ಫೀಫಾ ವಿಶ್ವಕಪ್: ಸೌತ್ ಕೊರಿಯಾ ವಿರುದ್ಧ ಸ್ವೀಡನ್ ಗೆ 1-0ಯ ಗೆಲುವು

ಮಾಸ್ಕೋ, ಜೂ. 18: ರಷ್ಯಾದ ನಿಜ್ನಿ ನವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆದ ಸ್ವೀಡನ್-ಸೌತ್ ಕೊರಿಯಾ ನಡುವಣ ಫೀಫಾ ವಿಶ್ವಕಪ್ ಕದಾಟದಲ್ಲಿ ಸ್ವೀಡನ್ 1-0 ಅಂತರದ ಗೆಲುವು ಸಾಧಿಸಿದೆ. 65ನೇ ನಿಮಿಷದಲ್ಲಿ ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ ಸಿಡಿಸಿದ ಗೋಲ್ ನಿಂದಾಗಿ ಸ್ವೀಡನ್ ಗೆಲುವನ್ನಾಚರಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಗ್ರೂಪ್ ಎಫ್ ನಿಂದ ಕಣಕ್ಕಿಳಿದಿದ್ದ ಸ್ವೀಡನ್, ಸೌತ್ ಕೊರಿಯಾ ನಡುವಿನ ಸೋಮವಾರದ ಪಂದ್ಯದ ಮೊದಲಾರ್ಧದಲ್ಲಿ ಗೋಲ್ ದಾಖಲಾಗಿರಲಿಲ್ಲ. ಮೊದಲಾರ್ಧ ಮುಕ್ತಾಯಕ್ಕೂ ಮುನ್ನ ಪಂದ್ಯದ ನಿಲುಗಡೆಯನ್ನು ಸರಿದೂಗಿಸುವುದಕ್ಕಾಗಿ 2 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ.
21ನೇ ನಿಮಿಷದಲ್ಲಿ ಸ್ವೀಡನ್ ಮೊದಲು ಗೋಲ್ ಖಾತೆ ತೆರೆಯುವುದರಲ್ಲಿದ್ದರು. ಆದರೆ ಸೌತ್ ಕೊರಿಯಾ ಗೋಲ್ ಕೀಪರ್ ಅದ್ಭುತವಾಗಿ ಅದನ್ನು ತಡೆದರು. ಇದೇ ನಿಮಿಷದಲ್ಲಿ ಎರಡು ಸಾರಿ ಸ್ವೀಡನ್ ಗೋಲ್ ಗೆ ಯತ್ನಿಸಿತಾದರೂ ಚೊ ಹ್ಯುನ್-ವೂ ಗೋಲ್ ಗೆ ಅವಕಾಶ ನೀಡಲಿಲ್ಲ.
12ನೇ ನಿಮಿಷದಲ್ಲಿ ಕೊರಿಯಾದ ಕಿಮ್ ಶಿನ್ ವೂಕ್ ಎದುರು ಮೊದಲ ಬಾರಿಗೆ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು. ಇದಾಗಿ 55ನೇ ನಿಮಿಷದಲ್ಲಿ ಸೌತ್ ಕೊರಿಯಾದ ಹಂಗ್ ಹೆ-ಚಾನ್ ವಿರುದ್ಧ ಎರಡನೇ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು.
65ನೇ ನಿಮಿಷದಲ್ಲಿ ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ ಒದ್ದ ಚೆಂಡು ಸ್ವಿಡನ್ ಗೆ ಗೋಲ್ ಖಾತೆ ತೆರೆಯಲು ನೆರವಾಯಿತು. ಆ ಬಳಿಕ ಕೊರಿಯಾ ಗೋಲ್ ಸಿಡಿಸಲು ಕೊಸರಾಡಿತಾದರೂ ಸ್ವೀಡನ್ ಬಿಟ್ಟುಕೊಡಲಿಲ್ಲ. ದ್ವಿತೀಯಾರ್ಧದಲ್ಲಿ ಆಟಗಾರರ ಬದಲಾವಣೆಗಾಗಿ ಆಟ ನಿಲುಗಡೆಯಾಗಿದ್ದಕ್ಕೆ 4 ಹೆಚ್ಚುವರಿ ನಿಮಿಷಗಳನ್ನು ಸೇರಿಸಿದರೂ ಕೊರಿಯಾ ಗೋಲ್ ಬಾರಿಸದೆ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications