಸಮಬಲ ಸಾಧಿಸಿದ ಚಿಲಿ
ಬ್ರೆಜಿಲ್ ಮುನ್ನಡೆ ಸಾಧಿಸಿದ 14 ನಿಮಿಷದ ನಂತರ ಚಿಲಿಯ ವರ್ಗಾಸ್ ನೆರವಿನಿಂದ ಅಲೆಕ್ಸಿಸ್ ಸ್ಯಾಂಚೇಜ್ ಟೂರ್ನಿಯ ಎರಡನೇ ಗೋಲು ಸಾಧಿಸಿ ಪಂದ್ಯಕ್ಕೆ ರೋಚಕತೆ ತಂದರು.

1975ರಿಂದ ಬ್ರೆಜಿಲ್ ಸೋಲು ಕಂಡಿಲ್ಲ
1975ರಿಂದ ಬ್ರೆಜಿಲ್ ತನ್ನ ನೆಲದಲ್ಲಿ ಸೋಲು ಕಂಡಿಲ್ಲ. ಈ ಪಂದ್ಯದಲ್ಲೂ ಪೆನಾಲ್ಟಿ ಶೂಟೌಟ್ ನಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಿದೆ.

ಪೆನಾಲ್ಟಿ ಶೂಟೌಟ್ ರೋಚಕತೆ
ಬ್ರೆಜಿಲ್ ಪರ ಡೇವಿಡ್ ಲೂಯಿಸ್, ಮಾರ್ಸೆಲೊ, ನೇಮಾರ್ ಗೋಲು ದಾಖಲಿಸಿದರೆ, ಚಿಲಿ ಪರ ಚಾರ್ಲ್ಸ್ ಅರಾಂಗ್ವಿಜ್, ಮಾರ್ಸೆಲೊ ಡಿಯಾಜ್ ಮಾತ್ರ ಗೋಲು ಹೊಡೆದರು.

ಬ್ರೆಜಿಲ್ ಗೋಲಿ ಸೀಸರ್ ಈಗ ಹೀರೋ
ಚಿಲಿ ದೇಶದ ಅಲೆಕ್ಸಿಸ್ ಸಾಂಚೇಜ್, ಪಿನಿಲ್ಲ ಹೊಡೆದ ಶೂಟ್ ಗಳನ್ನು ತಡೆದ ಬ್ರೆಜಿಲ್ ಗೋಲಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ನಂತರ ಗೊಂಜಾಲೊ ಜರಾ ಹೊಡೆದ ಚೆಂಡು ತಡೆಯುತ್ತಿದ್ದಂತೆ ಬ್ರೆಜಿಲ್ 4-3 ಅಂತರದ ಜಯ ದಾಖಲಿಸಿತು.

ಹಲ್ಕ್ ಗೆ ಇರಲಿಲ್ಲ ಅದೃಷ್ಟ
ಬ್ರೆಜಿಲ್ಲಿನ ಮುಂಪಡೆ ಆಟಗಾರ ಹಲ್ಕ್ ಗೆ ಅದೃಷ್ಟ ಇರಲಿಲ್ಲ. ನಿಗದಿತ ಅವಧಿಯಲ್ಲೇ ಹಲ್ಕ್ ಗೋಲು ಹೊಡೆದರೂ ಹ್ಯಾಂಡ್ ಬಾಲ್ ಎಂದು ರೆಫ್ರಿ ಗೋಲನ್ನು ನಿರಾಕರಿಸಿಬಿಟ್ಟರು. ದೈತ್ಯದೇಹಿ ಹಲ್ಕ್ ತನ್ನ ಬಲತೋಳು ಹಾಗೂ ಎದೆ ಬಳಸಿ ಚೆಂಡನ್ನು ನೆಲಕ್ಕಿಳಿಸಿಕೊಂಡಿದ್ದು ಕಂಡು ಬಂದಿತ್ತು.

ಚಿಲಿಗೆ ಇರಲಿಲ್ಲ ಅದೃಷ್ಟ
ಗೊಂಜಲೊ ಜರಾ ಹೊಡೆದ ಪೆನಾಲ್ಟಿ ಕಿಕ್ ಗೋಲ್ ಬಾಕ್ಸ್ ಬಾರ್ ಗೆ ಹೊಡೆಯಿತು. ನಿಗದಿತ ಅವಧಿಯ ಎರಡನೇ ಅವಧಿಯಲ್ಲಿ ಸ್ವಲ್ಪದರಲ್ಲೇ ಗೋಲು ತಪ್ಪಿಸಿಕೊಂಡಿದ್ದ ಚಿಲಿ ವಿರೋಚಿತ ಸೋಲು ಸಾಧಿಸಿದೆ.

ಕ್ವಾರ್ಟರ್ ಫೈನಲ್ ಗೆ ಬ್ರೆಜಿಲ್ ಸಿದ್ದತೆ
ಕ್ವಾರ್ಟರ್ ಫೈನಲ್ ಗೆ ಬ್ರೆಜಿಲ್ ಸಿದ್ದವಾಗಿದ್ದು, ಉರುಗ್ವೆಯನ್ನು ಬಗ್ಗುಬಡಿದಿರುವ ಕೊಲಂಬಿಯಾ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications