ಫಿಫಾ ವಿಶ್ವಕಪ್ ಕತಾರ್ 2022: ಭಾರತದಲ್ಲಿ ವಯಾಕಾಮ್18 ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ

ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18 ಸ್ಪೋರ್ಟ್ಸ್ 'ಇಸ್ಸೆ ಬಡಾ ಕುಚ್ ನಹೀ' ಎಂಬ ಅಭಿಯಾನದೊಂದಿಗೆ 'ಫಿಫಾ ವಿಶ್ವಕಪ್ ಕತಾರ್-2022'ಗೆ ಸಜ್ಜಾಗುತ್ತಿದೆ. ವಿಶ್ವದ ಅತಿದೊಡ್ಡ ಕ್ರೀಡಾಹಬ್ಬಕ್ಕೆ ಈ ಅಭಿಯಾನದ ಮೂಲಕ ಫುಟ್ಬಾಲ್ ಪ್ರೇಮಿಗಳ ಕಾತರ ಹೆಚ್ಚಿಸಲಾಗುತ್ತಿದೆ.
ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ನಡೆಯಲಿರುವ ಫಿಫಾ ವಿಶ್ವಕಪ್ ಕತಾರ್-2022ರ ಎಲ್ಲಾ ಪಂದ್ಯಗಳು ಜಿಯೋ ಸಿನಿಮಾ ಆ್ಯಪ್ ಮತ್ತು ಮತ್ತು ಪೇ-ಟಿವಿ ಚಾನಲ್ಗಳಾದ ಸ್ಪೋರ್ಟ್ಸ್18-1 ಎಸ್ಡಿ ಮತ್ತು ಎಚ್ಡಿಗಳಲ್ಲಿ ನೇರಪ್ರಸಾರ ಕಾಣಲಿವೆ. ಜಿಯೋ ಸಿನಿಮಾ ಆ್ಯಪ್ ಈಗ ಟೆಲಿಕಾಂ ಸರ್ವೀಸ್ ಸಬ್ಸ್ಕ್ರೈಬರ್ಗಳಿಗೆ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ.
ವಿಶ್ವದಲ್ಲಿ ಅತಿಹೆಚ್ಚು ಜನರು ವೀಕ್ಷಿಸುವ ಕ್ರೀಡಾಕೂಟವಾದ ಫಿಫಾ ವಿಶ್ವಕಪ್ನ ಎನರ್ಜಿಯನ್ನು ದೇಶದ ಎಲ್ಲರೂ ಅನುಭವಿಸಬೇಕೆಂಬುದು ನಮ್ಮ ಬಯಕೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇದನ್ನು ಆನಂದಿಸುವಂತಾಗಬೇಕು. ನಮ್ಮ ಅಭಿಯಾನ ಇದೇ ಸಂಭ್ರಮವನ್ನು ಸಾರುತ್ತಿದೆ ಎಂದು ವಯಾಕಾಮ್18 ಸ್ಪೋರ್ಟ್ಸ್ ವಕ್ತಾರರು ತಿಳಿಸಿದ್ದಾರೆ.
ಫಿಫಾ ವಿಶ್ವಕಪ್-2022 ವೇಳೆ ಜಿಯೋ ಸಿನಿಮಾವು ತಮಿಳು, ಮಲಯಾಳಂ, ಬೆಂಗಾಲಿ ಸಹಿತ ವಿವಿಧ ಭಾಷೆಗಳಲ್ಲಿ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಯಾವುದೇ ಸಬ್ಸ್ಕ್ರಿಪ್ಶನ್ ಶುಲ್ಕ ಇಲ್ಲದೆ ಫುಟ್ಬಾಲ್ ಅಭಿಮಾನಿಗಳು ಈ ಭಾಷೆಗಳಲ್ಲಿ ಫುಟ್ಬಾಲ್ ಆಟವನ್ನು ಸವಿಯಬಹುದಾಗಿದೆ. 64 ಪಂದ್ಯಗಳ ಫಿಫಾ ವಿಶ್ವಕಪ್, 4ಕೆನಲ್ಲಿ ಲೈವ್ ಸ್ಟ್ರೀಮಿಂಗ್ ಕಾಣಲಿದೆ.
ಇನ್ನು ಇತ್ತೀಚೆಗಷ್ಟೇ ಕ್ರಿಕೆಟ್ ಸೌತ್ ಆಫ್ರಿಕಾ ಆಯೋಜಿಸಲಿರುವ SA20 ಲೀಗ್‌ನ ಮೊದಲ ಆವೃತ್ತಿಯ ಟಿ20 ಟೂರ್ನಿಗೆ ವಯೋಕಾಮ್ 18 10 ವರ್ಷಗಳ ಕಾರ್ಯತಂತ್ರ ಪಾಲುದಾರಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications