ಫೀಫಾ ವಿಶ್ವಕಪ್ 2018 : ಡೆನ್ಮಾರ್ಕ್ 1-1 ಆಸ್ಟ್ರೇಲಿಯಾ

ಬೆಂಗಳೂರು, ಜೂನ್ 21: ಫೀಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಆಸ್ಟ್ರೇಲಿಯಾ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯ 1-1 ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಮೂಲಕ ಡೆನ್ಮಾರ್ಕ್ ಅಜೇಯವಾಗಿದ್ದು, ಮುಂದಿನ ಹಂತಕ್ಕೇರಲಿದೆ.
ಇದೇ ಮೊದಲ ಬಾರಿಗೆ ಎರಡು ತಂಡಗಳು ವಿಶ್ವಕಪ್ ನಲ್ಲಿ ಎದುರಾಗಿದ್ದವು ಇದಕ್ಕೂ ಮುನ್ನ ನಡೆದ ಫ್ರೆಂಡ್ಲಿ ಮ್ಯಾಚ್ ಗಳು ಡ್ರಾ ಆಗಿತ್ತು. ಡೆನ್ಮಾರ್ಕ್ ವಿರುದ್ಧ ಗೆದ್ದರೆ ಅಸೀಸ್ ಮುಂದಿನ ಹಂತ ತಲುಪುವ ಆಸೆ ಇರಿಸಿಕೊಳ್ಳಬಹುದಾಗಿತ್ತು.
ಗುರುವಾರ ಸಂಜೆ ಆರಂಭವಾದ ಪಂದ್ಯದ ಮೊದಲಾರ್ಧದ 7ನೇ ನಿಮಿಷದ. ಡೆನ್ಮಾರ್ಕ್ ನ ಕ್ರಿಸ್ ಎರಿಕ್ಸನ್ ಅವರು ಗೋಲು ಬಾರಿಸಿ, ಮುನ್ನಡೆ ತಂದು ಕೊಟ್ಟರು. ಆದರೆ, 38ನೇ ನಿಮಿಷದಲ್ಲಿ ಡೆನ್ಮಾರ್ಕ್ ನ ಪೌಲ್ಸನ್ ಅವರು ಬಾಕ್ಸ್ ನಲ್ಲಿ ಹ್ಯಾಂಡ್ ಬಾಲ್ ಆಗಿದ್ದು ಆಸ್ಟ್ರೇಲಿಯಾಕ್ಕೆ ವರದಾನವಾಯಿತು. ವಿಡಿಯೋ ಸಾಕ್ಷ್ಯ ಪಡೆದು ಫೌಲ್ ಎಂದು ನಿರ್ಣಯಿಸಿದ ರೆಫ್ರಿ ಪೆನಾಲ್ಟಿ ಶೂಟ್ ನೀಡಿದರು. ಆಸ್ಟ್ರೇಲಿಯಾದ ನಾಯಕ ಜೆಡಿನಕ್ ಅವರು ಸುಲಭವಾದ ಗೋಲು ಗಳಿಸಿ, ಸಮಬಲ ಸಾಧಿಸಿದರು.
ಪಂದ್ಯದ ಅಂಕಿ ಅಂಶ ಲೈವ್ ಕಾಮೆಂಟ್ರಿ ಸ್ಕೋರ್ ನೋಡಿ
2010ರಲ್ಲಿ ಸೆರ್ಬಿಯಾ ವಿರುದ್ಧ 2-1ರಲ್ಲಿ ಜಯ ಗಳಿಸಿದ್ದು ಬಿಟ್ಟರೆ ಯುರೋಪಿಯನ್ ತಂಡಗಳ ಎದುರು 9 ಪಂದ್ಯಗಳನ್ನು ಆಸ್ಟ್ರೇಲಿಯಾ ಸೋತಿದೆ.
ಡೆನ್ಮಾರ್ಕ್ ನ ಕ್ರಿಶ್ಚಿಯನ್ ಎರಿಕ್ಸನ್ ಅವರು 14 ಪಂದ್ಯಗಳಿಂದ 17 ಗೋಲು(12 ಗೋಲು ಹಾಗೂ 5 ನೆರವು) ಗಳಿಸಿದ್ದು, ಈ ಪಂದ್ಯದಲ್ಲೂ ಮಿಂಚುತ್ತಿದ್ದಾರೆ.
ಸಿ ಗುಂಪಿನಲ್ಲಿ ಡೆನ್ಮಾರ್ಕ್ , ಆಸ್ಟ್ರೇಲಿಯಾ ಅಲ್ಲದೆ, ಫ್ರಾನ್ಸ್ ಮತ್ತು ಪೆರು ತಂಡಗಳಿವೆ. ಇಂದು 8.30ಕ್ಕೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಈ ಎರಡು ತಂಡಗಳು ಸೆಣಸಲಿವೆ. ಈ ಗುಂಪಿನಿಂದ ಫ್ರಾನ್ಸ್ ಹಾಗೂ ಡೆನ್ಮಾರ್ಕ್ ಮುಂದಿನ ಹಂತಕ್ಕೇರುವ ಸಾಧ್ಯತೆಗಳಿವೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications