FIFA WC 2022: ಮ್ಯಾಚ್ ಫಿಕ್ಸಿಂಗ್‌ಗಾಗಿ ಈಕ್ವೆಡಾರ್ ಆಟಗಾರರಿಗೆ 60 ಕೋಟಿ ರುಪಾಯಿ ಲಂಚ?

ಕತಾರ್‍ನಲ್ಲಿ ನಡೆಯಲಿರುವ ಫಿಪಾ ವಿಶ್ವಕಪ್ ಭಾನುವಾರ ಅದ್ಧೂರಿಯಾಗಿ ಆರಂಭವಾಗಲಿದೆ. ಆದರೆ, ವಿಶ್ವಕಪ್ ಆರಂಭಕ್ಕೆ ಮುನ್ನವೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.
ಬ್ರಿಟಿಷ್ ಸೆಂಟರ್ ಫಾರ್ ಮಿಡಲ್ ಈಸ್ಟ್ ಸ್ಟಡೀಸ್‌ನ ಪ್ರಾದೇಶಿಕ ನಿರ್ದೇಶಕ ಅಮ್ಜದ್ ತಾಹಾ ಗುರುವಾರ ಟ್ವೀಟ್ ಮಾಡಿದ್ದು, "ವಿಶ್ವಕಪ್‌ನ ಆರಂಭಿಕ ಪಂದ್ಯ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಕತಾರ್ ವಿರುದ್ಧ ಸೋಲಲು ಈಕ್ವೆಡಾರ್ ಆಟಗಾರರಿಗೆ 7.4 ಮಿಲಿಯನ್ ಡಾಲರ್ (ಅಂದಾಜು 60 ಕೋಟಿ ರುಪಾಯಿ) ಲಂಚ ನೀಡಿದೆ, ಈ ಬಗ್ಗೆ ತಂಡದ ಒಳಗಿನವರೇ ಖಚಿತಪಡಿಸಿದ್ದಾರೆ. ಆದರೆ ಇದನ್ನು ಸುಳ್ಳು ಎಂದು ಭಾವಿಸುತ್ತೇವೆ, ಈ ಬಗ್ಗೆ ಫಿಫಾ ಕೂಡಲೇ ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಆರೋಪ ಹೊತ್ತಿರುವ ಕತಾರ್ ನಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿದೆ. ಮಹತ್ವದ ಟೂರ್ನಿಯ ಆರಂಭಕ್ಕೆ ಮುನ್ನ ಕೇಳಿ ಬಂದಿರುವ ಆರೋಪಗಳು ಫುಟ್ಬಾಲ್ ಪ್ರಿಯರಿಗೆ ಆಘಾತ ನೀಡಿದೆ. ವಿಶ್ವಕಪ್ ಆರಂಭಕ್ಕೆ ಮುನ್ನ ಫಿಫಾ ಈ ಗಂಭಿರ ಆರೋಪಗಳ ಕಡೆ ಗಮನ ನೀಡಿ ಸ್ಪಷ್ಟನೆ ನೀಡಬೇಕಿದೆ.
ನವೆಂಬರ್ 20 ರಂದು ಅಲ್ ಬೇತ್ ಕ್ರೀಡಾಂಗಣದಲ್ಲಿ ವಿಶ್ವದ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಆರಂಭಿಕ ಪಂದ್ಯದಲ್ಲಿ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಕತಾರ್ ವಿರುದ್ಧ ಸೋಲುವಂತೆ ಈಕ್ವೆಡಾರ್ ಎಂಟು ಆಟಗಾರರಿಗೆ ಸುಮಾರು 60 ಕೋಟಿ ರುಪಾಯಿ ಪಾವತಿಸುವ ಮೂಲಕ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ವರದಿ ನಿರಾಕರಿಸಿದ ಓವನ್ ಜೋನ್ಸ್
ತಾಹಾ ಅವರ ಆರೋಪವನ್ನು ಕತಾರ್ ನ ಹಮಾನ್ ಬಿನ್ ಖಲೀಫಾ ವಿಶ್ವವಿದ್ಯಾಲಯದಲ್ಲಿ ಸಹಾಯಕರಾಗಿರುವ ಮಾರ್ಕ್ ಓವನ್ ಜೋನ್ಸ್ ನಿರಾಕರಿಸಿದ್ದಾರೆ. ತಾಹಾ ಯಾವಾಗಲೂ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ ಎಂದು ಅವರು ಹೇಳಿದ್ದಾರೆ. ಕತಾರ್ ನಲ್ಲಿ ಅದ್ದೂರಿಯಾಗಿ ವಿಶ್ವಕಪ್ ನಡೆಯುತ್ತಿರುವುದರಿಂದ, ತಾಹಾ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಾಹಾ ಮಾಡಿರುವ ಆರೋಪದ ಬಗ್ಗೆ ಇದುವರೆಗೂ ಫಿಫಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಆದರೂ, ಫಿಫಾ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೆಚ್ಚಿನ ಗಮನ ಇರಿಸಿದೆ. ಯಾವುದೇ ಭ್ರಷ್ಟಾಚಾರಕ್ಕೂ ಅದು ಆಸ್ಪದ ನೀಡುವುದಿಲ್ಲ ಎಂದು ಹೇಳಿದೆ. ಫ್ರಂಟ್ ಆಫೀಸ್ ಸ್ಪೋರ್ಟ್ಸ್ ವರದಿಯ ಪ್ರಕಾರ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಬೆಟ್ಟಿಂಗ್ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications