For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: 2-1 ಅಂತರದಿಂದ ಮೊರಾಕ್ಕೋ ವಿರುದ್ಧ ಗೆದ್ದು 3ನೇ ಸ್ಥಾನ ಪಡೆದ ಕ್ರೊಯೇಶಿಯಾ

FIFA World cup 2022: Croatia win against Moracco by 2-1 and clinches third place

ಫಿಫಾ ವಿಶ್ವಕಪ್‌ 2022ರಲ್ಲಿ ಶನಿವಾರ 3ನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕ್ರೊಯೇಶಿಯಾ ಹಾಗೂ ಮೊರಾಕ್ಕೋ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊರಾಕ್ಕೋ ತಂಡವನ್ನು ಕ್ರೊಯೇಶಿಯಾ ಮಣಿಸಿದ್ದು ಈ ವಿಶ್ವಕಪ್ ಟೂರ್ನಿಯ 3ನೇ ಸ್ಥಾನಿಯಾಗಿ ಹೊರಹೊಮ್ಮಿದೆ. ಈ ಮೂಲಕ ಕ್ರೊಯೇಶಿಯಾ 2018ರಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ಬಳಿಕ ಈ ಸಾಧನೆ ಮಾಡಿದೆ.

ಆರಂಭದಿಂದಲೇ ಎರಡು ತಂಡಗಳು ಕುಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಲು ಆರಂಭಿಸಿದ್ದವು. ಪಂದ್ಯ ಆರಂಭವಾದ 7ನೇ ನಿಮಿಷದಲ್ಲಿಯೇ ಕ್ರೊಯೇಶಿಯಾ ಮೊದಲ ಗೋಲು ಸಿಡಿಸಿ ಮೇಲುಗೈ ಸಾಧಿಸಿತು. ಗ್ವಾರ್ಡಿಯೋಲ್ ಈ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಅದಾದ ಎರಡೇ ನಿಮಿಷದಲ್ಲಿ ಮೊರಾಕ್ಕೋ ತಂಡ ಕೂಡ ತಿರುಗಿ ಬಿತ್ತು. ಅರಾಫ್ ದರಿ ಮೊರಾಕ್ಕೋ ಪರ ಗೋಲು ಸಿಡಿಸಿದ ಕಾರಣ ಇತ್ತಂಡಗಳುಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಹೀಗೆ 9 ನಿಮಿಷಗಳಲ್ಲಿ ಎರಡು ತಂಡಗಳು ಕೂಡ ತಲಾ ಒಂದೊಂದು ಗೋಲು ಗಳಿಸಿ ಪಂದ್ಯದ ರೋಚಕತೆ ಹೆಚ್ಚಿಸಿತು. ಅದಾದ ಬಳಿಕ ಪಂದ್ಯದ 42ನೇ ನಿಮಿಷದಲ್ಲಿ ಕ್ರೊಯೇಶಿಯಾ ಪರವಾಗಿ ಮತ್ತೊಂದು ಗೋಲು ದಾಖಲಾಯಿತು. ಒರ್ಸಿಕ್ ಅದ್ಭುತವಾಗಿ ಚೆಂಡನ್ನು ಗೋಲ್‌ಪೋಸ್ಟ್‌ಗೆ ತಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಕ್ರಿಯೇಶಿಯಾ 2-1 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮೊದಲಾರ್ಧದಲ್ಲಿ 2-1 ಅಂತರದಿಂದ ಕ್ರೊಯೇಶಿಯಾ ಮುನ್ನಡೆ ಸಾಧಿಸಿತು.

ಇನ್ನು ದ್ವಿತಿಯಾರ್ಧದಲ್ಲಿ ಕೂಡ ಎರಡು ತಂಡಗಳು ಪೈಪೋಟಿ ಮುಂದುವರಿದಿತ್ತು. ಆದರೆ ಈ ಅವಧಿಯಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾದವು. ಅಂತಿಮವಾಗಿ ಕ್ರೊಯೇಶಿಯಾ ಈ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಮೊರಕ್ಕೋ ಸೆಮಿಫೈನಲ್ ಹಂತಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಕ್ರೊಯೇಷಿಯಾ XI: ಲಿವಕೋವಿಕ್, ಜುರಾನೋವಿಕ್, ಲವ್ರೆನ್, ಸುಟಾಲೋ, ಸೋಸಾ, ಮೊಡ್ರಿಕ್, ಜಾಕಿಕ್, ಕೊವಾಸಿಕ್, ವ್ಲಾಸಿಕ್, ಕ್ರಾಮರಿಕ್, ಪೆರಿಸಿ
ಮೊರಾಕ್ಕೊ XI: ಬೊನೊ, ಹಕಿಮಿ, ಎಲ್-ಯಾಮಿಕ್, ಡಾರಿ, ಅತ್ತಿಯತ್-ಅಲ್ಲಾ, ಔನಾಹಿ, ಅಮ್ರಾಬತ್, ಅಮಲ್ಲಾಹ್, ಜಿಯೆಚ್, ಎನ್-ನೆಸಿರಿ, ಬೌಫಲ್

Story first published: Saturday, December 17, 2022, 23:42 [IST]
Other articles published on Dec 17, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+