ವಿಶ್ವಕಪ್ : ಗೋಲ್ಡನ್ ಬಾಲ್ ಯಾರ ಕೈ ಸೇರಲಿದೆ?
ರಿಯೋ ಡಿಜನೈರೋ, ಜು.12: ವಿಶ್ವಕಪ್ ಫುಟ್ಬಾಲ್‌ನಲ್ಲಿ ಅತ್ಯುತ್ತಮ ಆಟಗಾರರಿಗೆ ನೀಡಲಾಗುವ ಫಿಫಾದ ಅಧಿಕೃತ ಟ್ರೋಫಿ 'ಗೋಲ್ಡನ್ ಬಾಲ್' ಪ್ರಶಸ್ತಿಯ ಸ್ಪರ್ಧೆಗೆ ವಿವಿಧ ತಂಡಗಳ 10 ಮಂದಿ ಸ್ಟಾರ್ ಆಟಗಾರರನ್ನು ನಾಮನಿರ್ದೇಶದ ಮೂಲಕ ಆಯ್ಕೆ ಮಾಡಲಾಗಿದೆ.ಈ ಬಾರಿ ಲಿಯೊನೆಲ್ ಮೆಸ್ಸಿ, ಥಾಮಸ್ ಮುಲ್ಲರ್, ನೇಮಾರ್, ಅಯಾನ್ ರಾಬೆನ್ ಪ್ರಶಸ್ತಿಗಾಗಿ ಸೆಣೆಸುತ್ತಿದ್ದಾರೆ.
ಫಿಫಾದ ತಾಂತ್ರಿಕ ಅಧ್ಯಯನ ಸಮಿತಿ ಗೋಲ್ಡನ್ ಬಾಲ್ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನದ ಮೂಲಕ ಆಯ್ಕೆ ಮಾಡುತ್ತದೆ. ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು ಫಿಫಾ ಡಾಟ್ ಕಾಮ್ ಮೂಲಕ ಮತ ಚಲಾಯಿಸಿ ಅಡಿಡಾಸ್ ಚಿನ್ನ, ಬೆಳ್ಳಿ ಮತ್ತು ಕಂಚಿನ ಚೆಂಡು ಪುರಸ್ಕಾರಕ್ಕೆ ಅರ್ಹರನ್ನು ಆಯ್ಕೆ ಮಾಡಲಿದ್ದಾರೆ.[ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?]
ಜುಲೈ 13ರಂದು ಅರ್ಜೆಂಟಿನಾ ಹಾಗೂ ಜರ್ಮನಿ ನಡುವಿನ ಅಂತಿಮ ಹಣಾಹಣಿ ಮುಗಿದ ನಂತರ ಗೋಲ್ಡನ್ ಬಾಲ್, ಗೋಲ್ಡನ್ ಬೂಟ್ ಸೇರಿದಂತೆ ವಿವಿಧ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಈ ಬಾರಿ ನಾಮಾಂಕಣಗೊಂಡಿರುವ ಟಾಪ್ 10 ಆಟಗಾರರು:
1. ಏಂಜೆಲ್ ಡಿ ಮಾರಿಯಾ(ಅರ್ಜೆಂಟಿನಾ)
2. ಮ್ಯಾಟ್ಸ್ ಹಮ್ಮಲ್ಸ್ (ಜರ್ಮನಿ)
3. ಟೋನಿ ಕ್ರೂಸ್ (ಜರ್ಮನಿ)
4. ಫಿಲಿಪ್ ಲಾಮ್ (ಜರ್ಮನಿ)
5. ಜೇವಿಯರ್ ಮ್ಯಾಸ್ಕರಾನೊ(ಅರ್ಜೆಂಟಿನಾ)
6. ಲಿಯೊನೆಲ್ ಮೆಸ್ಸಿ (ಅರ್ಜೆಂಟಿನಾ)
7. ಥಾಮಸ್ ಮುಲ್ಲರ್ (ಜರ್ಮನಿ)
8. ನೇಮಾರ್ (ಬ್ರೆಜಿಲ್)
9. ಅಯಾನ್ ರಾಬೆನ್ (ಹಾಲೆಂಡ್)
10. ಜೇಮ್ಸ್ ರೋಡ್ರಿಗೇಜ್ (ಕೊಲಂಬಿಯಾ)
ಈ ಹಿಂದಿನ ಚಿನ್ನದ ಚೆಂಡು ವಿಜೇತರು [ 2010: ಚಿನ್ನದ ಬೂಟು ಮುಲ್ಲರ್ ಗೆ,ಚೆಂಡು ಫೊರ್ಲಾನ್ ಗೆ]
* 1982 ಸ್ಪೇನ್ : ಪಾಲೊ ರೊಸ್ಸಿ (ಇಟಲಿ)
* 1986 ಮೆಕ್ಸಿಕೋ : ಡಿಯಾಗೋ ಮರಡೋನಾ (ಅರ್ಜೆಂಟಿನಾ)
* 1990 ಇಟಲಿ : ಸಾಲ್ವಟೊರೆ ಶಿಲಾಚಿ(ಇಟಲಿ)
* 1994 ಯುಎಸ್ಎ : ರೊಮಾರಿಯೋ (ಬ್ರೆಜಿಲ್)
* 1998 ಫ್ರಾನ್ಸ್ : ರೊನಾಲ್ಡೋ (ಬ್ರೆಜಿಲ್)
* 2002 ದಕ್ಷಿಣ ಕೊರಿಯಾ/ಜಪಾನ್ : ಓಲಿವರ್ ಖಾನ್ (ಜರ್ಮನಿ)
* 2006 ಜರ್ಮನಿ : ಜಿನಾದಿನ್ ಜಿದಾನೆ (ಫ್ರಾನ್ಸ್)
* 2010 ದಕ್ಷಿಣ ಕೊರಿಯಾ : ಡಿಯಾಗೊ ಫೊರ್ಲಾನ್ (ಉರುಗ್ವೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications