FIFA World Cup 2022: ವಿಶ್ವಕಪ್ ಗೆದ್ದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಕೊನೆಗೂ ತಮ್ಮ ಬಹಳ ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ. 2022 ಫಿಫಾ ವಿಶ್ವಕಪ್ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆ ಮಾಡಿದರು. ಫ್ರಾನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಬೀಗಿತು.
ವಿಶ್ವಕಪ್ ಗೆದ್ದ ಬಳಿಕ ಲಿಯೋನೆಲ್ ಮೆಸ್ಸಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಹಂಚಿಕೊಂಡಿರುವ ಫೋಟೊ 61 ಮಿಲಿಯನ್‌ಗಳಿಗಿಂತ ಹೆಚ್ಚು ಲೈಕ್ ಗಳಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದು ಇದುವರೆಗೂ ಅತಿ ಹೆಚ್ಚು ಲೈಕ್ ಗಳಿಸಿದ ಪೋಸ್ಟ್ ಆಗಿದೆ. ಆಟ ಮುಗಿದ ನಂತರ ಅವರು ವಿಶ್ವಕಪ್ ಎತ್ತಿಹಿಡಿದ ಫೋಟೋವನ್ನು ಹಂಚಿಕೊಂಡಿದ್ದರು.
ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಫೈನಲ್ ಪಂದ್ಯ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಕೈಲಿಯನ್ ಎಂಬಾಪೆ ಅವರ ಶ್ರೇಷ್ಠ ಪ್ರದರ್ಶನದ ಹೊರತಾಗಿ ಮೆಸ್ಸಿ ಅದ್ಭುತ ಆಟದ ನೆರವಿನಿಂದ ಅರ್ಜೆಂಟೀನಾ ಗೆಲುವು ಸಾಧಿಸಿತು. ಗೆಲುವಿನ ನಂತರ ಅವರು ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಹಲವು ಬಾರಿ ಕನಸು ಕಂಡಿದ್ದೆ
ಫಿಫಾ ವಿಶ್ವಕಪ್ ಟ್ರೋಫಿಯೊಂದಿಗೆ ಸಂಭ್ರಮಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡ ಮೆಸ್ಸಿ, ತಂಡದ ಸದಸ್ಯರು, ಕುಟುಂಬ ಮತ್ತು ಅರ್ಜೆಂಟೀನಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
"ವಿಶ್ವ ಚಾಂಪಿಯನ್ಸ್! ನಾನು ಇದಕ್ಕಾಗಿ ಹಲವು ಬಾರಿ ಕನಸು ಕಂಡೆ, ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಇದನ್ನು ನಾನು ತುಂಬಾ ಬಯಸಿದ್ದೆ" ಎಂದು ಸ್ಪ್ಯಾನಿಶ್ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು.
Lionel Messi: ವಿಶ್ವ ಚಾಂಪಿಯನ್ ಲಿಯೋನೆಲ್ ಮೆಸ್ಸಿ ಒಟ್ಟು ಆಸ್ತಿ ಮೌಲ್ಯ, ಆದಾಯ, ಜೀವನಶೈಲಿ

ಧನ್ಯವಾದ ತಿಳಿಸಿದ ಲಿಯೋನೆಲ್ ಮೆಸ್ಸಿ
ವಿಶ್ವಕಪ್‌ನಲ್ಲಿ ಬೆಂಬಲಿಸಿದ ತಂಡದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಕುಟುಂಬಕ್ಕೆ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ, ನಮ್ಮನ್ನು ನಂಬಿದ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಅರ್ಜೆಂಟೀನಾದವರು ನಾವು ಒಟ್ಟಾಗಿ ಹೋರಾಡಿದಾಗ ಮತ್ತು ಒಗ್ಗೂಡಿಸಿದಾಗ ನಾವು ಗೆಲುವು ಸಾಧಿಸುವಲ್ಲಿ ಸಮರ್ಥರಾಗಿದ್ದೇವೆ. ಅರ್ಜೆಂಟೀನಾದ ಕನಸಾಗಿದ್ದ ವಿಶ್ವಕಪ್ ಅನ್ನು ಗೆಲ್ಲಲು ಯಶಸ್ವಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚು ಲೈಕ್ ಪಡೆದುಕೊಂಡ ಪೋಸ್ಟ್
ಮೆಸ್ಸಿ ಮಾಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ 61 ಮಿಲಿಯನ್‌ಗಿಂತ ಹೆಚ್ಚಿನ ಲೈಕ್ ಪಡೆದುಕೊಂಡೊದ್ದು ದಾಖಲೆ ನಿರ್ಮಿಸಿದೆ. ಈ ಮೊದಲು ಮತ್ತೊಬ್ಬ ಶ್ರೇಷ್ಠ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಚೆಸ್ ಆಡುತ್ತಿದ್ದ ಫೋಟೋ ಹೆಚ್ಚಿನ ಲೈಕ್ ಪಡೆದುಕೊಂಡಿದ್ದು. ಅದನ್ನು ಕ್ರಿಸ್ಟಿಯಾನೊ ರೊನಾಲ್ಡೊ ಹಂಚಿಕೊಮಡಿದ್ದರು. ಅದಕ್ಕೆ 43 ಮಿಲಿಯನ್‌ಗಿಂತ ಹೆಚ್ಚಿನ ಲೈಕ್ ಸಿಕ್ಕಿತ್ತು.
ಫೈನಲ್ ನಂತರ ಲಿಯೋನೆಲ್ ಮೆಸ್ಸಿ ಫುಟ್ಬಾಲ್‌ಗೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಫೈನಲ್ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾನು ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು
ವಿಶ್ವಕಪ್ ಗೆದ್ದ ನಂತರ ಲಿಯೋನೆಲ್ ಮೆಸ್ಸಿ ಮತ್ತು ತಂಡ ಅರ್ಜೆಂಟೀನಾವನ್ನು ತಲುಪಿದ್ದಾರೆ. ಬ್ಯೂನಸ್ ಐರಿಸ್‌ಗೆ ಆಗಮಿಸಿದ ಮೆಸ್ಸಿ ಪಡೆಗೆ ಭವ್ಯ ಸ್ವಾಗತ ಸಿಕ್ಕಿದೆ. ತೆರೆದ ವಾಹನದಲ್ಲಿ ಮೆಸ್ಸಿ ಮತ್ತು ತಂಡ ಲಕ್ಷಾಂತರ ಅಭಿಮಾನಿಗಳ ನಡುವೆ ಕಪ್‌ನೊಂದಿಗೆ ಮೆರವಣಿಗೆ ನಡೆಸಿದ್ದಾರೆ.
ತಮ್ಮ ನಾಯಕರನ್ನು ಸ್ವಾಗತಿಸಲು ಲಕ್ಷಾಂತರ ಬೆಂಬಲಿಗರು ಜಮಾಯಿಸಿದ್ದರು. ಮೆಸ್ಸಿ ಮತ್ತು ಕೋಚ್ ಸ್ಕಲೋನಿ ಪರೇಡ್ ಬಸ್‌ನಲ್ಲಿ ಆಟಗಾರರನ್ನು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಕರೆದೊಯ್ಯುವಾಗ ಸಹ ಆಟಗಾರರೊಂದಿಗೆ ನೃತ್ಯ ಮಾಡಿದರು. ಮಧ್ಯರಾತ್ರಿ 2 ಗಂಟೆಯಾದರೂ ಅಭಿಮಾನಿಗಳ ಸಂಭ್ರಮ ಕಡಿಮೆಯಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications