ಪೆನಾಲ್ಟಿ ಶೂಟ್: ಕೊಲಂಬಿಯಾ ವಿರುದ್ಧ ಇಂಗ್ಲೆಂಡ್ ಗೆ 4-3ರ ಗೆಲುವು


ಮಾಸ್ಕೋ, ಜು. 3: ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕೊಲಂಬಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಲ್ಲಿ ಇಂಗ್ಲೆಂಡ್ 4-3 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಇತ್ತಂಡಗಳು 1-1ರ ಸಮಬಲ ಸಾಧಿಸಿದ್ದವು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಇಂಗ್ಲೆಂಡ್ ಗೆದ್ದು ಕ್ವಾರ್ಟರ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಪಂದ್ಯದ ದ್ವಿತೀಯಾರ್ಧದ 57ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹರಿಕೇನ್ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ 90+3ನೇ ನಿಮಿಷದಲ್ಲಿ ಕೊಲಂಬಿಯಾದ ಯೆರಿಮಿನಾ ಗೋಲ್ ಸಿಡಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದ್ದರು. ಹೆಚ್ಚುವರಿ ಕಾಲಾವಧಿ ನೀಡಲಾಯಿತಾದರೂ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ.
ಪಂದ್ಯ 1-1ರಲ್ಲೇ ಗಿರಕಿ ಹೊಡೆದಾಗ ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಈ ಸಂದರ್ಭ ಇಂಗ್ಲೆಂಡ್ 4, ಕೊಲಂಬಿಯಾ 3 ಗೋಲ್ ಬಾರಿಸಿತು.
ಪ್ರಥಮಾರ್ಧಲ್ಲಿ 3 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯ್ತು. 41ನೇ ನಿಮಿಷದಲ್ಲಿ ಕೊಲಂಬಿಯಾದ ವಿಲ್ಮರ್ ಬ್ಯಾರಿಯೋಸ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸ್ಪಟ್ಟಿತು. 52ನೇ ನಿಮಿಷದಲ್ಲಿ ಹರಿಕೇನ್ ಅವರನ್ನು ತಳ್ಳಿದ್ದಕ್ಕಾಗಿ ಕೊಲಂಬಿಯಾದ ಸಾಂಟಿಯಾಗೋ ವಿರುದ್ಧವೂ ಯೆಲ್ಲೋ ಕಾರ್ಡ್ ದಾಖಲಾಗಿತ್ತು.
81ನೇ ನಿಮಿಷದಲ್ಲಿ ಕೊಲಂಬಿಯಾ ಪರ ಗೋಲ್ ದಾಖಲಾಗುವುದರಲ್ಲಿತ್ತು. ಆದರೆ ಅದು ಸ್ಪಲ್ಪದರಲ್ಲೇ ತಪ್ಪಿಹೋಯ್ತು. ಪಂದ್ಯದ ವೇಳೆ ಇತ್ತಂಡಗಳು ಒಟ್ಟು 5 ಬಾರಿ ಆಟಗಾರರನ್ನು ಬದಲಿಸಿಕೊಂಡವು. ದ್ವಿತೀಯಾರ್ಧದಲ್ಲಿ 5 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications