ಫೀಫಾ ವಿಶ್ವಕಪ್: ಟ್ಯುನೀಷಿಯಾ ವಿರುದ್ಧ ಬೆಲ್ಜಿಯಂಗೆ ಭರ್ಜರಿ ಜಯ

ಮಾಸ್ಕೋ, ಜೂ. 23: ಸ್ಪಾರ್ಟಕ್ ಸ್ಟೇಡಿಯಂನಲ್ಲಿ ನಡೆದ ಜಿ ಗ್ರೂಪಿನ ಬೆಲ್ಜಿಯಂ ಮತ್ತು ಟ್ಯುನೀಷಿಯಾ ತಂಡಗಳ ನಡುವಣ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ 5-2 ಅಂತರದ ಭರ್ಜರಿ ಗೆಲುವು ಸಾಧಿಸಿದೆ. 6ನೇ ನಿಮಿಷದಿಂದ 90 ನಿಮಿಷಗಳ ನಡುವಿನಲ್ಲಿ ಬೆಲ್ಜಿಯಂ ಒಟ್ಟು 5 ಗೋಲ್ ಸಿಡಿಸಿ ಪ್ರಾಬಲ್ಯ ಮೆರೆಯಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
ಬೆಲ್ಜಿಯಂನ ರೊಮೆಲು ಲ್ಯುಕಾಕು ಮತ್ತು ಹಜಾರ್ಡ್ ತಲಾ ಎರಡೆರಡು ಗೋಲ್ ಸಿಡಿಸಿ ಪಂದ್ಯದಲ್ಲಿ ಗಮನ ಸೆಳೆದರು.
6ನೇ ನಿಮಿಷದಲ್ಲಿ ಬೆಲ್ಜಿಯಂನ ಈಡನ್ ಹಜಾರ್ಡ್ ಮೊದಲ ಗೋಲ್ ಬಾರಿಸಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. 16ನೇ ನಿಮಿಷದಲ್ಲಿ ರೊಮೆಲು ಲ್ಯುಕಾಕು ಗೋಲ್ ಬಾರಿಸಿ ಬೆಲ್ಜಿಯಂಗೆ 2-0ಯ ಮುನ್ನಡೆ ಕೊಟ್ಟರು. 18ನೇ ನಿಮಿಷದಲ್ಲಿ ಡೈಲನ್ ಬ್ರಾನ್ ಟ್ಯುನೀಷಿಯಾ ಗೋಲ್ ಖಾತೆ ತೆರೆದರು.
ಪಂದ್ಯದ ದ್ವಿತೀಯಾರ್ಧದಲ್ಲಿ (48ನೇ ನಿಮಿಷ) ಲ್ಯುಕಾಕು ತಮ್ಮ ದ್ವಿತೀಯ ಗೋಲ್ ಕೊಡುಗೆ ನೀಡಿದರು. 51ನೇ ನಿಮಿಷದಲ್ಲಿ ಹಜಾರ್ಡ್ ಅವರೂ ಮತ್ತೊಂದು ಗೋಲ್ ಬಾರಿಸಿದರು. 90ನೇ ನಿಮಿಷದಲ್ಲಿ ಬೆಲ್ಜಿಯಂನ ಮಿಕ್ಕಿ ಬೆಶುವಾಯಿ ಗೋಲ್ ಸಿಡಿಸಿ ತಂಡಕ್ಕೆ 5-1ರ ಮುನ್ನಡೆ ಕೊಟ್ಟರು.
90+3ನೇ ನಿಮಿಷದಲ್ಲಿ ಟ್ಯುನೀಷಿಯಾದ ವಹೀಬಿ ಖಜ್ರಿ ಬಾರಿಸಿದ ಗೋಲ್ ಎದುರಾಳಿಯ ಅಂತರವನ್ನು ಕಿರಿದುಗೊಳಿಸಿತಾದರೂ ಅಂತಿಮವಾಗಿ ಟ್ಯುನೀಷಿಯಾ ತಂಡ ಬಲಾಡ್ಯ ಬೆಲ್ಜಿಯಂ ಎದುರು 2-5ರ ಹಿನ್ನಡೆಯಿಂದ ಶರಣಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications