Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಘಾನಾ ವಿರುದ್ಧ ತ್ವರಿತ ಗೋಲು, ಡೆಂಪ್ಸಿ ಗಾನಾ ಬಜಾನಾ

ನಟಾಲ್(ಬ್ರೆಜಿಲ್), ಜೂ.17: ಫೀಫಾ ವಿಶ್ವಕಪ್ ಟೂರ್ನಿಯ ಜಿ ಗುಂಪಿನ ಪಂದ್ಯದಲ್ಲಿ ಯುಎಸ್ಎ ನಾಯಕ ಕ್ಲಿಂಟ್ ಡೆಂಪ್ಸಿ ಹೊಸ ದಾಖಲೆ ಸೃಷ್ಟಿಸಿದರು. ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಘಾನಾ ವಿರುದ್ಧ ಯುಎಸ್ಎ ಆಟಗಾರರು ಗೆದ್ದು ಗಾನಾ ಬಜಾನಾ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತ್ಯಂತ ತ್ವರಿತವಾಗಿ ಗೋಲು ಗಳಿಸಿದ ಸಾಧನೆ ಕ್ಲಿಂಟ್ ಹೆಸರಿಗೆ ಸೇರಿದೆ.

ಯುಎಸ್ಎ ನಾಯಕ ಡೆಂಪ್ಸಿ ಅವರು ಪಂದ್ಯ ಆರಂಭವಾದ 29ನೇ ಸೆಕೆಂಡ್ ಗಳಲ್ಲೇ ಗೋಲು ದಾಖಲಿಸಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅರೇನಾ ಡಾಸ್ ಡುನಾಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಘಾನಾ ವಿರುದ್ಧ ಯುಎಸ್ ಎ 2-1ರ ಜಯ ದಾಖಲಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.[ಜಿ ಗುಂಪಿನ ವೇಳಾಪಟ್ಟಿ]

ಯುಎಸ್ಎ ತಂಡದ ಯಶಸ್ಸಿನ ಹಿಂದೆ ಜರ್ಮನಿಯ ಮಾಜಿ ದಿಗ್ಗಜ ಕ್ಲಿನ್ಸ್ ಮ್ಯಾನ್ ಅವರ ಶ್ರಮ ಇರುವುದು ಎದ್ದು ಕಾಣುತ್ತದೆ. ಕ್ಲಿಂಟ್ ಡೆಂಪ್ಸಿ ಗೋಲಿನ ಮೂಲಕ ಮುನ್ನಡೆ ಪಡೆದ ಯುಎಸ್ಎ ಪಂದ್ಯ ಗೆದ್ದು ಜಿ ಗುಂಪಿನಲ್ಲಿ ಮುಂದಿನ ಹಂತಕ್ಕೇರುವ ಕನಸು ಕಾಣುತ್ತಿದೆ. ಯುಎಸ್ಎ ತನ್ನ ಮುಂದಿನ ಪಂದ್ಯವನ್ನು ಪೋರ್ಚುಗಲ್ ವಿರುದ್ಧ ಜೂ.22 ರ ತಡರಾತ್ರಿ ಆಡಲಿದೆ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

Dempsey scores 5th fastest goal

ಗುಂಪಿನ ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ಪೋರ್ಚುಗಲ್ ಪೈಕಿ ಪೋರ್ಚುಗಲ್ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವುದು ಯುಎಸ್ಎಗೆ ವರದಾನವಾಗಬಲ್ಲುದು.[ಪೋರ್ಚುಗಲ್ ಸೋಲಿನ ಕಥೆ ಓದಿ]

ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ 'ಜಿ'
ಸಮಯ ಆಟಗಾರ (ದೇಶ) ಯಾವ ವಿಶ್ವಕಪ್ ಯಾರ ವಿರುದ್ಧ
11 ಸೆಕೆಂಡುಗಳು
ಹಕಾನ್ ಸುಕೂರ್ (ಟರ್ಕಿ) 2002

ದಕ್ಷಿಣ ಕೊರಿಯಾ

16 ಸೆಕೆಂಡುಗಳು ವಾಕ್ಲಾವ್ ಮಾಸೆಕ್(ಚೆಕೊಸ್ಲೋವಾಕಿಯಾ) 1962 ಮೆಕ್ಸಿಕೋ
25 ಎರ್ನ್ ಸ್ಟ್ ಲೆಹ್ನೆರ್ (ಜರ್ಮನಿ) 1934 ಆಸ್ಟ್ರೀಯಾ
27 ಬ್ರಯಾನ್ ರಾಬ್ಸನ್ 1982 ಫ್ರಾನ್ಸ್
29 ಕ್ಲಿಂಟ್ ಡೆಂಪ್ಸಿ (ಯುಎಸ್ಎ) 2014 ಘಾನಾ
30 ಬರ್ನಾಡ್ ಲಕೊಂಬೆ 1978 ಇಟಲಿ
35 ಎಮಿಲೆ ವೈನಾಂತೆ 1938
ಬೆಲ್ಜಿಯಂ
35 ಅರ್ನೆ ನ್ಯಾಬರ್ಗ್ 1938 ಹಂಗೇರಿ
50 ಫ್ಲೋರಿಯನ್ ಅಲ್ಬರ್ಟ್ 1962 ಬಲ್ಗೇರಿಯಾ
50 ಅಡಾಲ್ಬರ್ಟ್ ದೆಸು 1930 ಪೆರು

ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ತ್ವರಿತವಾಗಿ ಗೋಲು ದಾಖಲಿಸಿದ ವೀರರ ಪಟ್ಟಿಯಲ್ಲಿ ಡೆಂಪ್ಸಿಗೆ ಐದನೇ ಸ್ಥಾನ ಲಭಿಸಿದೆ. ಈ ಬಾರಿ ಡೆಂಪ್ಲಿ ದಾಖಲೆ ಯಾರಾದರೂ ಮುರಿಯುತ್ತಾರಾ? ಕಾದು ನೋಡಬೇಕಿದೆ. ಸದ್ಯಕ್ಕೆ ಇಲ್ಲಿವರೆಗೂ ತ್ವರಿತ ಗೋಲು ದಾಖಲಿಸಿದ ಫುಟ್ಬಾಲಿಗರು ಹಾಗೂ ಅವರ ಯಾವ ತಂಡದ ವಿರುದ್ಧ ಎಂಬುದರ ಪಟ್ಟಿ ಮುಂದಿದೆ ನೋಡಿ

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+