

ನವದೆಹಲಿ, ಜೂ. 4: ಮುಂಬರಲಿರುವ ಫೀಫಾ ವಿಶ್ವಕಪ್ ಗಾಗಿ ವಿಶ್ವದಾದ್ಯಂತ 32 ತಂಡಗಳು ಭರ್ಜರಿ ತರಬೇತಿ ನಡೆಸುತ್ತಿವೆ. ಜೂನ್ 14 ರಿಂದ ಜುಲೈ 15ರ ವರೆಗೆ ರಷ್ಯಾದಲ್ಲಿ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾಟ ನಡೆಯಲಿದ್ದು, ಸ್ಪರ್ಧೆಗಾಗಿ ಅರ್ಹತೆ ಗಿಟ್ಟಿಸಿಕೊಂಡಿರುವ ಎಲ್ಲಾ 32 ತಂಡಗಳೂ ಟ್ರೋಫಿ ಗೆಲ್ಲುವತ್ತ ದೃಷ್ಟಿ ನೆಟ್ಟಿವೆ.
ಫುಟ್ಬಾಲ್ ಮೈದಾನದಲ್ಲಿ ಗುರುತಿಸಿಕೊಂಡಿರುವ ತಂಡಗಳಲ್ಲಿ ಮೆಕ್ಸಿಕೋ ಕೂಡ ಒಂದು. ಫುಟ್ಬಾಲ್ ನಲ್ಲಿ ಮೆಕ್ಸಿಕೋ ಬಲಾಡ್ಯ ತಂಡವೆನ್ನುವುದಕ್ಕೆ ಮೆಕ್ಸಿಕೋ ಸದ್ಯದ ಫೀಫಾ ರ್ಯಾಂಕಿಂಗ್ ನಲ್ಲಿ 15ನೇ ಸ್ಥಾನದಲ್ಲಿರುವುದೇ ಸಾಕ್ಷಿ.
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ 2014ರಂದು ನಡೆದಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಬಲ ಪೈಪೋಟಿ ನಡೆಸಿದ್ದ ಮೆಕ್ಸಿಕೋ ನಂತರ ಪ್ರಶಸ್ತಿ ಸುತ್ತಿನಿಂದ ಹೊರ ನಡೆದಿತ್ತು. ಈ ಬಾರಿ ಮೆಕ್ಸಿಕೋ ಉತ್ತಮ ಫಾರ್ಮ್ ನಲ್ಲಿದ್ದು, ಪ್ರಶಸ್ತಿ ಸುತ್ತಿಗೆ ನುಗ್ಗುವ ನಿರೀಕ್ಷೆ ಮೂಡಿಸಿದೆ.
ಮೆಕ್ಸಿಕೋ ಬಲಿಷ್ಟ ತಂಡಗಳಲ್ಲಿ ಒಂದೆಂಬುದಕ್ಕೆ ಕೆಳಗೊಂದಿಷ್ಟು ಮಾಹಿತಿಗಳಿವೆ..
ರಾಷ್ಟ್ರ: ಮೆಕ್ಸಿಕೋ, ಗ್ರೂಫ್ ಎಫ್ ನಲ್ಲಿದೆ.
ಪಂದ್ಯಗಳು: vs ಜರ್ಮನಿ, ಜೂನ್ 17, ಭಾನುವಾರ, 8.30 PM (ಲುಝ್ನಿಕಿ ಕ್ರೀಡಾಂಗಣ, ಮಾಸ್ಕೋ), vs ಕೊರಿಯಾ ರಿಪಬ್ಲಿಕ್, ಜೂನ್ 23, ಶನಿವಾರ, 8:30 PM (ರಾಸ್ಟೊವ್ ಅರೆನಾ, ರಾಸ್ಟೊವ್-ಆನ್-ಡಾನ್), Vsಸ್ವೀಡನ್, ಜೂನ್ 27 ಬುಧವಾರ, 7:30 PM (ಕೇಂದ್ರ ಕ್ರೀಡಾಂಗಣ, ಯೆಕಟೇನ್ಬರ್ಗ್)
ಫೀಫಾ ಶ್ರೇಯಾಂಕ: 15
ಹಿಂದಿನ ವಿಶ್ವ ಕಪ್: 2014 (16 ಸುತ್ತಿನಲ್ಲಿ ಹೊರಹಾಕಲ್ಪಟ್ಟಿದೆ)
ಅತ್ಯುತ್ತಮ ಮುಕ್ತಾಯ: 1986 ರಲ್ಲಿ ಕ್ವಾರ್ಟರ್ ಫೈನಲ್ಸ್
ಸ್ಟಾರ್ ಆಟಗಾರರು: ಜೇವಿಯರ್ ಹೆರ್ನಾಂಡೆಜ್ (ವೆಸ್ಟ್ ಹ್ಯಾಮ್ ಯುನೈಟೆಡ್ನ ಸ್ಟ್ರೈಕರ್), ಜೀಸಸ್ ಕರೋನಾ (ಎಫ್ಸಿ ಪೋರ್ಟೊಗಾಗಿ ವಿಂಗರ್), ಹಿರ್ವಿಂಗ್ ಲೊಜಾನೊ (ಪಿಎಸ್ವಿ ಐಂಡ್ಹೋವನ್ಗಾಗಿ ವಿಂಗರ್) ಮತ್ತು ಜೊನಾಥನ್ ಡಾಸ್ ಸ್ಯಾಂಟೋಸ್ (ಸ್ಟ್ರೈಕರ್ ಲಾ ಗ್ಯಾಲಕ್ಸಿ).
ತರಬೇತುದಾರ: ಜುವಾನ್ ಕಾರ್ಲೋಸ್ ಒಸೊರಿಯೊ