ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Lionel Messi: ವಿಶ್ವ ಚಾಂಪಿಯನ್ ಲಿಯೋನೆಲ್ ಮೆಸ್ಸಿ ಒಟ್ಟು ಆಸ್ತಿ ಮೌಲ್ಯ, ಆದಾಯ, ಜೀವನಶೈಲಿ

FIFA World Champion Lionel Messi Net Worth, Income, Lifestyle And Other Details

ಭಾನುವಾರ, ಡಿಸೆಂಬರ್ 18ರಂದು 2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಪೆನಾಲ್ಟಿಯಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ, ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.

ಹೆಚ್ಚುವರಿ ಸಮಯದ ನಂತರವೂ ಪಂದ್ಯವು 3-3ರಲ್ಲಿ ಕೊನೆಗೊಂಡಿತು. ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಎರಡು ಬಾರಿ ಗೋಲು ಗಳಿಸಿದರೆ, ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಹ್ಯಾಟ್ರಿಕ್ ಗೋಲು ಗಳಿಸಿದ್ದರು.

FIFA World Cup: ಮೆಸ್ಸಿ ಫುಟ್ಬಾಲ್‌ನ ಸಚಿನ್ ತೆಂಡೂಲ್ಕರ್; ಜೆರ್ಸಿ ನಂ.10 ದಂತಕಥೆಗಳ ನಡುವಿನ ಸಾಮ್ಯತೆ!FIFA World Cup: ಮೆಸ್ಸಿ ಫುಟ್ಬಾಲ್‌ನ ಸಚಿನ್ ತೆಂಡೂಲ್ಕರ್; ಜೆರ್ಸಿ ನಂ.10 ದಂತಕಥೆಗಳ ನಡುವಿನ ಸಾಮ್ಯತೆ!

ಅಂತಿಮವಾಗಿ ಪೆನಾಲ್ಟಿಯಲ್ಲಿ ಅರ್ಜೆಂಟೀನಾ ಫೈನಲ್‌ನಲ್ಲಿ 4-2 ಅಂತರದಲ್ಲಿ ಗೆದ್ದಿತು. ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳಿಂದ ಹಾಗೂ ಫುಟ್ಬಾಲ್ ಪ್ರಿಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು.

17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಎಫ್‌ಸಿಗಾಗಿ ಆಡಲು ಪ್ರಾರಂಭ

17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಎಫ್‌ಸಿಗಾಗಿ ಆಡಲು ಪ್ರಾರಂಭ

ಲಿಯೋನೆಲ್ ಮೆಸ್ಸಿ ವಿಶ್ವದ ಅತ್ಯಂತ ಬೇಡಿಕೆಯ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಚಿಕ್ಕ ವಯಸ್ಸಿನಿಂದಲೂ ಅವರು ಫುಟ್ಬಾಲ್‌ನ ಬಗ್ಗೆ ತುಂಬಾ ಉತ್ಸುಕರಾಗಿದ್ದರು ಮತ್ತು 17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಎಫ್‌ಸಿಗಾಗಿ ಆಡಲು ಪ್ರಾರಂಭಿಸಿದರು. ಅವರು ಸತತವಾಗಿ ನಾಲ್ಕು ವರ್ಷಗಳ ಕಾಲ 22ನೇ ವಯಸ್ಸಿನಲ್ಲಿ ತಮ್ಮ ಮೊದಲ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆಲ್ಲಲು ತಂಡದ ನಾಯಕತ್ವದ ವಹಿಸಿದರು.

ಲಿಯೋನೆಲ್ ಮೆಸ್ಸಿ ಜೂನ್ 24, 1987ರಂದು ಜನಿಸಿದರು. 2022ರ ಫಿಫಾ ವಿಶ್ವಕಪ್ ಟ್ರೋಫಿ ಗೆದ್ದ ನಂತರ ಹೆಚ್ಚಿನ ಜನರು ಲಿಯೋನೆಲ್ ಮೆಸ್ಸಿ ಅವರ ಆಸ್ತಿ ಮೌಲ್ಯ ಮತ್ತು ಆದಾಯವನ್ನು ಹುಡುಕುತ್ತಿದ್ದಾರೆ.

ಕ್ರೀಡಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ತಿಳಿದುಕೊಳ್ಳಲು ಉತ್ಸುಕ

ಕ್ರೀಡಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ತಿಳಿದುಕೊಳ್ಳಲು ಉತ್ಸುಕ

ಕೆಲವರು ತಮ್ಮ ನೆಚ್ಚಿನ ಸಿನಿಮಾ ಮತ್ತು ಕ್ರೀಡಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನವನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಅಂತೆಯೇ, ಇದೀಗ ಇಲ್ಲಿ ಲಿಯೋನೆಲ್ ಮೆಸ್ಸಿ ಒಟ್ಟು ಆಸ್ತಿ ಮತ್ತು ಆದಾಯದ ಮಾಹಿತಿಯನ್ನು ನೀಡಲಾಗಿದೆ.

ಅವರು 16 ವರ್ಷಗಳಿಗೂ ಹೆಚ್ಚು ಕಾಲ ಬಾರ್ಸಿಲೋನಾ ಪರ ಆಡಿದ ಅವರು, 2021ರಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್‌ಗಾಗಿ ಆಡುತ್ತಿದ್ದಾರೆ. ಹೀಗಾಗಿ ಲಿಯೋನೆಲ್ ಮೆಸ್ಸಿಯ ಸಂಪಾದನೆ, ನಿವ್ವಳ ಮೌಲ್ಯ ಮತ್ತು ಜೀವನಶೈಲಿ ತಿಳಿದುಕೊಳ್ಳೋಣ.

ಅರ್ಜೆಂಟೀನಾ ತಂಡದ ನಾಯಕನ ನಿವ್ವಳ ಆಸ್ತಿ

ಅರ್ಜೆಂಟೀನಾ ತಂಡದ ನಾಯಕನ ನಿವ್ವಳ ಆಸ್ತಿ

ಲಿಯೋನೆಲ್ ಮೆಸ್ಸಿಯ ನಿವ್ವಳ ಮೌಲ್ಯ 600 ಮಿಲಿಯನ್ ಡಾಲರ್ ಅಂದರೆ, ಸುಮಾರು 4952 ಕೋಟಿ ರೂ. ಆಗಿದೆ. ವರದಿಗಳ ಪ್ರಕಾರ, ಮೆಸ್ಸಿ ಪ್ರತಿದಿನ ಸುಮಾರು 1,05,000 ಡಾಲರ್ ಗಳಿಸುತ್ತಾರೆ. ಮೆಸ್ಸಿಯನ್ನು ಸಾಮಾನ್ಯವಾಗಿ ಸರಳವಾಗಿದ್ದಾರೆಂದು ನೋಡಲಾಗುತ್ತದೆ ಆದರೆ ಅವರು ಅರ್ಜೆಂಟೀನಾದ ನೋ-ಫ್ಲೈ ವಲಯದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.

ಇದಲ್ಲದೆ, ಅವರು ಪ್ರಪಂಚದಾದ್ಯಂತ ಸುಮಾರು 234 ಮಿಲಿಯನ್ ಮೌಲ್ಯದ ಅನೇಕ ಮನೆಗಳನ್ನು ಹೊಂದಿದ್ದಾರೆ. ಅವರ ಬಳಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಇದೆ. ಮೆಸ್ಸಿ ಕೂಡ ಒಂದು ಐಷಾರಾಮಿ ಹೋಟೆಲ್ ಅನ್ನು ಹೊಂದಿದ್ದಾರೆ.

ಮೆಸ್ಸಿಯ ಆದಾಯ- ಸಂಬಳ

ಮೆಸ್ಸಿಯ ಆದಾಯ- ಸಂಬಳ

ಫೋರ್ಬ್ಸ್ ಬಿಡುಗಡೆ ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ ಮೆಸ್ಸಿ ವಾರ್ಷಿಕವಾಗಿ 130 ಮಿಲಿಯನ್ ಡಾಲರ್ ಗಳಿಸುತ್ತಾರೆ. ಅದರ ಹೊರತಾಗಿ, ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವುದರಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ.

ಮೆಸ್ಸಿಯ ವೃತ್ತಿ ಮತ್ತು ಕುಟುಂಬ

ಮೆಸ್ಸಿಯ ವೃತ್ತಿ ಮತ್ತು ಕುಟುಂಬ

ಫುಟ್ಬಾಲ್ ಅನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಲಿಯೋನೆಲ್ ಮೆಸ್ಸಿ ತನ್ನ ಬಾಲ್ಯದ ಪ್ರಿಯತಮೆ ಆಂಟೋನೆಲ್ಲಾ ರೊಕುಝೊ ಅವರನ್ನು ವಿವಾಹವಾದರು ಮತ್ತು ಅವರಿಗೆ ಮೂವರು ಮಕ್ಕಳಿದ್ದಾರೆ. ಮೆಸ್ಸಿಯ ಪೂರ್ಣ ಹೆಸರು ಲಿಯೋನೆಲ್ ಆಂಡ್ರೆಸ್ ಮೆಸ್ಸಿ.

ಅರ್ಜೆಂಟೀನಾದ ಈ ಸ್ಟಾರ್ ಆಟಗಾರ 7 ಬೆಲ್ಲೆನ್ ಡಿ'ಓರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಸಾರ್ವಕಾಲಿಕ 5 ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅರ್ಜೆಂಟೀನಾ ರಾಷ್ಟ್ರೀಯ ತಂಡದ ಜೊತೆಗೆ ಪ್ಯಾರಿಸ್‌ನ ಸೇಂಟ್-ಜರ್ಮೈನ್‌ಗಾಗಿ ಕ್ಲಬ್ ಫುಟ್‌ಬಾಲ್ ಆಡುತ್ತಾರೆ.

Story first published: Monday, December 19, 2022, 18:44 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X