ಫೀಫಾ ವಿಶ್ವಕಪ್ 2018: ಆತಿಥೇಯ ರಷ್ಯಾಕ್ಕೆ ಆಘಾತವಿತ್ತ ಉರುಗ್ವೆ


ಮಾಸ್ಕೋ, ಜೂ. 25: ರಷ್ಯಾದ ಸಮರಾ ಅರೆನಾದಲ್ಲಿನ ಆತಿಥೇಯ ರಷ್ಯಾ ಮತ್ತು ಉರುಗ್ವೆ ತಂಡಗಳ ಕುತೂಹಲಕಾರಿ ಪಂದ್ಯದಲ್ಲಿ ಉರುಗ್ವೆ 3-0 ಅಂತರದ ಗೆಲುವಿನೊಂದಿಗೆ ರಷ್ಯಾಕ್ಕೆ ಆಘಾತ ನೀಡಿದೆ. ಪಂದ್ಯದ ಮೊದಲಾರ್ಧದಲ್ಲಿ ಎರಡು ಗೋಲ್, ದ್ವಿತೀಯಾರ್ಧದಲ್ಲಿ ಒಂದು ಗೋಲ್ ಬಾರಿಸಿ ಉರುಗ್ವೆ ಗೆಲುವನ್ನು ಸಂಭ್ರಮಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಎ ಗ್ರೂಪಿನ ಈ ಪಂದ್ಯದಲ್ಲಿ ಲೂಯಿಸ್ ಸ್ವಾರೇಜ್ 10ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಉರುಗ್ವೆ ತಂಡದ ಗೋಲ್ ಖಾತೆ ತೆರೆದರು. ಅನಂತರ ಡೆನಿಸ್ ಚೆರಿಶೆವ್ 23ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡದ ಗೆಲುವನ್ನು ಆಗಲೇ ಸಾರಿದ್ದರು.
ಪಂದ್ಯದ ದ್ವಿತೀಯಾರ್ಧದ ಅಂತಿಮ ಕ್ಷಣದಲ್ಲಿ ಅಂದರೆ 90ನೇ ನಿಮಿಷದಲ್ಲಿ ಉರುಗ್ವೆಯ ಎಡಿಸನ್ ಕವಾನಿ ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ 3-0ಯ ಮುನ್ನಡೆ ತಂದು ಕೊಟ್ಟರು. ಆ ಬಳಿಕ 4 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ.
36ನೇ ನಿಮಿಷದಲ್ಲಿ ಇಗೊರ್ ಸ್ಮೊಲ್ನಿಕೋವ್ ಅವರ ವಿರುದ್ಧ ರೆಡ್ ಕಾರ್ಡ್ ಪ್ರದರ್ಶಿಸಲಾಯ್ತು. ಹಾಗಾಗಿ ಇಗೊರ್ ಪಂದ್ಯದಿಂದ ಹೊರ ನಡೆಯಬೇಕಾಯ್ತು. ಇದೂ ರಷ್ಯಾದ ಹಿನ್ನಡೆಗೆ ಒಂದು ಕಾರಣವೆನ್ನಬಹುದು. ಒಟ್ಟಿನಲ್ಲಿ ಆತಿಥೇಯ ರಷ್ಯಾದ ಸೋಲು ಫುಟ್ಬಾಲ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications