ಫೀಫಾ ವಿಶ್ವಕಪ್: ಇ ಗ್ರೂಪ್ ನಲ್ಲಿರುವ ಬ್ರೆಜಿಲ್ ಗೆ ಗೆಲುವು ಸುಲಭವಿಲ್ಲ

ನವದೆಹಲಿ, ಜೂ. 13: ನಾಳೆ (ಗುರುವಾರ) ಸಂಜೆ ರಷ್ಯಾದಲ್ಲಿ ಫುಟ್ಬಾಲ್ ಮಹಾನ್ ಸಮರಕ್ಕೆ ಚಾಲನೆ ದೊರೆಯಲಿದ್ದು, ಮಾಸ್ಕೋದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಅತಿಥೇಯ ರಷ್ಯಾ ಮತ್ತು ಸೌದಿ ಅರೆಬಿಯಾ ತಂಡಗಳು ಮುಖಾಮುಖಿಯಾಗಲಿವೆ.
ಒಟ್ಟು 32 ತಂಡಗಳು ಈ ಫುಟ್ಬಾಲ್ ಮಹಾನ್ ಕಾದಾಟಕ್ಕೆ ಪ್ರವೇಶ ಗಿಟ್ಟಿಸಿಕೊಂಡಿವೆ. ಈ 32 ತಂಡಗಳನ್ನು ತಲಾ ನಾಲ್ಕು ನಾಲ್ಕು ತಂಡಗಳಾಗಿ 8 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಹೆಚ್ಚು ಬಾರಿ ವಿಶ್ವಕಪ್ ಗೆದ್ದಿರುವ ಕೀರ್ತಿಗೆ ಪಾತ್ರವಾಗಿರುವ ಬ್ರಿಜಿಲ್ ಗೆ ಈ ಬಾರಿ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.
ಇ ಗುಂಪಿನಲ್ಲಿ ಬ್ರೆಜಿಲ್, ಸ್ವಿಟ್ಜರ್ ಲ್ಯಾಂಡ್, ಕೋಸ್ಟರಿಕಾ ಮತ್ತು ಸರ್ಬಿಯಾ ತಂಡಗಳು ಸೇರಿದ್ದು, ಬ್ರೆಜಿಲ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಡುವಿನ ಕಾದಾಟ ಕುತೂಲಹ ಕೆರಳಿಸಿದೆ. ಎರಡೂ ತಂಡಗಳೂ ಬಲಿಷ್ಟವಾಗಿರುವುದರಿಂದ ಪರಸ್ಪರ ಮುಖಾಮುಖಿಯಲ್ಲಿ ಗೆಲುವು ಯಾರ ಪಾಲಿನದ್ದಾಗಲಿದೆ ಎಂದು ಸುಲಭವಾಗಿ ಹೇಳುವಂತಿಲ್ಲ.
ಜೂನ್ 17ರಂದು ರೋಸ್ಟವ್ ಆನ್ ಡನ್ ನಲ್ಲಿ ನಡೆಯಲಿರುವ ನಡೆಯುವ ಬ್ರೆಜಿಲ್-ಸ್ವಿಟ್ಜರ್ ಲ್ಯಾಂಡ್ ತಂಡಗಳ ಸೆಣಸಾಟದತ್ತ ಫುಟ್ಬಾಲ್ ಅಭಿಮಾನಿಗಳ ಚಿತ್ತ ಹರಿದಿದೆ. ಫೀಫಾ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನದಲ್ಲಿರುವ ಬ್ರಿಜಿಲ್ ಗೆಲ್ಲುತ್ತಾ ಇಲ್ಲ, 6ನೇ ಸ್ಥಾನದಲ್ಲಿರುವ ಸ್ವಿಟ್ಜರ್ ಲ್ಯಾಂಡ್ ಗೆಲ್ಲುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications