Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಚಕ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತು ಹೊರಬಿದ್ದ ಮೆಸ್ಸಿ ಬಳಗ!

FIFA World Cup 2018: France beat Argentina 4-3

ಮಾಸ್ಕೋ, ಜೂ. 30: ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಫ್ರಾನ್ಸ್ -ಅರ್ಜೆಂಟೀನಾ ಹಣಾಹಣಿಯಲ್ಲಿ ಚುರುಕಿನಾಟ ಪ್ರದರ್ಶಿಸಿದ ಫ್ರಾನ್ಸ್ ತಂಡ ಮೆಸ್ಸಿ ಬಳಗಕ್ಕೆ 4-3ರ ಸೋಲುಣಿಸಿದೆ. ಈ ಗೆಲುವಿನ ಮೂಲಕ ಫ್ರಾನ್ಸ್ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಪಂದ್ಯದ ಪ್ರಥಮಾರ್ಧದಲ್ಲಿ ಒಂದು ಮತ್ತು ದ್ವಿತೀಯಾರ್ಧದಲ್ಲಿ ಮೂರು ಗೋಲ್ ಬಾರಿಸಿ ಫ್ರಾನ್ಸ್ ಪಾರಮ್ಯ ಮೆರೆಯಿತು. ಅರ್ಜೆಂಟೀನಾ ಪಂದ್ಯದ ಮೊದಲಾರ್ಧದಲ್ಲಿ ಒಂದು ಮತ್ತು ದ್ವಿತೀಯಾರ್ಧದಲ್ಲಿ ಎರಡು ಗೋಲನ್ನಷ್ಟೇ ಸಿಡಿಸಲು ಶಕ್ತವಾಯಿತು. ಈ ಸೋಲಿನೊಂದಿಗೆ ಅರ್ಜೆಂಟೀನಾ ಪಂದ್ಯದಿಂದ ಹೊರ ನಡೆಯುವಂತಾಗಿದೆ.

ಪಂದ್ಯದುದ್ದಕ್ಕೂ ಫ್ರಾನ್ಸ್ ಚುರುಕಿನಾಟವಾಡಿದ್ದು ಹೆಚ್ಚು ಗಮನ ಸೆಳೆಯಿತು. ಫ್ರಾನ್ಸ್ ನ ಅಂಟಾಯ್ನ್ ಗ್ರೀಜ್ಮನ್ ಅವರು 13ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡದ ಖಾತೆ ತರೆದರು. ಅದಾಗಿ ಬೆಂಜಮಿನ್ ಪವರ್ಡ್ ಅವರು 57ನೇ ನಿಮಿಷದಲ್ಲಿ, ಕಿಲಿಯನ್ ಎಂಬಪ್ಪೆ ಅವರು 64ನೇ ನಿಮಿಷದಲ್ಲಿ, ಕಿಲಿಯನ್ ಎಂಬಪ್ಪೆ 68ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫ್ರಾನ್ಸ್ ಗೆಲುವನ್ನು ಸಾರಿದರು.

ಅರ್ಜೆಂಟೀನಾ ಪರ ಆ್ಯಂಗೆಲ್ ಡಿ ಮಾರಿಯಾ 41ನೇ ನಿಮಿಷದಲ್ಲಿ, ಗೇಬ್ರಿಯಲ್ ಮರ್ಸಾಡೋ 48ನೇ ನಿಮಿಷದಲ್ಲಿ, ಸೆರ್ಗಿಯೋ ಅಗುಯೀರೋ 93ನೇ ನಿಮಿಷದಲ್ಲಿ ಗೋಲ್ ಸಿಡಿಸಿದರೂ ತಂಡ ಸೋಲೊಪ್ಪಿಕೊಂಡಿತು.

Story first published: Saturday, June 30, 2018, 21:53 [IST]
Other articles published on Jun 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+