ರೊನಾಲ್ಡೊ ಜೊತೆ ಬಿಕ್ಕಟ್ಟು, ಪೋರ್ಚುಗಲ್ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆ

ಪೋರ್ಚುಗಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆ ನೀಡಿದ್ದಾರೆ. 8 ವರ್ಷಗಳಿಂದ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅವರ ಅವಧಿಯಲ್ಲಿ ಪೋರ್ಚುಗಲ್ 2016ರಲ್ಲಿ ಯುರೋ ಕಪ್ ಗೆದ್ದಿತ್ತು.
2022ರ ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮೊರೆಕ್ಕೊ ವಿರುದ್ಧದ ಪಂದ್ಯದಲ್ಲಿ ತಂಡದ ಮುಖ್ಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊರನ್ನು ಬೆಂಚ್ ಕಾಯುವಂತೆ ಮಾಡಿದ್ದರು. ಇದೇ ವಿಚಾರವಾಗಿ ಸ್ಯಾಂಟೋಸ್ ಟೀಕೆಗಳನ್ನು ಅನುಭವಿಸಬೇಕಾಯಿತು.
ಮೊರೊಕ್ಕೊ ವಿರುದ್ಧ ಪೋರ್ಚುಗಲ್ ಸೋಲನುಭವಿಸುವ ಮೂಲಕ ಫಿಫಾ ವಿಶ್ವಕಪ್‌ನಿಂದಲೇ ಹೊರಬಿದ್ದಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಲ್ಲೂ ಪ್ರಮುಖ ಪಂದ್ಯಗಳಲ್ಲಿ ತಂಡದ ಪ್ರಮುಖ ಆಟಗಾರ ರೊನಾಲ್ಡೊರನ್ನು ಆಡಿಸದ ಕೋಚ್ ಫರ್ನಾಂಡೊ ಸ್ಯಾಂಟೋಸ್ ನಿರ್ಧಾರಕ್ಕೆ ಹಲವರು ದಿಗ್ಭ್ರಮೆ ವ್ಯಕ್ತಪಡಿಸಿದ್ದರೆ.
ಕ್ರಿಸ್ಟಿಯಾನೊ ರೊನಾಲ್ಡೊ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದಿದ್ದರೂ, ರೊನಾಲ್ಡೊ ಕುಟುಂಬಸ್ಥರು, ಪಾಲುದಾರರು, ಸ್ನೇಹಿತರು, ಪಾಲುದಾರ ಜಾರ್ಜಿನಾ ರೊಡ್ರಿಗಸ್ ಸೇರಿ ಹಲವು ಈ ವಿಚಾರವನ್ನು ಒಪ್ಪಿರಲಿಲ್ಲ. ಅಂತಿಮವಾಗಿ ಸ್ಯಾಂಟೋಸ್ ತಂಡದಿಂದಲೇ ದೂರವಾಗಲು ನಿರ್ಧರಿಸಿದ್ದಾರೆ.

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಆ ನಿರ್ಧಾರ
ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ತಾರೆ. ಅವರು ಪೋರ್ಚುಗಲ್ ತಂಡದ ಅನುಭವಿ ಆಟಗಾರ. ಆದರೆ, ಫಿಫಾ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಕೊರಿಯಾ ಆಟಗಾರರ ಜೊತೆ ವಾಗ್ವಾದ ಮಾಡಿದ್ದರು.
ರೊನಾಲ್ಡೊ ಅವರ ವರ್ತನಗೆ ಬೇಸರ ವ್ಯಕ್ತಪಡಿಸಿದ್ದ ಕೋಚ್ ಸ್ಯಾಂಟೋಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ರೊನಾಲ್ಡೊರನ್ನು ಬೆಂಚ್ ಕಾಯುವಂತೆ ಮಾಡಿದ್ದರು. ಆದರೆ, ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿರ್ಟರ್ಲೆಂಡ್ ವಿರುದ್ಧ 6-1 ಗೋಲುಗಳ ಭರ್ಜರಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ರೊನಾಲ್ಡೊ ಬದಲಿಗೆ ಅವಕಾಶ ಪಡೆದ ಗೊನ್ಕಾಲೊ ರಾಮೋಸ್ 6-1 ಗೆಲುವಿನಲ್ಲಿ ಹ್ಯಾಟ್ರಿಕ್ ಗಳಿಸಿದ ಕಾರಣ ಸ್ಯಾಂಟೋಸ್ ನಿರ್ಧಾರ ಸರಿಯಾಗಿದೆ ಎನ್ನಲಾಗಿತ್ತು.
ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿತು. ಈ ಪಂದ್ಯದಲ್ಲಿ ಕೂಡ ರೊನಾಲ್ಡೊ ಅವರಿಗೆ ಆಡಲು ಅವಕಾಶ ನೀಡಲಿಲ್ಲ. ಈ ಸೋಲಿನೊಂದಿಗೆ ರೊನಾಲ್ಡೊ ಅವರ ವಿಶ್ವಕಪ್ ಕನಸು ಅಂತ್ಯವಾಯಿತು.

ಸ್ಯಾಂಟೋಸ್ ವಿರುದ್ಧ ಟೀಕೆ
ವಿಶ್ವದ ಅತ್ಯುತ್ತಮ ಆಟಗಾರ, ತಂಡದ ಶಕ್ತಿಶಾಲಿ ಅಸ್ತ್ರವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಜಾರ್ಜಿನಾ ಅವರು ಸ್ಯಾಂಟೋಸ್ ನಿರ್ಧಾರಕ್ಕೆ ಟೀಕೆ ಮಾಡಿದ್ದರು. "ನಿಮ್ಮ ಸ್ನೇಹಿತ ಮತ್ತು ತರಬೇತುದಾರ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ, ಈಗ ಎಲ್ಲವೂ ಬದಲಾಗಿದೆ" ಎಂದು ಹೇಳಿದ್ದರು.
ತನ್ನ ನಿರ್ಧಾರಗಳನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಯಾಂಟೋಸ್ ಹೇಳಿದ್ದರು. ಅವರು ಮಾಡಿದ ಆಯ್ಕೆಗಳಿಂದ ಪ್ರತಿಯೊಬ್ಬರೂ ಸಂತೋಷವಾಗಿಲ್ಲ ಎಂಬುದು "ಸಾಮಾನ್ಯ" ಎಂದು ಅವರು ಹೇಳಿದರು. ಆದರೂ, ಪೋರ್ಚುಗಲ್ ಆಟಗಾರ ಬ್ರೂನೋ ಫೆರ್ನಾಂಡಿಸ್ ರಾಜೀನಾಮೆ ನೀಡಿರುವ ಅನುಭವಿ ವ್ಯವಸ್ಥಾಪಕ ಸ್ಯಾಂಟೋಸ್‌ರನ್ನು ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications