ಗ್ರೂಪ್ 'ಸಿ'ಯಲ್ಲಿ ಕುತೂಹಲಕೆರಳಿಸಿದೆ ಡೆನ್ಮಾರ್ಕ್-ಫ್ರಾನ್ಸ್ ಕದನ

ನವದೆಹಲಿ, ಜೂ. 12: ಎನ್ನೇನು ಒಂದೇ ದಿನಗಳಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಫೀಫಾ ವಿಶ್ವಕಪ್ 2018ಕ್ಕೆ ರಷ್ಯಾ ಸಜ್ಜುಗೊಳ್ಳುತ್ತಿದೆ. ಫುಟ್ಬಾಲ್ ಕ್ರೀಡಾಭಿಮಾನಿಗಳ ಕಣ್ಣು ಎಲ್ಲಾ 32 ತಂಡಗಳು ಮತ್ತು 8 ಗುಂಪುಗಳ ಮಧ್ಯೆ ಹರಿಯುತ್ತಿದ್ದು, ಮೆಲ್ಲನೆ ಫುಟ್ಬಾಲ್ ಕಾವೇರುತ್ತಿದೆ.
ವಿಶ್ವದ 32ತಂಡಗಳು ವಿವಿಧ ಗ್ರೂಪ್ ಗಳಲ್ಲಿ ಹಂಚಿಕೆಯಾಗಿದ್ದು, ಸಿ ಗ್ರೂಪಿನಲ್ಲಿ ಫ್ರಾನ್ಸ್, ಪೆರು, ಡೆನ್ಮಾರ್ಕ್, ಆಸ್ಟ್ರೇಲಿಯಾ ತಂಡಗಳಿವೆ. ಸಿ ಗುಂಪಿನಲ್ಲಿ ಫ್ರಾನ್ಸ್ ಹೆಚ್ಚು ಬಲಾಡ್ಯ ತಂಡವಾಗಿ ಗುರುತಿಸಿಕೊಂಡಿದ್ದು, ಜೂನ್ 26ರಂದು ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆನ್ಮಾರ್ಕ್ ಮತ್ತು ಫ್ರಾನ್ಸ್ ನಡುವಿನ ಪಂದ್ಯ ಹೆಚ್ಚು ಕುತೂಹಲಕೆರಳಿಸಿದೆ.
ಸಿ ಗ್ರೂಪಿನಲ್ಲಿ ಪರಸ್ಪರ ಎದುರಾಗಲಿರುವ ತಂಡಗಳ ಫೀಫಾ ರ್ಯಾಂಕಿಂಗ್ ಗಮನಿಸಿದರೆ, ಫ್ರಾನ್ಸ್ 7ನೇ, ಆಸ್ಟ್ರೇಲಿಯಾ 36ನೇ, ಪೆರು 11ನೇ ಮತ್ತು ಡೆನ್ಮಾರ್ಕ್ 12ನೇ ಸ್ಥಾನದಲ್ಲಿದೆ. ಅಗ್ರ 15ರೊಳಗೆ ಸ್ಥಾನ ಪಡೆದಿರುವ ಮೂರು ತಂಡಗಳನ್ನು ಹೊಂದಿರುವ 'ಸಿ' ಕ್ರೀಡಾಭಿಮಾನಿಗಳನ್ನು ಸೆಳೆಯಬಲ್ಲ ಗುಂಪೆ.
ಇನ್ನು ಗುಂಪಿನೊಳಗಿನ ತಂಡಗಳ ಮುಖಾಮುಖಿಯ ವಿಚಾರಕ್ಕೆ ಬಂದರೆ, ಜೂನ್ 16ರಂದು ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ, ಪೆರು ಮತ್ತು ಡೆನ್ಮಾರ್ಕ್, ಜೂನ್ 21ರಂದು ಡೆನ್ಮಾರ್ಕ್- ಆಸ್ಟ್ರೇಲಿಯಾ, ಫ್ರಾನ್ಸ್-ಪೆರು, ಜೂನ್ 26ರಂದು ಆಸ್ಟ್ರೇಲಿಯಾ-ಪೆರು ಮತ್ತು ಡೆನ್ಮಾರ್ಕ್-ಫ್ರಾನ್ಸ್ ತಂಡಗಳು ಪರಸ್ಪರ ಸವಾಲು ಸ್ವೀಕರಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications