ಫೀಫಾ ವಿಶ್ವಕಪ್: ಪನಾಮವನ್ನು 3-0 ಅಂತರದಿಂದ ಸೋಲಿಸಿದ ಬೆಲ್ಜಿಯಂ


ಮಾಸ್ಕೋ, ಜೂ. 18: ಬೆಲ್ಜಿಯಂ ಮತ್ತು ಪನಾಮ ನಡುವಿನ ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಬೆಲ್ಜಿಯಂ 3-0 ಅಂತರದ ಗೆಲುವನ್ನು ದಾಖಲಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಸಿಡಿದ ಮೂರು ಗೋಲುಗಳ ನೆರವಿನಿಂದ ಬೆಲ್ಜಿಯಂ ಸುಲಭ ಜಯ ಸಾಧಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಜಿ ಗ್ರೂಪ್ ನ ಈ ಪಂದ್ಯದಲ್ಲಿ ಡ್ರೈಸ್ ಮೆರ್ಟೆನ್ಸ್ ಅವರು 47ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಬೆಲ್ಜಿಯಂಗೆ 1-0 ಮುನ್ನಡೆ ತಂದುಕೊಟ್ಟರು. ಮತ್ತೆ 69ನೇ ನಿಮಿಷದಲ್ಲಿ ಬೆಲ್ಜಿಯಂನ ಲುಕಾಕು ಅವರು ಮತ್ತೊಂದು ಗೋಲ್ ಸಿಡಿಸಿ ಬೆಲ್ಜಿಯಂ ತಂಡದ ಮುನ್ನಡೆಯನ್ನು ದ್ವಿಗುಣ ಗೊಳಿಸಿದರು.
ರಷ್ಯಾದ ಫಿಷ್ಟ್ ಸ್ಟೇಡಿಯಂ ನಲ್ಲಿ ಸೋಮವಾರ ನಡೆದ ಈ ಪಂದ್ಯದ 7ನೇ ನಿಮಿಷದಲ್ಲೇ ಬೆಲ್ಜಿಯಂ ಮೊದಲ ಗೋಲ್ ದಾಖಲಿಸುವುದರಲ್ಲಿತ್ತು. ಆದರೆ ಪನಾಮ ಗೋಲ್ ಕೀಪರ್ ಜೇಮೀ ಪೆನೆಡೋ ಅವರು ಗೋಲ್ ತಡೆದು ಬೆಲ್ಜಿಯಂ ಖಾತೆ ತೆರೆಯುವ ಪ್ರಯತ್ನವನ್ನು ಹಿಮ್ಮೆಟ್ಟಿಸಿದರು.
14ನೇ ನಿಮಿಷದಲ್ಲಿ ಬೆಲ್ಜಿಯಂನ ಥಾಮಸ್ ಮ್ಯುನಿಯರ್ ಅವರ ವಿರುದ್ಧ ಮೊದಲ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇದಾಗಿ 18ನೇ ನಿಮಿಷದಲ್ಲಿ ಪನಾಮದ ಎರಿಕ್ ಡೇವಿಸ್ ವಿರುದ್ಧ ಎರಡನೇ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.
ಇತ್ತಂಡಗಳ ನಡುವೆ ತೀವ್ರ ಕಾದಾಟ ನಡೆಯಿತು. 38ನೇ ನಿಮಿಷದಲ್ಲಿ ಗೋಲ್ ಸಿಡಿಸುವ ಬೆಲ್ಜಿಯಂ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿತು. ಪನಾಮ ಗೋಲ್ ಕೀ ಜೇಮೀ ಪೆನೆಡೋ ಮತ್ತೆ ಅದ್ಭುತವಾಗಿ ಗೋಲ್ ತಡೆದರು.
ಪಂದ್ಯದ ದ್ವಿತೀಯಾರ್ಧದಲ್ಲಿ ಬೆಲ್ಜಿಯಂ 2-0 ಮುನ್ನಡೆಯಲ್ಲಿತ್ತು. ಆದರೆ ಬೆಲ್ಜಿಯಂ ಬಲಾಡ್ಯ ತಂಡವೆನ್ನುವುದಕ್ಕೆ ಸಾಕ್ಷಿಯಾಗಿ 75ನೇ ನಿಮಿಷದಲ್ಲಿ ಲುಕಾಕು ಮತ್ತೊಂದು ಗೋಲ್ ಸಿಡಿಸಿ ಬೆಲ್ಜಿಯಂಗೆ ಭರ್ಜರಿ ಮುನ್ನಡೆ ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications