For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ವಿರುದ್ಧ 4-3ರಿಂದ ಗೆದ್ದು ಬೀಗಿದ ರಷ್ಯಾ!

ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ವಿರುದ್ಧ ಗೆದ್ದು ಬೀಗಿದ ರಷ್ಯಾ! | Oneindia Kannada
FIFA World Cup 2018: Russia beat Spain 4-3 in penalty shootout

ಮಾಸ್ಕೋ, ಜು. 1: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಪಂದ್ಯಾಟದ ಅಂತಿಮ 16ನೇ ಸುತ್ತಿನ ಸ್ಪೇನ್-ರಷ್ಯಾ ತಂಡಗಳ ಸೆಣಸಾಟದಲ್ಲಿ ಇತ್ತಂಡಗಳು 1-1ರ ಡ್ರಾ ಸಾಧಿಸಿತ್ತು. ಆದರೆ ಹೆಚ್ಚುವರಿ ಕಾಲಾವಧಿಯಲ್ಲೂ ಇತ್ತಂಡಗಳಿಂದ ಗೋಲ್ ದಾಖಲಾಗದ್ದರಿಂದ ನೀಡಲಾದ ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ, ಸ್ಪೇನನ್ನು 4-3ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಸ್ಪೇನ್ ನ ಸೆರ್ಗೆಯ್ ಇಗ್ನಶೆವಿಚ್ ಅವರು 12ನೇ ನಿಮಿಷದಲ್ಲಿ ಗೋಲ್ ಖಾತೆ ತೆರೆದರು. 41ನೇ ನಿಮಿಷದಲ್ಲಿ ರಷ್ಯಾದ ಆರ್ಟೆಮ್ ಡಿಜೂಬಾ ಅವರೂ ಗೋಲ್ ಸಿಡಿಸಿ ಇತ್ತಂಡಗಳ ಅಂಕವನ್ನು ಸರಿದೂಗಿಸಿದರು. ಪಂದ್ಯದ ವೇಳೆ ಒಂದುಬಾರಿ ಸ್ಪೇನ್ ಆಟಗಾರನ ವಿರುದ್ಧ, ಎರಡು ಬಾರಿ ರಷ್ಯಾ ಆಟಗಾರರ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.

ಪಂದ್ಯದ ಪ್ರಥಮಾರ್ಧದ 46ನೇ ನಿಮಿಷದಲ್ಲಿ ರಷ್ಯಾ ಆಟಗಾರನನ್ನು ಬದಲಿಸಿಕೊಂಡಿತು. ಯೂರಿ ಝಿರ್ಕೋವ್ ಬದಲಿಗೆ ವ್ಲಾದಿಮಿರ್ ಗ್ರ್ಯಾನಾಟ್ ತಂಡವನ್ನು ಸೇರಿಕೊಂಡರು. ಅದಾಗಿ ಮತ್ತೆ ರಷ್ಯಾ 61 ಮತ್ತು 65ನೇ ನಿಮಿಷದಲ್ಲಿ ಮತ್ತಿಬ್ಬರು ಆಟಗಾರರನ್ನು ಬದಲಿಸಿಕೊಂಡಿತು.

ಸ್ಪೇನ್ ಕೂಡ 67, 70, 80ನೇ ನಿಮಿಷದಲ್ಲಿ ಒಟ್ಟು ಮೂವರು ಆಟಗಾರರನ್ನು ಬದಲಿಸಿಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ ಎರಡು, ದ್ವಿತೀಯಾರ್ಧದಲ್ಲಿ ನಾಲ್ಕು ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಸ್ಪೇನ್-ರಷ್ಯಾ ಎರಡೂ ತಂಡಗಳಿಂದ ಗೋಲ್ ಸಿಡಿಯಲಿಲ್ಲ.

ಪಂದ್ಯಾಟ 117ನೇ ನಿಮಿಷಗಳ ವರೆಗೆ ಮುಂದುವರೆದರೂ ಗೋಲ್ 1-1ರಲ್ಲೇ ಇತ್ತು. ಹಾಗಾಗಿ ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಆಗ ಸ್ಪೇನ್ 3, ರಷ್ಯಾ 4 ಗೋಲ್ ಸಿಡಿಸಿದವು.

Story first published: Sunday, July 1, 2018, 22:52 [IST]
Other articles published on Jul 1, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+