Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್ ಕತಾರ್-2022: ವಯಾಕಾಮ್​18 ಸ್ಪೋರ್ಟ್ಸ್‌ನಲ್ಲಿ ಲೈವ್, ಎಕ್ಸ್‌ಪರ್ಟ್‌ ಪ್ಯಾನೆಲ್‌ಗೆ ಫುಟ್ಬಾಲ್ ದಿಗ್ಗಜರು

FIFA

ಕತಾರ್‌ನಲ್ಲಿ ನವೆಂಬರ್ 20ರಂದು ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಭಾರತದಲ್ಲಿ ನೇರಪ್ರಸಾರ ಮಾಡುವ ವೇಳೆ ಫುಟ್ಬಾಲ್ ಸೂಪರ್‌ಸ್ಟಾರ್‌ಗಳನ್ನ ಒಳಗೊಂಡ ಪರಿಣಿತರ ತಂಡವು ಫುಟ್ಬಾಲ್ ಆಟದ ವಿಶ್ಲೇಷಣೆಯನ್ನು ಮಾಡಲಿದೆ ಎಂದು ಭಾರತದ ಹೊಚ್ಚಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್‌ವರ್ಕ್‌ 'ವಯಾಕಾಮ್18 ಸ್ಪೋರ್ಟ್ಸ್' ಘೋಷಿಸಿದೆ.

ವಿಶ್ವದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಕ್ರೀಡಾಕೂಟದ ಪ್ರಸಾರದ ವೇಳೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ವೇಯ್ನ್ ರೂನಿ, ಲೂಯಿಸ್ ಫಿಗೊ, ರಾಬರ್ಟ್ ಪೈರ್ಸ್, ಸೋಲ್ ಕ್ಯಾಂಪ್ಬೆಲ್ ಮತ್ತು ಗಿಲ್ಬರ್ಟೊ ಸಿಲ್ವಾ ಒಳಗೊಂಡ ಸ್ಟಾರ್‌ ತಂಡವು ವಿಶ್ಲೇಷಣೆಗಳನ್ನು ಒದಗಿಸಲಿದೆ. ಭಾರತದಲ್ಲಿ ಸ್ಪೋರ್ಟ್ಸ್18 ಮತ್ತು ಜಿಯೋ ಸಿನಿಮಾದಲ್ಲಿ ಫಿಫಾ ವಿಶ್ವಕಪ್ ಕತಾರ್-2022 ಪಂದ್ಯಗಳು ನೇರಪ್ರಸಾರ ಕಾಣುವ ವೇಳೆ ಫುಟ್ಬಾಲ್ ಪ್ರೇಮಿಗಳು ಈ ದಿಗ್ಗಜರ ವಿಶ್ಲೇಷಣೆಗಳನ್ನು ಆನಂದಿಸಬಹುದಾಗಿದೆ.

ಜಿಯೋ ಸಿನಿಮಾ ಈಗ ಜಿಯೋ, ವಿ, ಏರ್‌ಟೆಲ್‌ ಮತ್ತು ಬಿಎಸ್ಎನ್ಎಲ್ ಸಬ್‌ಸ್ಕ್ರೈಬ್‌ ಆದವರಿಗೆ ಫಿಫಾ ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಲೈವ್-ಸ್ಟ್ರೀಮ್ ಮೂಲಕ ಲಭ್ಯವಿದ್ದು, ಐದು ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿಯಲ್ಲಿ ವಿಶ್ಲೇಷಣೆ ಮತ್ತು ವೀಕ್ಷಕ ವಿವರಣೆಗಳನ್ನು ಒದಗಿಸಲಿದೆ.

ಫಿಫಾ ವಿಶ್ವಕಪ್ ಅಂದಮೇಲೆ ಅದ್ರ ಮೇಲಿನ ಕ್ರೇಜ್‌ ಸಾಕಷ್ಟು ಹೆಚ್ಚಾಗಿರಲಿದೆ. ಇದರ ಜೊತೆಗೆ ಫುಟ್ಬಾಲ್ ಪ್ರೇಮಿಗಳ ಹೃದಯದಲ್ಲಿ ಹಲವು ಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿರುವ ಈ ಫುಟ್ಬಾಲ್ ದಿಗ್ಗಜರನ್ನು ಒಳಗೊಂಡ ಪರಿಣಿತರ ತಂಡವು ಭಾರತದ ವೀಕ್ಷಕರಿಗೆ ವಿಶೇಷ ಮಾಹಿತಿ, ವಿಶ್ಲೇಷಣೆಗಳನ್ನು ಒದಗಿಸಲಿದೆ.

