ವಿಶ್ವಕಪ್: ಉರುಗ್ವೆಯನ್ನು 2-0ಯಿಂದ ಮಣಿಸಿದ ಫ್ರಾನ್ಸ್ ಸೆಮಿಫೈನಲ್ ಗೆ

ಮಾಸ್ಕೋ, ಜು. 6: ಫೀಫಾ ವಿಶ್ವಕಪ್ ಕುತೂಹಲಕಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಉರುಗ್ವೆ ವಿರುದ್ಧ 2-0ರ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಪ್ರವೇಶಿಸಿದೆ. ಪಂದ್ಯದ ಪ್ರಥಮಾರ್ಧದಲ್ಲಿ ಒಂದು ಗೋಲ್ ಮತ್ತು ದ್ವಿತೀಯಾರ್ಧದಲ್ಲಿನ ಗೋಲ್ ಫ್ರಾನ್ಸ್ ತಂಡವನ್ನು ಪ್ರಶಸ್ತಿಯಾಸೆಯನ್ನು ಜೀವಂತವಾಗಿರಿಸಿದೆ.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
40ನೇ ನಿಮಿಷದಲ್ಲಿ ರಾಫೇಲ್ ವಾರನೆ ಅವರು ಫ್ರಾನ್ಸ್ ಪರ ಗೋಲ್ ದಾಖಲಿಸಿ 1-0ಯ ಮುನ್ನಡೆ ಕೊಟ್ಟರು. ಪಂದ್ಯದ ದ್ವಿತೀಯಾರ್ಧದ 61ನೇ ನಿಮಿಷದಲ್ಲಿ ಅಂಟಾಯ್ನ್ ಗ್ರೀಜ್ಮನ್ ಮತ್ತೊಂದು ಗೋಲ್ ಬಾರಿಸಿ ಫ್ರಾನ್ಸ್ ಗೆಲುವನ್ನು ಸಾರಿದರು.
ಎದುರಾಳಿ ಉರುಗ್ವೆ ತಕ್ಕ ಮಟ್ಟಿನ ಪೈಪೋಟಿ ನಡೆಸಿತಾದರೂ ಫ್ರಾನ್ಸ್ ನ ದಾಳಿಯಾತ್ಮಕ ಆಟದೆದುರು ಸೋಲಬೇಕಾಯ್ತು. ಪಂದ್ಯದ ವೇಳೆ ಇತ್ತಂಡಗಳ ಇಬ್ಬಿಬ್ಬರು ಆಟಗಾರರ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.
ರಷ್ಯಾದ ಎನ್.ಆರ್.ಜಿ. ಕ್ರೀಡಾಂಗಣದಲ್ಲಿ ನಡೆದಿದ್ದ ಈ ಮುಖಾಮುಖಿಯ ವೇಳೆ ಇತ್ತಂಡಗಳು ಒಟ್ಟು ಆರುಬಾರಿ ತಂಡದ ಆಟಗಾರರನ್ನು ಬದಲಿಸಿಕೊಂಡವು. ಪಂದ್ಯದ ಪ್ರಥಮಾರ್ಧದಲ್ಲಿ 2, ದ್ವಿತೀಯಾರ್ಧದಲ್ಲಿ 3 ಹೆಚ್ಚುವರಿ ನಿಮಿಷಗಳನ್ನು ಪಂದ್ಯದ ನಿಲುಗಡೆಗಾಗಿ ಸೇರಿಸಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications