ಫೀಫಾ ವಿಶ್ವಕಪ್: ಪೋಲ್ಯಾಂಡ್ ಗೆ 2-1ರ ಸೋಲುಣಿಸಿದ ಸೆನೆಗಲ್


ಮಾಸ್ಕೋ, ಜೂ. 19: ರಷ್ಯಾದ ಸ್ಪಾರ್ಟಕ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೀಫಾ ವಿಶ್ವಕಪ್ 2018ರ ಪೋಲ್ಯಾಂಡ್-ಸೆನೆಗಲ್ ಕಾದಾಟದಲ್ಲಿ ಸೆನೆಗಲ್ 2-1 ಅಂತರದ ಗೆಲುವು ದಾಖಲಿಸಿತು. ಪಂದ್ಯದುದ್ದಕ್ಕೂ ದಾಳಿಯಾತ್ಮಕ ಮತ್ತು ಅಷ್ಟೇ ಆಕರ್ಷಕ ಆಟ ಪ್ರದರ್ಶಿಸಿದ ಸೆನೆಗಲ್ ಪೋಲ್ಯಾಂಡ್ ವಿರುದ್ಧ ಗೆಲುವನ್ನು ಸಂಭ್ರಮಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಪಂದ್ಯದ ಮೊದಲಾರ್ಧದಲ್ಲಿ ಅಂದರೆ 38ನೇ ನಿಮಿಷದಲ್ಲಿ ಸೆನೆಗಲ್ ಪರ ಮೊದಲ ಗೋಲ್ ದಾಖಲಾಯಿತು. ಆದರೆ ಗೋಲ್ ಬಾರಿಸಿದ್ದು ಪೋಲ್ಯಾಂಡ್ ಆಟಗಾರ. ಪೋಲ್ಯಾಂಡ್ ನ ಥಿಯಗೊ ಸಿಯೋನೆಕ್ ಅವರಿಂದ ಚಿಮ್ಮಿದ ಚೆಂಡು ಪೋಲ್ಯಾಂಡ್ ಗೋಲ್ ಪೋಸ್ಟ್ ನ ಒಳಹೊಕ್ಕಿತು.
ಪಂದ್ಯದ ದ್ವಿತೀಯಾರ್ಧದ 46ನೇ ನಿಮಿಷದಲ್ಲಿ ಪೋಲ್ಯಾಂಡ್ ಆಟಗಾರನನ್ನು ಬದಲಿಸಿಕೊಂಡಿತು. ಜಾಕುಬ್ ಬ್ಲಾಸ್ಝ್ಜಿಕೋಸ್ಕಿ ಬದಲಿಗೆ ಜಾನ್ ಬೆಡ್ನರೆಕ್ ಮೈದಾನಕ್ಕಿಳಿದರು. 49ನೇ ನಿಮಿಷದಲ್ಲಿ ಸೆನೆಗಲ್ ನ ಸಲೀಫ್ ಸೇನ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು.
60ನೇ ನಿಮಿಷದಲ್ಲಿ ಸೆನೆಗಲ್ ನ ಮೇಬೆ ನಿಯಾಂಗ್ ಅವರು ಗೋಲ್ ಸಿಡಿಸಿ 2-0ಯ ಮುನ್ನಡೆ ತಂದುಕೊಟ್ಟರು. 86ನೇ ನಿಮಿಷದಲ್ಲಿ ಪೋಲ್ಯಾಂಡ್ ನ ಗ್ರ್ಜ್ಗೊರ್ಜ್ ಕ್ರೈಚೊವಿಕ್ ಅವರು ಗೋಲ್ ಬಾರಿಸಿ ಸೆನೆಗಲ್ ನೀಡಿದ್ದ ಅಂತರವನ್ನು 2-1ಕ್ಕೆ ಕಿರಿದುಗೊಳಿಸಿದರು.
ಆದರೆ ಮುಂದೆ ಪೋಲ್ಯಾಂಡ್ ನಿಂದ ಗೋಲ್ ದಾಖಲಾಗಲಿಲ್ಲ. ಫೀಫಾ ರ್ಯಾಂಕಿಂಗ್ ನಲ್ಲಿ 8ನೇ ಸ್ಥಾನದಲ್ಲಿದ್ದ ಪೋಲ್ಯಾಂಡ್ 27ನೇ ಸ್ಥಾನದಲ್ಲಿದ್ದ ಸೆನೆಗಲ್ ಎದುರು ತಲೆಬಾಗಿತು. ಎಚ್ ಗುಂಪಿನ ಪಂದ್ಯ ಇದಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications