ಫೀಫಾ ವಿಶ್ವಕಪ್ 2018: ಅದ್ದೂರಿ ಆರಂಭೋತ್ಸವದ ಅತ್ಯಾಕರ್ಷಣೆಗಳಿವು..

ನವದೆಹಲಿ, ಜೂ. 11: ರಷ್ಯಾದಲ್ಲಿ ಜೂನ್ 14ರಿಂದ ಆರಂಭಗೊಂಡು ಜುಲೈ 15ರ ವರೆಗೆ ಕ್ರೀಡಾಭಿಮಾನಿಗಳನ್ನು ಸೆಳೆದಿಟ್ಟುಕೊಳ್ಳಲಿರುವ ಫೀಫಾ ಫುಟ್ಬಾಲ್ ಹಬ್ಬದತ್ತ ಎಲ್ಲರ ಗಮನ ಹರಿಯುತ್ತಿದೆ. ಪರಸ್ಪರ ಬಲಾಬಲ ಪ್ರದರ್ಶಿಸಲು 32 ತಂಡಗಳು ಸಜ್ಜಾಗುತ್ತಿರುವ ಬೆನ್ನಲ್ಲೇ ತಂಡಗಳಿಗೆ ಹೊರತಾಗಿ ಇನ್ನೊಂದಿಷ್ಟು ಅದ್ದೂರಿ ತಯಾರಿಗಳಾಗುತ್ತಿವೆ.
ಫೀಫಾದಂತ ಪ್ರತಿಷ್ಠಿತ ಪ್ರತಿ ಕ್ರೀಡಾಕೂಟ/ಪಂದ್ಯಾಟಗಳಲ್ಲೂ ಅದ್ದೂರಿ ಆರಂಭೋತ್ಸವ ಇದ್ದಿದ್ದೇ. ಅದರಲ್ಲೂ ಹುಚ್ಚು ಕ್ರೀಡಾಭಿಮಾನಿಗಳಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾಟದ ಚಾಲನೆ ಸಂದರ್ಭ ಜನಾಕರ್ಷಕ ಸಂಗತಿಗಳಿಗೆ ಲೆಕ್ಕವಿದ್ದೀತೆ? ಆದರೆ ಅಲ್ಲಿ ಆರಂಭೋತ್ಸವ ದಿನ ಕಾಣಲಿರುವ ಗಮ್ಮತ್ತಿನ ಹತ್ತಾರು ಸಂಗತಿಗಳಲ್ಲಿ ಕೆಲವೊಂದಿಷ್ಟನ್ನು ನಿಮ್ಮೆದುರು ತರಬಲ್ಲೆವು.
ಸುಮಾರು ಒಂದು ತಿಂಗಳಿನುದ್ದಕ್ಕೂ ಫುಟ್ಬಾಲ್ ಹಬ್ಬ ಕ್ರೀಡಾಭಿಮಾನಿಗಳನ್ನು ರಂಜಿಸಲಿದ್ದು, ಅತಿಥೇಯ ರಷ್ಯಾವು ಪಂದ್ಯಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಪ್ರತಿಷ್ಠಿತ ಪಂದ್ಯಾಟದ ದಿನ ಸಹಜವಾಗೇ ವಿಶ್ವದ ಚಿತ್ತ ರಷ್ಯಾದತ್ತ ಹರಿಯಲಿರುವುದರಿಂದ ಪಂದ್ಯಾಟಕ್ಕೆ ಹೆಚ್ಚು ಮೆರಗು ನೀಡುವ ನಿಟ್ಟಿನಲ್ಲೂ ವಿಭಿನ್ನ ಪ್ರಕ್ರಿಯೆಗಳಾಗುತ್ತಿವೆ.

ಮಾಸ್ಕೋದಲ್ಲೇ ಆರಂಭ-ಅಂತ್ಯ
ರಷ್ಯಾದ ಕೇಂದ್ರವಾದ ಮಾಸ್ಕೋದಲ್ಲಿ ಜೂನ್ 14ರಂದು ಪಂದ್ಯ ಆರಂಭವಾದರೆ ಜುಲೈ 15ರಂದು ಫುಟ್ಬಾಲ್ ಹಬ್ಬಕ್ಕೆ ತೆರೆ ಬೀಳೋದೂ ಮಾಸ್ಕೋದಲ್ಲೇ. ಮೊದಲ ಪಂದ್ಯದಲ್ಲಿ ಗ್ರೂಪ್ ಎಯಲ್ಲಿರುವ ಅತಿಥೇಯ ರಷ್ಯಾ ತಂಡ ಏಷ್ಯಾನ್ ದೈತ್ಯ ಸೌದಿ ಅರೇಬಿಯಾವನ್ನು ಎದುರುಗೊಳ್ಳಲಿದೆ. ಮಾಸ್ಕೋದ ಲುಝ್ನಿಕಿ ಕ್ರೀಡಾಂಗಣದಲ್ಲಿ ಆರಂಭಿಕ ಮತ್ತು ಅಂತಿಮ ಪಂದ್ಯಗಳು ನಡೆಯಲಿವೆ.

ಆರಂಭೋತ್ಸವ ಆರಂಭ
ಜೂನ್ 14ರಂದು ಆಕರ್ಷಣೀಯ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ ಎಂದರೂ ನಿಖರವಾಗಿ ಚಾಲನೆ ದೊರೆಯುವ ಸಮಯವೆಷ್ಟು ಎನ್ನುವ ಕುತೂಹಲವಿರಬಹುದು. ಅದ್ಹಾಗೆ ಆರಂಭಿಕ ಪಂದ್ಯ ಜೂನ್ 14ರ ರಾತ್ರಿ 8.30ಕ್ಕೆ ಶುರುವಾದರೆ ಆರಂಭಿಕ ಪಂದ್ಯಕ್ಕೂ ಸುಮಾರು 2 ಗಂಟೆ ಮುಂಚಿತವಾಗಿ ಅಂದರೆ ಸಂಜೆ 6.30ಕ್ಕೆ ಫೀಫಾ ಆರಂಭೋತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ.

ಸ್ಟಾರಾಗಣ
ಅದ್ದೂರಿ ಪಂದ್ಯಾಟದ ಆರಂಭೋತ್ಸವದಲ್ಲಿ ಸೆಲೆಬ್ರಿಟಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಡ್ಯಾನ್ಸರ್ಸ್, ಜಿಮ್ನ್ಯಾಸ್ಟ್ ಮತ್ತು ಟ್ರ್ಯಾಂಪೊಲಿನಿಸ್ಟ್ಸ್ ಸೇರಿದಂತೆ ಸುಮಾರು 500 ಸ್ಥಳೀಯ ಕಲಾವಿದರು ಪಾಲ್ಗೊಂಡು, 80,000 ಅಭಿಮಾನಿಗಳಿರುವ ಫುಟ್ಬಾಲ್ ಅರೆನಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಅಲ್ಲದೆ ಮ್ಯೂಸಿಕ್ ಐಕಾನ್ ರಾಬಿ ವಿಲಿಯಮ್ಸ್, ಗಾಯಕಿ ಐಡಾ ಗ್ಯಾರಿಫುಲಿನಾ ಅವರ ಸಂಗೀತ ರಸದೌಟಣವೂ ದೊರೆಯಲಿದೆ.

ಲೈವ್ ಇಟ್ ಅಪ್
ಪರ್ಸುಯಿಟ್ ಆಫ್ ಹ್ಯಾಪಿನೆಸ್, ಐ ರೋಬಟ್ ನಂತ ಅನೇಕ ಅದ್ಭುತ ಚಿತ್ರಗಳಲ್ಲಿ ಮಿಂಚಿದ್ದ ಹಾಲಿವುಡ್ ನಟ, ನಿರ್ದೇಶಕ, ಹಾಸ್ಯನಟ, ಗೀತೆ ರಚನೆಕಾರ, ಗಾಯಕ ಅಮೆರಿಕಾದ ವಿಲ್ ಸ್ಮಿತ್ ಮತ್ತು ಸ್ಟಾರ್ ಗಾಯಕ, ಗೀತೆ ರಚನೆಕಾರ ನಿಕಿ ಜಾಮ್ ಜೋಡಿ ಫೀಫಾ ವಿಶ್ವಕಪ್ 2018ರ ಅಧಿಕೃತ ಗೀತೆ 'ಲೈವ್ ಇಟ್ ಅಪ್' ಅನ್ನು ಪ್ರಸ್ತುತ ಪಡಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications