Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಪೋಲ್ಯಾಂಡ್ ವಿರುದ್ಧ ಜಪಾನ್ ಗೆ 1-0ಯ ಸೋಲು

FIFA world cup 2018 : ಪೋಲ್ಯಾಂಡ್ ವಿರುದ್ಧ ಜಪಾನ್ ಗೆ 1-0ಯ ಸೋಲು | Oneindia Kannada
FIFA World Cup 2018: Japan survive in World Cup

ಮಾಸ್ಕೋ, ಜೂ. 28: ರಷ್ಯಾದ ವೊಲ್ಗೋಗ್ರಾಡ್ ಅರೇನಾದಲ್ಲಿ ಅರೇನಾದಲ್ಲಿ ನಡೆದ ಎಚ್ ಗ್ರೂಪಿನ ಜಪಾನ್ ಮತ್ತು ಪೋಲ್ಯಾಂಡ್ ಕಾದಾಟದಲ್ಲಿ ಪೋಲ್ಯಾಂಡ್ 1-0ಯ ಗೆಲುವು ದಾಖಲಿಸಿದೆ. ಪೋಲ್ಯಾಂಡ್ ವಿರುದ್ಧದ ಸೋಲಿನ ಹೊರತಾಗಿಯೂ ಜಪಾನ್ ಕೂಡ ಅಂಕಗಳ ಆಧಾರದಲ್ಲಿ 16 ಹಂತದ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ 59ನೇ ನಿಮಿಷದಲ್ಲಿ ಪೋಲ್ಯಾಂಡ್ ನ ಜೇನ್ ಬೆಡ್ನಾರೆಕ್ ಅವರು ಗೋಲ್ ಬಾರಿಸಿ ತಂಡದ ಗೆಲುವನ್ನು ಬರೆದರು. ಪಂದ್ಯದ ವೇಳೆ ಒಟ್ಟು 5 ಬಾರಿ ಇತ್ತಂಡಗಳು ಆಟಗಾರರನ್ನು ಬದಲಿಸಿಕೊಂಡವು.

ಪಂದ್ಯದ ದ್ವಿತೀಯಾರ್ಧ 66ನೇ ನಿಮಿಷದಲ್ಲಿ ಜಪಾನ್ ನ ತೋಮೋಆಕಿ ಮಕಿನೋ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯ್ತು. ಎರಡೂ ತಂಡಗಳು ಗೋಲ್ ಗಾಗಿ ಭರ್ಜರಿ ಕಾದಾಟ ನಡೆಸಿತಾದರೂ ಜಪಾನ್ ಗೋಲ್ ಸಿಡಿಸಲಾಗದೆ ಪೋಲ್ಯಾಂಡ್ ಎದುರು ಶರಣಾಯಿತು.

ಜಪಾನ್ ಪರ ಈಜಿ ಕವಾಶಿಮಾ (ಕ್ಯಾಪ್ಟನ್), ಯುಟೊ ನಾಗೊಟೊಮೊ, ಗಕು ಶಿಬಾಸಾಕಿ, ಶಿಂಜಿ ಓಕಾಝಾಕಿ, ತಕಾಶಿ ಉಸಾಮಿ, ಯೊಶಿನೋರಿ ಮೊಟೊ, ಹಾತರು ಯಮಾಗುಚಿ, ಹಿರೋಕಿ ಸಕಾಯಿ, ತೋಮಕಿ ಮ್ಯಾಕಿನೋ, ಗೊಟೊಕು ಸಕೈ, ಮಾಯಾ ಯೋಶಿಡಾ ಕಣಕ್ಕಿಳಿದಿದ್ದರು.

ಪೋಲೆಂಡ್ ನಿಂದ ಲುಕಾಸ್ಜ್ ಫ್ಯಾಬಿಯಾನ್ಸ್ಕಿ, ಆರ್ಟುರ್ ಜೆಡ್ರಜ್ಜೆಕ್ಜಿಕ್, ಜಾನ್ ಬೆಡ್ನರೆಕ್, ಜೇಸೆಕ್ ಗೊರಾಲ್ಸ್ಕಿ, ರಾಬರ್ಟ್ ಲೆವಾಂಡೋವ್ಸ್ಕಿ (ಕ್ಯಾಪ್ಟನ್), ಗ್ರ್ಝ್ಗೊರ್ಜ್ ಕ್ರೈಚೊವಿಕ್, ಕಾಮಿಲ್ ಗ್ರೊಸ್ಸಿಕಿ, ಕಾಮಿಲ್ ಗ್ಲಿಕ್, ಬಾರ್ಟೋಸ್ ಬೆರೆಝಿನ್ಸ್ಕಿ, ಪಯೋಟ್ರ್ ಝೀಲಿನ್ಸ್ಕಿ, ರಾಫಾಲ್ ಕುರ್ಜಾವಾ ಆಡಿದ್ದರು.

Story first published: Thursday, June 28, 2018, 22:10 [IST]
Other articles published on Jun 28, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+