ಫೀಫಾ ವಿಶ್ವಕಪ್: ಕೋಸ್ಟರಿಕಾ ಎದುರು ಸರ್ಬಿಯಾ 1-0ಯ ಗೆಲುವು

ಮಾಸ್ಕೋ, ಜೂ. 17: ಇಂದು ನಡೆದ ಫೀಫಾ ವಿಶ್ವಕಪ್ ಇ ಗ್ರೂಪಿನ ಪಂದ್ಯಾಟದಲ್ಲಿ ಕೋಸ್ಟರಿಕಾ ಎದುರು ಸರ್ಬಿಯಾ 1-0 ಅಂತರದ ಗೆಲುವು ದಾಖಲಿಸಿದೆ. ಅಲೆಕ್ಸಾಂಡರ್ ಕೊಲಾರೊವ್ ಅವರು 55ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಸರ್ಬಿಯಾ ಗೆಲುವನ್ನು ಸಂಭ್ರಮಿಸಿತು.
18ನೇ ನಿಮಿಷದಲ್ಲಿ ಸರ್ಬಿಯಾ ಮೊದಲ ಗೋಲ್ ದಾಖಲಿಸಲು ಪ್ರಯತ್ನಿಸಿತು. ಆದರೆ ಕೋಸ್ಟರಿಕಾ ಆಟಗಾರರು ಗೋಲ್ ದಾಖಲಾಗುವುದನ್ನು ತಪ್ಪಿಸಿದರು. ಇತ್ತಂಡಗಳ ನಡುವಿನ ಸೆಣಸಾಟದಿಂದಾಗಿ ಪಂದ್ಯ ಕೊಂಚ ಕುತೂಹಲ ಮೂಡಿಸಿತು.
ಸ್ಕೋರ್ ಕಾರ್ಡ್ ಮತ್ತು ಕಾಮೆಂಟರಿಗೆ ಲಿಂಕ್ ಕ್ಲಿಕ್ ಮಾಡಿ
ಗುದ್ದಾಟದ ರೀತಿಯ ಆಟಕ್ಕಾಗಿ ಕೋಸ್ಟರಿಕಾದ ಫ್ರಾನ್ಸಿಸ್ಕೋ ಕ್ಯಾಲ್ವೊ ಅವರಿಗೆ 22ನೇ ನಿಮಿಷದಲ್ಲಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು. ಇದಾಗಿ 37ನೇ ನಿಮಿಷದವರೆಗೂ ಇತ್ತಂಡಗಳು ಮೊದಲ ಗೋಲ್ ದಾಖಲಿಸಿಲು ತೀವ್ರ ಸೆಣಸಾಟ ನಡೆಸಿದರು. ಆದರೆ ಪಂದ್ಯದ ಮೊದಲಾರ್ಧದ ಅಂಕಪಟ್ಟಿ 0-0ಯಲ್ಲೇ ಮುಂದುವರೆಯಿತು.
55ನೇ ನಿಮಿಷದಲ್ಲಿ ಕೋಸ್ಟರಿಕಾದ ಡೇವಿಡ್ ಗುಜ್ಮನ್ ಅವರ ವಿರುದ್ಧಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು. ಅದಾಗಿ ಸರ್ಬಿಯಾದ ಅಲೆಕ್ಸಾಂಡರ್ ಕೊಲಾರೊವ್ ಅವರ ಫ್ರೀ ಕಿಕ್ ಚೆಂಡನ್ನು ಕೋಸ್ಟರಿಕಾ ಗೋಲ್ ಪೋಸ್ಟಿನೊಳಗೆ ತಲುಪಿಸಿತು.
ಸರ್ಬಿಯಾದ 1-0 ಮುನ್ನಡೆಯನ್ನು ಸರಿದೂಗಿಸಲು ಕೋಸ್ಟರಿಕಾ ಬಹಳ ಪ್ರಯತ್ನಿಸಿತು. ಆದರೆ ಸರ್ಬಿಯಾ ಆಟಗಾರರು ಗೋಲ್ ದಾಖಲಾಗದಂತೆ ತಡೆಯೊಡ್ಡಿದರು. 5 ನಿಮಿಷಗಳನ್ನು ಪಂದ್ಯದ ವೇಳೆ ಸೇರಿಸಲಾಯಿತು. ಪಂದ್ಯ 95ನೇ ನಿಮಿಷಗಳವರೆಗೆ ಮುಂದುವರೆದು ಅಂತಿಮವಾಗಿ ಸರ್ಬಿಯಾ ಗೆಲುವಿನ ನಗು ಬೀರಿತು.
ಕೋಸ್ಟರಿಕಾ ತಂಡವನ್ನು ಕೀಲರ್ ನವಸ್ - ಜಾನಿ ಅಕೋಸ್ಟಾ, ಜಿಯಾನ್ಕಾರ್ಲೊ ಗೊನ್ಜಾಲೆಜ್, ಆಸ್ಕರ್ ಡುವಾರ್ಟೆ, ಫ್ರಾನ್ಸಿಸ್ಕೊ ಕ್ಯಾಲ್ವೊ - ಕ್ರಿಸ್ಟಿನ್ ಗ್ಯಾಂಬೋವಾ, ಸೆಲ್ಸೊ ಬೋರ್ಜೆಸ್, ಬ್ರಿಯಾನ್ ರುಯಿಜ್ - ಡೇವಿಡ್ ಗುಜ್ಮನ್, ಜೋಹಾನ್ ವೆನೆಗಾಸ್, ಮಾರ್ಕೋಸ್ ಉರೆನಾ ಪ್ರತಿನಿಧಿಸಿದ್ದರು.
ಇತ್ತ ಸರ್ಬಿಯಾ ತಂಡದಲ್ಲಿ ವ್ಲಾಡಿಮಿರ್ ಸ್ಟೋಝೋವಿಕ್ - ಡ್ಸುಕೊ ಟೋಸಿಕ್, ಬ್ರಾನಿಸ್ಲಾವ್ ಇವನೊವಿಕ್, ಅಲೆಕ್ಸಾಂಡರ್ ಕೊಲೊರೊವ್ - ನಿಕೋಲಾ ಮಿಲೆನ್ಕೋವಿಕ್, ಲ್ಯೂಕಾ ಮಿಲಿವೊಜೆವಿಕ್, ಡ್ಸುನ್ ಟಾಡಿಕ್, ಸೆರ್ಗೆಜ್ ಮಿಲಿಂಕೊವಿಕ್-ಸಾವಿಕ್, ನೆಮಂಜ ಮಾಟಿಕ್ - ಆಡಮ್ ಲಜಜಿಕ್, ಅಲೆಕ್ಸಾಂಡರ್ ಮಿಟ್ರೋವಿಕ್ ಕಣಕ್ಕಿಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications