ತುಂಟ ನೆಟ್ಟಿಗರ ಕಣ್ಣು ಮಾರಿಯೋ ಗೆಳತಿ ಮ್ಯಾಲ!
ರಿಯೋ ಡಿ ಜನೈರೋ, ಜು. 14 : ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸಿ ರಾತ್ರೋರಾತ್ರಿ ಹೀರೋ ಆಗಿ ಮೆರೆದಾಡುತ್ತಿರುವ ಜರ್ಮನಿಯ ಯುವ ಆಟಗಾರ ಮಾರಿಯೋ ಗೋಟ್ಜೆ ಮೇಲೆ ಅಭಿಮಾನಿಗಳ, ಮಾಧ್ಯಮದವರ ಮತ್ತು ಇಡೀ ವಿಶ್ವದ ಕಣ್ಣು ನೆಟ್ಟಿದ್ದರೆ, ಫೋಟೋಗ್ರಾಫರುಗಳ ತುಂಟ ಕಣ್ಣು ಮಾತ್ರ ಮಾರಿಯೋನ ಪ್ರೇಯಸಿ ಸುರಸುಂದರಾಂಗಿ ಆನ್ ಕ್ಯಾಥ್ರಿನ್ ಬ್ರೊಮೆಲ್ ಮೇಲೆ ನೆಟ್ಟಿದ್ದವು.
ಮಾಡೆಲ್ ಆಗಿರುವ ಆನ್ ಕ್ಯಾಥ್ರಿನ್ ಕ್ಷಣಮಾತ್ರದಲ್ಲಿ ಮಿಂಚುವ ಕಣ್ಣುಗಳ ಡಾರ್ಲಿಂಗ್ ಆಗಿ ಸ್ಟೇಡಿಯಂನಲ್ಲಿ ಮೆರೆದಾಡಿಬಿಟ್ಟಳು. ಓಡೋಡಿ ಬಂದು ತನ್ನ ಇನಿಯನ ತಬ್ಬಿಕೊಂಡು ಲೊಚಲೊಚನೆ ತುಟಿಗೆ ಮುತ್ತು ಕೊಟ್ಟಿದ್ದು ಚಕಚಕನೆ ಕ್ಯಾಮೆರಾಗಳಲ್ಲಿ ಸೆರೆಯಾದವು. ಇನ್ನು ಟ್ವಿಟ್ಟರುಗಳಲ್ಲಿ ಮಾರಿಯೋ ಗೋಟ್ಜೆಗಿಂತ ಬಳುಕುವ ಬಳ್ಳಿಯಂತಿರುವ ಕ್ಯಾಥ್ರಿನ್‌ಳ ಬಿಕಿನಿ ಚಿತ್ರ ಸೇರಿದಂತೆ ಬಗೆಬಗೆಯ ಚಿತ್ರಗಳು ಹರಿದಾಡುತ್ತಿವೆ. [ಫೀಫಾ ವಿಶ್ವಕಪ್ ಟ್ರೋಫಿಗಳ ವಿಜೇತರು]
ತಮಾಷೆ ಅಂದ್ರೆ, ಗೋಲ್ಡನ್ ಗೋಲು ಹೊಡೆಯುವವರೆಗೆ 22 ವರ್ಷದ ಮಾರಿಯೋ ಯಾರು ಅಂದ್ರೇನೇ ಯಾರಿಗೂ ಗೊತ್ತಿರಲಿಲ್ಲ. ಈಗ ಫೈನಲ್ ನಲ್ಲಿ ಗೋಲು ಹೊಡೆದು ಯುವರಾಜನಂತೆ ಮೆರೆದಾಡುತ್ತಿದ್ದರೂ, ಆತನ ಬಗ್ಗೆ ತಿಳಿಯಲಿಚ್ಛಿಸುವ ನೆಟ್ಟಿಗರು ಸುಂದರಿ ಆನ್ ಕ್ಯಾಥ್ರಿನ್ ಬ್ರೊಮೆಲ್ ಹೆಸರಿನಿಂದ ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ಮಾರಿಯೋ ಹೆಸರಿನ ಬದಲು ಕ್ಯಾಥ್ರಿನ್ ಹೆಸರು ಟ್ರೆಂಡ್ ಆಗುತ್ತಿದೆ.
