Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಫ್ ಗುಂಪಿನ ವಿಶ್ಲೇಷಣೆ: ಜರ್ಮನಿ ಜತೆಗೆ ಯಾವ ತಂಡ ಮುಂದಿನ ಹಂತಕ್ಕೆ?

FIFA World Cup 2018: Group F analysis (Germany, Mexico, Sweden, South Korea)

ಬೆಂಗಳೂರು, ಜೂನ್ 13: ಫೀಫಾ ವಿಶ್ವಕಪ್ 2018ರಲ್ಲಿ ಈ ಬಾರಿ ಕುತೂಹಲ ಕೆರಳಿಸಿರುವ ಗುಂಪುಗಳ ಪೈಕಿ ಎಫ್ ಗುಂಪು ಕೂಡಾ ಒಂದು. ಜರ್ಮನಿ, ಮೆಕ್ಸಿಕೋ ಮುಂದಿನ ಹಂತಕ್ಕೆ ಸುಲಭವಾಗಿ ಹೋಗಬಹುದು ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಸ್ವೀಡನ್ ಹಾಗೂ ದಕ್ಷಿಣ ಕೊರಿಯಾ ಅಚ್ಚರಿಯ ಫಲಿತಾಂಶ ಹೊರ ಹಾಕುವ ಇತಿಹಾಸವನ್ನು ಹೊಂದಿವೆ.

ನಿರೀಕ್ಷೆ: ಹಾಲಿ ಚಾಂಪಿಯನ್ಸ್ ಜರ್ಮನಿ ಸುಲಭವಾಗಿ ಮುಂದಿನ ಹಂತಕ್ಕೇರುವ ಸಾಧ್ಯತೆಗಳಿವೆ. ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಲಕ್ಷಣಗಳಿವೆ. ಎರಡನೇ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಮೆಕ್ಸಿಕೋ ಹಾಗೂ ಸ್ವೀಡನ್ ನಡುವೆ ಪೈಪೋಟಿ ನಡೆಯುವ ನಿರೀಕ್ಷೆಗಳಿವೆ. ದಕ್ಷಿಣ ಕೊರಿಯಾ ಅಚ್ಚರಿಯ ಆಟವಾಡಿದರೆ ಎರಡನೆ ಸ್ಥಾನ ಪಡೆಯುವ ತಂಡಕ್ಕೆ ಆಘಾತ ನೀಡಬಹುದು.

ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು

ಎಫ್ ಗುಂಪು : ಜರ್ಮನಿ, ಮೆಕ್ಸಿಕೋ, ಸ್ವೀಡನ್, ದಕ್ಷಿಣ ಕೊರಿಯಾ

ಎಫ್ ಗುಂಪಿನ ಪಂದ್ಯಗಳು
* ಜೂನ್ 17: ಜರ್ಮನಿ ವಿರುದ್ಧ ಮೆಕ್ಸಿಕೋ (ಮಾಸ್ಕೋ) 8.30 PM IST
* ಜೂನ್ 18 : ಸ್ವೀಡನ್ ವಿರುದ್ಧ ದಕ್ಷಿಣ ಕೊರಿಯಾ (ನಿಜಿ ನೊವ್ಗೊರೊಡ್), 5:30 PM IST
* ಜೂನ್ 23 : ದಕ್ಷಿಣ ಕೊರಿಯಾ ವಿರುದ್ಧ ಮೆಕ್ಸಿಕೋ (ರೊಸ್ಟೊವ್) 8.30 PM IST
- ಜರ್ಮನಿ ವಿರುದ್ಧ ಸ್ವೀಡನ್ (ಸೋಚಿ), 11.30 PM IST
* ಜೂನ್ 27 : ದಕ್ಷಿಣ ಕೊರಿಯಾ ವಿರುದ್ಧ ಜರ್ಮನಿ (ಕಜಾನ್), 7.30 PM IST
- ಮೆಕ್ಸಿಕೋ ವಿರುದ್ಧ್ ಸ್ವೀಡನ್ (ಯೆಕಟೆರಿನ್ಬರ್ಗ್ ) 7.30 PM IST

ಪ್ರಮುಖ ಪೈಪೋಟಿ:
* ಎಮಿಲ್ ಫೋರ್ಸ್ ಬರ್ಗ್(ಸ್ವೀಡನ್) ವಿರುದ್ಧ ಜೋಶುವ ಕಿಮಿಚ್ (ಜರ್ಮನಿ)
* ಥಾಮಸ್ ಮುಲ್ಲರ್ (ಜರ್ಮನಿ) ವಿರುದ್ಧ ಗುಲ್ಲೆರ್ಮೊ ಒಚೊವಾ(ಮೆಕ್ಸಿಕೋ)
* ಜವಿಯರ್ 'ಚಿಚಾರಿಟೋ' ಹೆರ್ನಾಂಡೆಜ್ (ಮೆಕ್ಸಿಕೋ) ವಿರುದ್ಧ ಆಂಡ್ರೇಸ್ ಗ್ರಾನ್ಕ್ವೆಸ್ಟ್ (ಸ್ವೀಡನ್)

Story first published: Wednesday, June 13, 2018, 20:35 [IST]
Other articles published on Jun 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+