ಮಾಸ್ಕೋ, ಜೂ. 14: ಇಂದು ರಷ್ಯಾದಲ್ಲಿ ಆರಂಭಗೊಳ್ಳುತ್ತಿರುವ ಫೀಫಾ ವರ್ಲ್ಡ್ ಕಪ್ 2018 ಪಂದ್ಯಾಟದ ಆರಂಭೋತ್ಸವದಲ್ಲಿ ಮ್ಯೂಸಿಕ್ ಐಕಾನ್ ರಾಬಿ ವಿಲಿಯಮ್ಸ್, ಗಾಯಕಿ ಐಡಾ ಗ್ಯಾರಿಫುಲಿನಾ ಅವರು ಸಂಗೀತ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ.
ಬ್ರಿಟಿಷ್ ಪಾಪ್ ಸ್ಟಾರ್ ರಾಬಿ ಮತ್ತು ರಷ್ಯಾನ್ ಸೊಪ್ರಾನೊ ಐಡಾ ಅವರು ಸುಮಾರು 80,000 ಅಭಿಮಾನಿಗಳಿರುವ ಫುಟ್ಬಾಲ್ ಅರೆನಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಆದರೆ ರಾಬಿ ಅವರ ಹಿಟ್ ಸಾಂಗ್ 'ಪಾರ್ಟಿ ಲೈಕ್ ಅ ರಷ್ಯಾ'ವನ್ನು ಕಾರಣಾಂತರ ಹಾಡುತ್ತಿಲ್ಲ. ಬದಲಿಗೆ ಅವರ ಇನ್ನಿತರ ಜನಪ್ರಿಯ ಹಿಟ್ಸ್ ಗಳನ್ನು ಹಾಡುತ್ತಿದ್ದಾರೆ.
— Biyi Oluwaseun (@Biyi_Gr8) June 14, 2018
'ಪಾರ್ಟಿ ಲೈಕ್ ಅ ರಷ್ಯಾ' ಸಾಂಗನ್ನು ರಾಬಿ ಹಾಡುತ್ತಿಲ್ಲವೆಂದು ಫುಟ್ಬಾಲ್ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರಾದರೂ ರಾಬಿ ಅಭಿಮಾನಿಗಳನ್ನು ಸಮಾಧಾನಿಸಿದ್ದಾರೆ. 'ಇಂದು ನಾನು ನನ್ನ ಫೇಮಸ್ ಗೀತೆಗಳ ಸಂಗ್ರಹವನ್ನು ಹಾಡುತ್ತಿದ್ದೇನೆ' ಎಂದು ರಾಬಿ ಅಭಿಮಾನಿಗಳನ್ನು ಸಂತ್ವನಿಸುವ ಪ್ರಯತ್ನ ಮಾಡಿದ್ದಾರೆ.
#FIFAWorld Cup 2018 Opening Ceremony#fifa_2018
— FIFA World Cup 2018 Live (@FIFA_Cup_2018) June 14, 2018
Watch Live>> https://t.co/3OrjLsB75T
Watch Live>> https://t.co/TgJRGgpR3u pic.twitter.com/ibqdrzUghq
ರಾಬಿ ಐಡಾ ಅಲ್ಲದೆ ಡ್ಯಾನ್ಸರ್ಸ್, ಜಿಮ್ನ್ಯಾಸ್ಟ್ ಮತ್ತು ಟ್ರ್ಯಾಂಪೊಲಿನಿಸ್ಟ್ಸ್ ಸೇರಿದಂತೆ ಸುಮಾರು 500 ಸ್ಥಳೀಯ ಕಲಾವಿದರು ಇಂದು ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಹಾಲಿವುಡ್ ನಟ, ನಿರ್ದೇಶಕ, ಗೀತೆ ರಚನೆಕಾರ, ಗಾಯಕ ಅಮೆರಿಕಾದ ವಿಲ್ ಸ್ಮಿತ್ ಮತ್ತು ಸ್ಟಾರ್ ಗಾಯಕ, ಗೀತೆ ರಚನೆಕಾರ ನಿಕಿ ಜಾಮ್ ಜೋಡಿ ಫೀಫಾ ವಿಶ್ವಕಪ್ 2018ರ ಅಧಿಕೃತ ಗೀತೆ 'ಲೈವ್ ಇಟ್ ಅಪ್' ಅನ್ನು ಪ್ರಸ್ತುತ ಪಡಿಸಲಿದ್ದಾರೆ.