ಜರ್ಮನಿಯ ಬೇಯರ್ ಮ್ಯೂನಿಚ್ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಮಾರಿಯೋ ಫೈನಲ್‌ನಲ್ಲಿ ಗೋಲು ಹೊಡೆದ ಅತಿಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೋಲು ಹೊಡೆದಿದ್ದು ಮಾರಿಯೋ, ಆದರೆ, ಸಹಜವಾಗಿ ಎಲ್ಲರ ಹುಡುಕಾಟ ಆನ್ ಕ್ಯಾಥ್ರಿನ್ ಬ್ರೊಮೆಲ್ ಮೇಲೆ ಕೇಂದ್ರೀಕೃತವಾಗಿದೆ. ಕ್ಯಾಥ್ರಿನ್‌ಳ ಸೌಂದರ್ಯ ಸೂಸುವ ಚಿತ್ರಗಳು ಟ್ವಿಟ್ಟರಲ್ಲಿ ದಾಂಗುಡಿ ಇಟ್ಟಿದ್ದು ಇದಕ್ಕೆ ಕಾರಣ ಅಂತ ವಿಶೇಷವಾಗಿ ಹೇಳಬೇಕಾಗಿಲ್ಲ.
ಅಷ್ಟಕ್ಕೂ ಈ ಕ್ಯಾಥ್ರಿನ್ ಯಾರು, ಆಕೆಯ ಉದ್ಯೋಗವೇನು, ಅವರಿಬ್ಬರೂ ನಿಜವಾಗಿ ಒಟ್ಟಿಗಿದ್ದಾರಾ ಎಂಬ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಫೀಲ್ಡಲ್ಲಿ ಗೋಲು ಹೊಡೆದು ಮಾರಿಯೋ ಮಿಂಚಿದರೆ, ಫೀಲ್ಡಿನಿಂದ ಹೊರಗೆ ಆತನ ಸುಂದರ ಪ್ರೇಯಸಿ ಆನ್ ಕ್ಯಾಥ್ರಿನ್ ಮಿಂಚುತ್ತಿದ್ದಾಳೆ.
ಗೋಟ್ಜೆ ಯಾರೆಂದು ಯಾರೂ ಹುಡುಕುತ್ತಿಲ್ಲ!
ಫುಟ್ಬಾಲ್ ಪ್ರೇಮಿಗಳು ಗೋಲ್ಡನ್ ಗೋಲ್ ಹೊಡೆದ ಮಾರಿಯೋ ಗೋಟ್ಜೆ ಯಾರೆಂದು ಹುಡುಕುತ್ತಿಲ್ಲ. ಬದಲಾಗಿ ಆತನ ಸುಂದರ ದೇಹದ ಪ್ರೇಯಸಿಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.
ಹೀಗೆ ಮತ್ತೊಂದು ತುಂಟ ಟ್ವೀಟ್
ಗೋಲ್ ಹೊಡೆದ ಮಾರಿಯೋ ತನ್ನ ಹೆಂಡತಿ ಕ್ಯಾಥ್ರಿನ್ ಜೊತೆ ಮನೆಗೆ ಹೋಗುತ್ತಾನೆ. ದೇವರಿಗೆ ಫೆವರಿಟ್ ಅಂತ ಯಾರೂ ಇಲ್ಲ.
ಸಪೂರ ದೇಹದ ಬಿಕಿನಿ ಮಾಡೆಲ್ ಕ್ಯಾಥ್ರಿನ್
ಸಪೂರ ದೇಹದ ಬಿಕಿನಿ ಮಾಡೆಲ್ ಕ್ಯಾಥ್ರಿನ್‌ಳ ಹಲವಾರು ರೋಚಕ ಚಿತ್ರಗಳು ಟ್ವಿಟ್ಟರಲ್ಲಿ ಹರಿದಾಡುತ್ತಿವೆ.
ಹಾಟೆಸ್ಟ್ ಗರ್ಲ್ ಫ್ರೆಂಡ್ ಪ್ರಶಸ್ತಿ ಕ್ಯಾಥ್ರಿನ್‌ಗೆ
ಫುಟ್ಬಾಲ್ ವಿಶ್ವಕಪ್ ನ ಆಟಗಾರರ ಹಾಟೆಸ್ಟ್ ಗರ್ಲ್ ಫ್ರೆಂಡ್ ಪ್ರಶಸ್ತಿ ಮಾರಿಯೋ ಗೋಟ್ಜೆಯ ಗೆಳತಿ ಆನ್ ಕ್ಯಾಥ್ರಿನ್ ಬ್ರೊಮೆಲ್ ಳಿಗೆ ಸಿಗಬೇಕು.
ಆನ್ ಕ್ಯಾಥ್ರಿನ್ ಯಾರೆಂದು ಇಂದು ವಿಶ್ವಕ್ಕೆ ತಿಳಿದಿದೆ
ಆನ್ ಕ್ಯಾಥ್ರಿನ್ ಯಾರೆಂದು ಇಂದು ವಿಶ್ವಕ್ಕೆ ತಿಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications