ಫೀಫಾ ವಿಶ್ವಕಪ್ ಆರಂಭೋತ್ಸವ ಲೈವ್: ರಾಬಿ ಮ್ಯೂಸಿಕ್ ರಂಜನೆ

ಮಾಸ್ಕೋ, ಜೂ. 14: ಇಂದು ರಷ್ಯಾದಲ್ಲಿ ಆರಂಭಗೊಳ್ಳುತ್ತಿರುವ ಫೀಫಾ ವರ್ಲ್ಡ್ ಕಪ್ 2018 ಪಂದ್ಯಾಟದ ಆರಂಭೋತ್ಸವದಲ್ಲಿ ಮ್ಯೂಸಿಕ್ ಐಕಾನ್ ರಾಬಿ ವಿಲಿಯಮ್ಸ್ ಅವರು ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದಾರೆ.
ಬ್ರಿಟಿಷ್ ಪಾಪ್ ಸ್ಟಾರ್ ರಾಬಿ ಮತ್ತು ರಷ್ಯಾನ್ ಸೊಪ್ರಾನೊ ಐಡಾ ಅವರು ಸುಮಾರು 80,000 ಅಭಿಮಾನಿಗಳಿರುವ ಫುಟ್ಬಾಲ್ ಅರೆನಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಆದರೆ ರಾಬಿ ಅವರ ಹಿಟ್ ಸಾಂಗ್ 'ಪಾರ್ಟಿ ಲೈಕ್ ಅ ರಷ್ಯಾ'ವನ್ನು ಕಾರಣಾಂತರ ಹಾಡುತ್ತಿಲ್ಲ. ಬದಲಿಗೆ ಅವರ ಇನ್ನಿತರ ಜನಪ್ರಿಯ ಹಿಟ್ಸ್ ಗಳನ್ನು ಹಾಡುತ್ತಿದ್ದಾರೆ.
ರಾಬಿ ಐಡಾ ಅಲ್ಲದೆ ಡ್ಯಾನ್ಸರ್ಸ್, ಜಿಮ್ನ್ಯಾಸ್ಟ್ ಮತ್ತು ಟ್ರ್ಯಾಂಪೊಲಿನಿಸ್ಟ್ಸ್ ಸೇರಿದಂತೆ ಸುಮಾರು 500 ಸ್ಥಳೀಯ ಕಲಾವಿದರು ಇಂದು ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಹಾಲಿವುಡ್ ನಟ, ನಿರ್ದೇಶಕ, ಗೀತೆ ರಚನೆಕಾರ, ಗಾಯಕ ಅಮೆರಿಕಾದ ವಿಲ್ ಸ್ಮಿತ್ ಮತ್ತು ಸ್ಟಾರ್ ಗಾಯಕ, ಗೀತೆ ರಚನೆಕಾರ ನಿಕಿ ಜಾಮ್ ಜೋಡಿ ಫೀಫಾ ವಿಶ್ವಕಪ್ 2018ರ ಅಧಿಕೃತ ಗೀತೆ 'ಲೈವ್ ಇಟ್ ಅಪ್' ಅನ್ನು ಪ್ರಸ್ತುತ ಪಡಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications