ಬ್ರೆಜಿಲ್ ಗೆದ್ದರೂ ಕಷ್ಟ, ಖುಷಿಗೇ ಪ್ರಾಣ ಬಿಟ್ಟ
ಬೆಲೊ ಹಾರಿಜಾಂಟೆ(ಬ್ರೆಜಿಲ್), ಜೂ.30: ಐದು ಬಾರಿ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ಅವರು ನಾಕೌಟ್ ಹಂತವನ್ನು ನೇಮಾರ್ ನಂತೆ ಕುಂಟುತ್ತಾ ಗೆದ್ದುಕೊಂಡಿದೆ. ಪೆನಾಲ್ಟಿ ಶೂಟೌಟ್ ನಲ್ಲಿ ಬ್ರೆಜಿಲ್ ಗೆಲ್ಲುವುದನ್ನು ಕಂಡ ಖುಷಿಯಲ್ಲೇ ಅಭಿಮಾನಿಯೊಬ್ಬ ಕುಣಿದು ಕುಪ್ಪಳಿಸಿ ಸಾವನ್ನಪ್ಪಿದ ಘಟನೆ ಜರುಗಿದೆ.
20ನೇ ಫೀಫಾ ವಿಶ್ವಕಪ್ ನ ನಾಕೌಟ್ ಹಂತದ ಮೊದಲ ಪಂದ್ಯದ ಅಂತಿಮ ಹಂತದಲ್ಲಿ ಪಡೆದುಕೊಂಡ ರೋಚಕತೆ ಒಬ್ಬ ಅಭಿಮಾನಿಯನ್ನು ಬಲಿ ತೆಗೆದುಕೊಂಡರೆ, ನೂರಕ್ಕೂ ಅಧಿಕ ಅಭಿಮಾನಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕಾದ ಸಂದರ್ಭ ಒದಗಿ ಬಂದಿತ್ತು.[ನಾಕೌಟ್ ಹಂತದ ವೇಳಾಪಟ್ಟಿ]
ಅತಿಥೇಯ ಬ್ರೆಜಿಲ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ತಲುಪಿತು.ವೀರೋಚಿತ ಸೋಲು ಕಂಡ ಚಿಲಿ ತಂಡದ ಆಟಗಾರರು ಮೈದಾನದಲ್ಲಿ ಕಣ್ಣೀರಿಡುತ್ತಿದ್ದರೆ ಅತ್ತ ಅಭಿಮಾನಿಗಳು ಕೂಡಾ ದುಃಖಕ್ಕೆ ತಮ್ಮ ಕಂಬನಿ ಸೇರಿಸಿದರು, ಪುಣ್ಯಕ್ಕೆ ಬ್ರೆಜಿಲ್ ಫ್ಯಾನ್ಸ್ ರೀತಿ ಎದೆ ಒಡೆದುಕೊಂಡು ಕುಪ್ಪಳಿಸಿ ಕುಸಿಯಲಿಲ್ಲ.[ಪಂದ್ಯದ ವರದಿ ಇಲ್ಲಿದೆ ಓದಿ]
ಪೆನಾಲ್ಟಿ ಶೂಟೌಟ್ ನಲ್ಲಿ ಬ್ರೆಜಿಲ್ ತಂಡ 3-2 ಗೋಲುಗಳ ಅಂತರದಲ್ಲಿ ಚಿಲಿಯನ್ನು ಸೋಲಿಸಿತು. ಕ್ಷಣಕ್ಷಣಕ್ಕೂ ಪ್ರೇಕ್ಷಕರ ಎದೆ ಬಡಿತವನ್ನು ಹೆಚ್ಚಿಸಿದ ಈ ಪಂದ್ಯದ ನಂತರ ಅಭಿಮಾನಿಗಳಿಗೆ ತುರ್ತು ವೈದ್ಯಕೀಯ ನೆರವು ಒದಗಿಸುವುದೇ ಫೀಫಾಗೆ ತಲೆನೋವಗಿ ಬಿಟ್ಟಿತು. ಆದರೆ, ಸೂಕ್ತ ಸಮಯದಲ್ಲಿ ನೂರಕ್ಕೂ ಅಧಿಕ ಅಭಿಮಾನಿಗಳನ್ನು ರಕ್ಷಿಸಿದ ತೃಪ್ತಿ ಆಯೋಜಕರಲ್ಲಿ ಕಂಡು ಬಂದಿತು. ಬ್ರೆಜಿಲ್ ಹಾಗೂ ಚಿಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ ಚಿತ್ರಗಳು ನಿಮ್ಮ ಮುಂದೆ...

ಆನಂದವೇ ಅವರ ಉಸಿರು ನಿಲ್ಲಿಸಿಬಿಟ್ಟಿತು
ಬ್ರೆಜಿಲ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ 69 ವರ್ಷ ವಯಸ್ಸಿನ ಅಭಿಮಾನಿಯೊಬ್ಬರು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ತಕ್ಷಣವೇ ಹೃದಯಾಘಾತವಾಗಿ ಸ್ಥಳದಲ್ಲೆ ಕುಸಿದುಬಿದ್ದಿದ್ದಾರೆ. ಬೆಲೊ ಹಾರಿಜಾಂಟೆ ಮೈದಾನದಲ್ಲಿ ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತನಾಗಿದ್ದಾನೆ.

ನೂರು ಜನರು ಅಸ್ವಸ್ಥ ಅಧಿಕೃತ ಹೇಳಿಕೆ
ನೈಋತ್ಯ ಮಿನಾಸ್ ಗೆರಾಯಸ್ ಪ್ರದೇಶದ ವೈದ್ಯಾಧಿಕಾರಿಗಳ ಪ್ರಕಾರ ಬೆಲೊ ಹಾರಿಜಾಂಟೆಯಿಂದ ಸುಮಾರು 100ಕ್ಕೂ ಅಧಿಕ ಅಭಿಮಾನಿಗಳನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಡಯಾಬಿಟಿಸ್, ರಕ್ತದೊತ್ತಡವಿತ್ತು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಣೆ
ಎಲ್ಲೆಡೆ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದ್ದು, ವೈ ವೈ ಸಾಂಬಾ ಶಾಲೆಯ ಹೊರಗಡೆ ಕಂಡು ಬಂದ ದೃಶ್ಯAP/PTI

ಚಿಲಿ ಫ್ಯಾನ್ಸ್ ಸಂಭ್ರಮದಲ್ಲಿ
ಬ್ರೆಜಿಲ್ ವಿರುದ್ಧ ಚಿಲಿ ತಂಡ ಗೋಲು ಹೊಡೆದಾಗ ಸಂಭ್ರಮಾಚರಣೆಯಲ್ಲಿ ತೊಡಗಿರುವ ಚಿಲಿ ಫ್ಯಾನ್ಸ್, ಸ್ಥಳ: ಕೋಪಾಕಬಾನಾ ಬೀಚ್, ರಿಯೋ ಡಿಜನೈರೋ, ಬ್ರೆಜಿಲ್ AP/PTI

ಪಂದ್ಯಕ್ಕೂ ಮುನ್ನ ಸಾಂಬಾ ನೃತ್ಯ
ಸಾಂಪ್ರದಾಯಿಕ ವೇಷಭೂಷಣ, ಬ್ರೆಜಿಲ್ಲಿನ ಬಾವುಟದ ಹಳದಿ ಹಸಿರು ಬಣ್ಣದ ದಿರಿಸು ಧರಿಸಿ ಸಾಂಬಾ ನೃತ್ಯ ಮಾಡಿದ ಅಭಿಮಾನಿಗಳು. AP/PTI

ಬ್ರೆಜಿಲ್ ಅಭಿಮಾನಿಗಳೆಂದರೆ ಅಚ್ಚುಮೆಚ್ಚು
ಬ್ರೆಜಿಲ್ ಅಭಿಮಾನಿಗಳೆಂದರೆ ವಿಶ್ವದೆಲ್ಲೆಡೆಯ ಪಡ್ಡೆಗಳಿಗೆ ಅಚ್ಚುಮೆಚ್ಚು. ಇದಕ್ಕೂ ಕಾರಣವಿದೆ. ಚಿಲಿ ವಿರುದ್ಧ ಬ್ರೆಜಿಲ್ ತಂಡ ಗೆಲ್ಲುತ್ತಿದ್ದಂತೆ ಅನೇಕ ಮಹಿಳಾ ಅಭಿಮಾನಿಗಳು ತಮ್ಮ ಟೀ ಶರ್ಟ್ ಕಳಚಿ ವೃತ್ತಾಕಾರವಾಗಿ ಅದನ್ನು ಬೀಸುತ್ತಾ ವಿಜಯೋತ್ಸವ ಆಚರಿಸಿದ್ದಾರೆ. ಇದು ಸಾಂಕ್ರಾಮಿಕಗೊಂಡು ಅನೇಕ ಯುವತಿಯರು ಶರ್ಟ್ ಕಳಚಿ ಕುಣಿದಾಡಿದ್ದಾರೆ.

ರೋಚಕ ಕ್ಷಣವನ್ನು ತಾಳ್ಮೆಯಿಂದ ನೋಡಿದ ಫ್ಯಾನ್ಸ್
ರೋಚಕ ಕ್ಷಣವನ್ನು ತಾಳ್ಮೆಯಿಂದ ನೋಡಿದ ಬ್ರೆಜಿಲ್ ಫ್ಯಾನ್ಸ್ ಗಳು ಕಾಣಸಿಗುತ್ತಾರೆ.

ನೇಮಾರ್ ಗೋಲು ಹೊಡೆಯಲಿಲ್ಲ
ನೇಮಾರ್ ಗೋಲು ಹೊಡೆಯಲಿಲ್ಲ ಎಂಬ ಕೊರಗಿದೆ. ಪುಣ್ಯಕ್ಕೆ ಅವನಿಗಾಗಿರುವ ಗಾಯ ಬೇಗ ವಾಸಿಯಾಗಲಿ ಕ್ವಾರ್ಟರ್ ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಲಿ ಎಂದು ಮಹಿಳಾ ಅಭಿಮಾನಿಗಳು ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications