Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೆಕ್ಸಿಕೋ ಎದುರು ಆಕರ್ಷಕ ಆಟ: ನೇಮರ್ ಬಳಗ ಕ್ವಾ.ಫೈನಲ್ ಗೆ ಲಗ್ಗೆ

FIFA World Cup 2018: Brazil beat Mexico 2-0 to enter quarters

ಮಾಸ್ಕೋ, ಜು. 2: ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿಗಾಗಿ ರಷ್ಯಾದ ಸಮರಾ ಅರೆನಾದಲ್ಲಿನ ಬ್ರೆಜಿಲ್-ಮೆಕ್ಸಿಕೋ ಮುಖಾಮುಖಿಯಲ್ಲಿ ಬ್ರೆಜಿಲ್ 2-0 ಅಂತರದ ಗೆಲುವು ಸಾಧಿಸಿದೆ. ಉತ್ತಮ ಆಟ ಪ್ರದರ್ಶಿಸಿದ ಬ್ರೆಜಿಲ್ ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಪಂದ್ಯದ ದ್ವಿತೀಯಾರ್ಧದಲ್ಲಿ ಬ್ರೆಜಿಲ್ ಪರ 51ನೇ ನಿಮಿಷದಲ್ಲಿ ಗೋಲ್ ಬಾರಿಸಿದ ನೇಮರ್ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ರಾಬರ್ಟೋ ಫಿರ್ಮಿನೋ 88ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ಬ್ರೆಜಿಲ್ ಗೆಲುವನ್ನು ಸಾರಿದರು.

ಪಂದ್ಯದಲ್ಲಿ ಮೆಕ್ಸಿಕೋ ಕೂಡ ಪ್ರಬಲ ಪೈಪೋಟಿಯನ್ನೇ ನೀಡಿತು. ಬಲಿಷ್ಟ ಬ್ರೆಜಿಲ್ ಗೆ ಪಂದ್ಯದ ಪ್ರಥಮಾರ್ಧದಲ್ಲಿ ಗೋಲ್ ದಾಖಲಿಸಲು ಸಾಧ್ಯವಾಗದಿದ್ದುದೇ ಇದಕ್ಕೆ ಸಾಕ್ಷಿ. ಆದರೆ ಎದುರಾಳಿ ಮೆಕ್ಸಿಕೋ ಗೋಲ್ ದಾಖಲಿಸದಂತೆ ಬ್ರೆಜಿಲ್ ನೋಡಿಕೊಂಡಿತು. ಈ ಮೂಲಕ ಬ್ರೆಜಿಲ್ ತಾನು ಮತ್ತೆ ಫಾರ್ಮ್ ಗೆ ಮರಳಿರುವುದನ್ನು ತೋರಿಕೊಂಡಿತು.

ಪಂದ್ಯದ ವೇಳೆ ಇತ್ತಂಡಗಳಿಂದ ಒಟ್ಟು ಆರುಬಾರಿ ಆಟಗಾರರ ಬದಲಾವಣೆ ನಡೆಯಿತು. ಮೆಕ್ಸಿಕೋ ಆಟಗಾರರ ವಿರುದ್ಧ ಒಟ್ಟು ನಾಲ್ಕುಬಾರಿ, ಬ್ರೆಜಿಲ್ ಆಟಗಾರರ ವಿರುದ್ಧ ಎರಡು ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಗಾಯಾಳು ಆಟಗಾರರ ಬದಲಾವಣೆಗಾಗಿ ಪಂದ್ಯ ನಿಲುಗಡೆಯಾಗಿದ್ದಕ್ಕಾಗಿ 6 ಹೆಚ್ಚುವರಿ ನಿಮಿಷಗಳನ್ನು ದ್ವಿತೀಯಾರ್ಧದಲ್ಲಿ ಸೇರಿಸಲಾಯ್ತು.

Story first published: Monday, July 2, 2018, 21:37 [IST]
Other articles published on Jul 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+