''ಭಾರತದಲ್ಲಿರಲು ಮತ್ತು ಫಿಫಾ ವಿಶ್ವಕಪ್ ಕತಾರ್-2022ಕ್ಕಾಗಿ ವಯಾಕಾಮ್18 ಸ್ಪೋರ್ಟ್ಸ್ ಜೊತೆ ಸೇರಲು ಸಂತೋಷವಾಗುತ್ತಿದೆ. ಭಾರತ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಲು ಮತ್ತು ನನ್ನ ವೃತ್ತಿಜೀವನದ ವೇಳೆ ಬೆಂಬಲ ನೀಡಿರುವ ಅನೇಕ ಭಾರತೀಯ ಫುಟ್ಬಾಲ್ ಅಭಿಮಾನಿಗಳ ಜೊತೆಗೆ ಮಾತನಾಡಲು ಇದು ನನಗೆ ಅತ್ಯುತ್ತಮ ಅವಕಾಶವಾಗಿದೆ. ಭಾರತದ ವಿಶ್ವಕಪ್ ಅನುಭವ ಮತ್ತು ಕಾತರದ ಭಾಗವಾಗಿರಲು ನಾನು ಕೂಡ ಉತ್ಸುಕನಾಗಿರುವೆ'' ಎಂದು ವೇಯ್ನ್ ರೂನಿ ಹೇಳಿದ್ದಾರೆ.

ಇಂಗ್ಲೆಂಡ್ ಪರ ಸರ್ವಾಧಿಕ ಗೋಲು ಸಿಡಿಸಿರುವ ಸಾಧಕರಾದ ವೇಯ್ನ್ ರೂನಿ, ಫುಟ್ಬಾಲ್ ಆಟ ಕಂಡ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದಾರೆ.

''ಭಾರತದಲ್ಲಿನ ಫುಟ್ಬಾಲ್ ಪ್ರೀತಿಯನ್ನು ಈ ಹಿಂದೆಯೂ ಕಂಡಿರುವ ಅದೃಷ್ಟವಂತ ನಾನಾಗಿದ್ದೇನೆ. ಫಿಫಾ ವಿಶ್ವಕಪ್ ಕತಾರ್-2022 ನೋಡಲು ಭಾರತೀಯ ಅಭಿಮಾನಿಗಳು ಎಷ್ಟು ಕಾತರಗೊಂಡಿದ್ದಾರೆ ಎಂಬುದನ್ನು ಊಹಿಸಬಲ್ಲೆ. ವಯಾಕಾಮ್18 ಸ್ಪೋರ್ಟ್ಸ್ ಮೂಲಕ ನಾನು ಭಾರತಕ್ಕೆ ವಾಪಸ್ ಬರುತ್ತಿರುವುದು ಮಾತ್ರವಲ್ಲದೆ, ಫುಟ್ಬಾಲ್ ಪ್ರೇಮಿಗಳಿಗೆ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾಕೂಟದ ಸವಿಯನ್ನೂ ಕಟ್ಟಿಕೊಡಲಿದ್ದೇವೆ''ಎಂದು ಲೂಯಿಸ್ ಫಿಗೊ ಹೇಳಿದ್ದಾರೆ.

ಪೋರ್ಚುಗಲ್ ದಿಗ್ಗಜ ಫಿಗೊ, ಬ್ಯಾಲನ್ ಡಿಓರ್ ಪ್ರಶಸ್ತಿ ವಿಜೇತರೂ ಆಗಿದ್ದು, 2006ರ ವಿಶ್ವಕಪ್‌ನಲ್ಲಿ ತಮ್ಮ ದೇಶದ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದ್ದರು. ಸೋಲ್ ಕ್ಯಾಂಪ್ಬೆಲ್ ಇಂಗ್ಲೆಂಡ್ ತಂಡವನ್ನು ಸತತ 6 ಮೇಜರ್ ಟೂರ್ನಿಗಳಲ್ಲಿ ಪ್ರತಿನಿಧಿಸಿದ ಮೊದಲ ಆಟಗಾರನಾಗಿದ್ದಾರೆ. ರಾಬರ್ಟ್ ಪೈರ್ಸ್ 1998ರ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಪ್ರಮುಖ ಭಾಗವಾಗಿದ್ದರು. ಗಿಲ್ಬರ್ಟೊ ಸಿಲ್ವಾ 2002ರ ವಿಶ್ವಕಪ್ ವಿಜೇತ ಬ್ರೆಜಿಲ್ ತಂಡದ ರಕ್ಷಣಾ ವಿಭಾಗದ ಪ್ರಮುಖ ಆಟಗಾರರಾಗಿದ್ದರು.

ಫಿಫಾ ವಿಶ್ವಕಪ್ ಕತಾರ್-2022ರ ನವೆಂಬರ್ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಚಾಲನೆ ಸಿಗಲಿದೆ.

ಫಿಫಾ ವಿಶ್ವಕಪ್ 2022 ಪ್ರಸಾರವಾಗುವ ಸ್ಪೋರ್ಟ್ಸ್18 -1 ಚಾನೆಲ್ ಸೇವೆ ಈ ರೀತಿಯಾಗಿ ಲಭ್ಯವಿರಲಿದೆ:

Fifa channels

Story first published: Wednesday, November 16, 2022, 18:53 [IST]
Other articles published on Nov 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+