FIFA World Cup 2022: ಒಂದೇ ವಿಶ್ವಕಪ್‌ನಲ್ಲಿ ಫಿಫಾ ಗಳಿಸುವ ಆದಾಯ ಎಷ್ಟು ಸಾವಿರ ಕೋಟಿ ಗೊತ್ತಾ?

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿಕೊಂಡಿರುವ ಫಿಪಾ ವಿಶ್ವಕಪ್ ಫುಟ್ಬಾಲ್‌ಗೆ ಕತಾರ್ ನಲ್ಲಿ ನವೆಂಬರ್ 20ರಂದು ಅದ್ಧೂರಿ ಚಾಲನೆ ದೊರೆತಿದೆ. 28 ದಿನಗಳ ಕಾಲ ಫುಟ್ಬಾಲ್ ಜ್ವರ ಇಡೀ ಜಗತ್ತನ್ನು ಕಾಡಲಿದೆ. ಎಂಟು ಕ್ರೀಡಾಂಗಣಗಳಲ್ಲಿ 64 ಪಂದ್ಯಗಳು ನಡೆಯಲಿವೆ. ಈ ಬಾರಿ ಫಿಫಾ ವಿಶ್ವಕಪ್ ಅನ್ನು 500 ಕೋಟಿ ಜನ ವೀಕ್ಷಿಸಲಿದ್ದಾರೆ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅಂದಾಜು ಮಾಡಿದ್ದಾರೆ.
ಈ ವಿಶ್ವಕಪ್ ಆಯೋಜನೆ ಮಾಡಲು ಕತಾರ್ ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿದೆ. ಆದರೆ, ಫಿಫಾ ಇದೇ ವಿಶ್ವಕಪ್‌ನಿಂದ ಸಾವಿರಾರು ಕೋಟಿ ರುಪಾಯಿ ಆದಾಯ ಗಳಿಸಲಿದೆ. ಫಿಫಾ ಹೇಳಿಕೊಂಡಿರುವ ಪ್ರಕಾರ 2022ರ ವಿಶ್ವಕಪ್‌ನಲ್ಲಿ ಈ ಹಿಂದಿನ ಎಲ್ಲಾ ವಿಶ್ವಕಪ್ ಆದಾಯದ ದಾಖಲೆಗಳನ್ನು ಮುರಿದಿದೆ. ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಲ್ಲಿ ಫಿಫಾ $7.5 ಶತಕೋಟಿ (60 ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚು) ಆದಾಯ ಗಳಿಸಲಿದೆ.
2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ಗಿಂತ ಈ ಬಾರಿ 1 ಬಿಲಿಯನ್ ಡಾಲರ್ ಹೆಚ್ಚಿನ ಆದಾಯ ಗಳಿಸಿದೆ. ಫಿಫಾ ತನ್ನ 200ಕ್ಕೂ ಹೆಚ್ಚು ಸದಸ್ಯ ಅಧಿಕಾರಿಗಳಿಗೆ ಈ ಆದಾಯದ ವಿಚಾರವನ್ನು ಬಹಿರಂಗಪಡಿಸಿದೆ.

ಪ್ರಾಯೋಜಕತ್ವದಿಂದ ಸಾವಿರಾರು ಕೋಟಿ ಆದಾಯ
ವಿಶ್ವಕಪ್ ಆಯೋಜಿಸುತ್ತಿರುವ ಕತಾರ್ ನೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲಾಗಿದೆ. ಕತಾರ್ ಎನರ್ಜಿ 2022ರ ಫಿಫಾ ವಿಶ್ವಕಪ್‌ಗೆ ಉನ್ನತ ಶ್ರೇಣಿಯ ಪ್ರಾಯೋಜಕರಾಗಿದ್ದಾರೆ. ಕತಾರಿ ಬ್ಯಾಮಕ್ ಕ್ಯೂಎನ್‌ಬಿ ಮತ್ತು ಟೆಲಿಕಾಂ ಎಸ್‌ಆರ್‌ಎಂ ಓರೆಡೂ ಮೂರನೇ ಹಂತದ ಪ್ರಾಯೋಜಕರಾಗಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ ಫಿಫಾ ಆದಾಯ 2.5 ಶತಕೋಟಿ ಡಾಲರ್ ಗೆ ಹೆಚ್ಚಾಗಿದೆ.
2026ರ ವಿಶ್ವಕಪ್ ಫುಟ್ಬಾಲ್ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊದಲ್ಲಿ ನಡೆಯಲಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ 10 ಬಿಲಿಯನ್ ಡಾಲರ್ ಆದಾಯ ಪಡೆಯುವ ಸಾಧ್ಯತೆ ಇದೆ. 2026ರ ಪಂದ್ಯಾವಳಿಯಲ್ಲಿ 32ರ ಬದಲಿಗೆ 48 ತಂಡಗಳು ಭಾಗವಹಿಸಲಿವೆ.
10 ಲಕ್ಷಕ್ಕೂ ಹೆಚ್ಚು ಮಂದಿ ಈ ಬಾರಿ ವಿಶ್ವಕಪ್ ವೀಕ್ಷಣೆ ಮಾಡಲು ಕತಾರ್ ಗೆ ಪ್ರಯಾಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಸೌಕರ್ಯಕ್ಕೆ 8 ಶತಕೋಟ್ ಡಾಲರ್ ಸೇರಿದಂತೆ ಪಂದ್ಯಾವಳಿಯನ್ನು ಆಯೋಜನೆ ಮಾಡಲು ಕತಾರ್ 200 ಶತಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications