For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ: ರೋಚಕ ಪಂದ್ಯದಲ್ಲಿ ಇರಾನ್ ವಿರುದ್ಧ ಸ್ಪೇನ್ 1-0ಯ ಗೆಲುವು

FIFA World Cup 2018: Spain beat Iran 1-0

ಮಾಸ್ಕೋ, ಜೂ. 21: ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಬಿ ಗ್ರೂಪ್ ನಿಂದ ಇಂದು ಕಣಕ್ಕಿಳಿದಿದ್ದ ಇರಾನ್-ಸ್ಪೇನ್ ತಂಡಗಳಲ್ಲಿ ಸ್ಪೇನ್ 1-0ಯ ಗೆಲುವು ದಾಖಲಿಸಿದೆ. ಡಿಯಾಗೋ ಕೋಸ್ಟ ಅವರು 54ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ಸ್ಪೇನ್ ನ ಗೆಲುವನ್ನು ಬರೆಯಿತು.

ಸ್ಕೋರ್ ಕಾರ್ಡ್

ಬುಧವಾರದ ಇರಾನ್-ಸ್ಪೇನ್ ನಡುವಣ ಕಾದಾಟದಲ್ಲಿ ಪಂದ್ಯದ ಮೊದಲಾರ್ಧ ಮುಕ್ತಾಯದವರೆಗೂ ಗೋಲ್ ದಾಖಲಾಗದೆ ಇತ್ತಂಡಗಳು ಸಮಬಲ ಸಾಧಿಸಿದವು. ಗೋಲ್ ಗಾಗಿ ಇತ್ತಂಡಗಳ ನಡುವಿನ ತೀವ್ರ ಸೆಣಸಾಟ ರೋಚಕವೆನಿಸಿತು.

ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೂ ಮುನ್ನ ಹೆಚ್ಚುವರಿ ಮೂರು ನಿಮಿಷಗಳನ್ನು ಸೇರಿಸಲಾಯಿತು. ಮೊದಲಾರ್ಧದಲ್ಲಿ ಗಾಯಗೊಂಡು ಹೊರ ನಡೆದಿದ್ದ ಇರಾನ್ ನ ಎಝಟೊಲಾಹಿ ಅವರು 26ನೇ ನಿಮಿಷದಲ್ಲಿ ಮರಳಿ ತಂಡವನ್ನು ಸೇರಿಕೊಳ್ಳುವ ಮೂಲಕ ತಂಡಕ್ಕೆ ಬಲ ತುಂಬಿದರು.

ದ್ವಿತೀಯಾರ್ಧ ಪ್ರಾರಂಭಗೊಂಡ ಬಳಿಕವೂ ಬಹಳಹೊತ್ತು ಎರಡೂ ತಂಡಗಳ ಮಧ್ಯೆ ಗೋಲ್ ಗಾಗಿ ಪೈಪೋಟಿ ನಡೆಯಿತು. ಸ್ಪೇನ್ ನ ಡಿಯಾಗೋ ಕೋಸ್ಟ ಅವರು ಗೋಲ್ ಸಿಡಿಸಿ ಸ್ಪೇನ್ ಗೆ ಮುನ್ನಡೆ ತಂದುಕೊಟ್ಟರು. 54ನೇ ನಿಮಿಷದಲ್ಲಿ ಕೋಸ್ಟಾ ಅವರಿಂದ ಮೊದಲ ಗೋಲ್ ದಾಖಲಾಯಿತು.

ಇದಾಗಿ 62ನೇ ನಿಮಿಷದಲ್ಲಿ ಇರಾನ್ ಪರ ಗೋಲ್ ದಾಖಲಾಯಿತು ಎಂಬಂತೆ ಕಂಡುಬಂದಿತ್ತು. ಆದರೆ ಗೋಲ್ ಕುರಿತು ಇತ್ತಂಡಗಳ ಮಧ್ಯೆ ಜಗಳ ನಡೆಯಿತು. ಅಂಫೈರ್ ಮಧ್ಯೆ ಪ್ರವೇಶಿಸಿ ಗೋಲ್ ಇಲ್ಲವೆಂದು ಸಾರಿದರು. ಮತ್ತೂ ಇತ್ತಂಡಗಳ ಕಾದಾಟ ಮುಂದುವರೆಯಿತಾದರೂ ಗೋಲ್ ದಾಖಲಾಗದ ಕಾರಣ ಸ್ಪೇನ್ ಗೆದ್ದಿತು.

Story first published: Thursday, June 21, 2018, 1:41 [IST]
Other articles published on Jun 21, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+