For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ 2018: ಪೆರು ವಿರುದ್ಧ ಗೆದ್ದು, 16ರ ಹಂತಕ್ಕೆ ಜಿಗಿದ ಫ್ರೆಂಚರು

By Mahesh
FIFA World Cup 2018 Live: France vs Peru

ಬೆಂಗಳೂರು, ಜೂನ್ 21 : ಫೀಫಾ ವಿಶ್ವಕಪ್ 2018ರ ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪೆರು ವಿರುದ್ಧ ಫ್ರಾನ್ಸ್ ಶುಭಾರಂಭ ಮಾಡಿದೆ. ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸಿ ಮುನ್ನಡೆ ಪಡೆದುಕೊಂಡಿದ್ದು, ಪಂದ್ಯದುದ್ದಕ್ಕೂ ನಿಭಾಯಿಸಿಕೊಂಡು ಪಂದ್ಯವನ್ನು 1-0 ಅಂತರದಲ್ಲಿ ಜಯ ಗಳಿಸಿದೆ.

ಈ ಗೆಲುವಿನೊಂದಿಗೆ 6 ಅಂಕ ಗಳಿಸಿರುವ ಫ್ರೆಂಚರು, ವಿಶ್ವಕಪ್ ನ 16ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಮತ್ತೊಂದು ತಂಡವಾಗಿ ಡೆನ್ಮಾರ್ಕ್ ಸೇರಿಕೊಳ್ಳಲಿದೆ.

19 ವರ್ಷ ವಯಸ್ಸಿನ ಫ್ರೆಂಚ್ ಆಟಗಾರ ಕಿಲಿಯನ್ ಎಂಬಾಪೆ ಗೋಲು ಗಳಿಸಿ, ಮುನ್ನಡೆ ತಂದು ಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 2-1ರಿಂದ ಗೆಲುವು ಸಾಧಿಸಿರುವ ಫ್ರಾನ್ಸ್ ಹಾಗೂ ಡೆನ್ಮಾರ್ಕ್ ವಿರುದ್ಧ 1-0 ಅಂತರದಿಂದ ಸೋಲು ಅನುಭವಿಸಿದ ಪೆರು ತಂಡಗಳ ನಡುವೆ ಕದನ ನಡೆದಿದೆ.

36 ವರ್ಷಗಳ ನಂತರ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಪೆರು ತಂಡಕ್ಕೆ ಈ ಬಾರಿ ವಿಶ್ವಕಪ್ ನಲ್ಲಿ ಆರಂಭ ಉತ್ತಮವಾಗಿರಲಿಲ್ಲ. ಡೆನ್ಮಾರ್ಕ್ ವಿರುದ್ಧ ಪೆನಾಲ್ಟಿ ಸಿಕ್ಕರೂ ಮಿಸ್ ಮಾಡಿಕೊಂಡ ಪೆರು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದೆ.

Story first published: Thursday, June 21, 2018, 23:15 [IST]
Other articles published on Jun 21, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+