ಫಿಫಾ ವಿಶ್ವಕಪ್ ಹಿನ್ನಲೆ: 10,000 ಸಿಬ್ಬಂದಿ ನೇಮಕಾತಿಗೆ ಮುಂದಾದ ಖತಾರ್ ಏರ್‌ವೇಸ್

ಇದೇ ವರ್ಷ ಖತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಹಿನ್ನಲೆಯಲ್ಲಿ ಖತಾರ್ ಏರ್‌ವೇಸ್ ಬರೋಬ್ಬರಿ 10,000 ಉದ್ಯೋಗಿಗಳನ್ನ ನೇಮಕಾತಿಗೆ ಮುಂದಾಗಿದೆ. ಫುಟ್ಬಾಲ್ ವಿಶ್ವಕಪ್ ಹಿನ್ನಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಖತಾರ್‌ಗೆ ಆಗಮಿಸುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಕೋವಿಡ್-19 ಮುಗಿದ ಬಳಿಕ ವಿಮಾನ ಹಾರಾಟ ಹೆಚ್ಚಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದ್ದು, ವಿಶ್ವಕಪ್ ಪಂದ್ಯ ವೀಕ್ಷಿಸಲು ಹೆಚ್ಚಿನ ಡಿಮ್ಯಾಂಡ್ ಇರುವುದರಿಂದ ಕತಾರ್ ಏರ್‌ವೇಸ್ ತನ್ನ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ ಎಂದು ಏರ್‌ಲೈನ್ಸ್ ರಾಯಿಟರ್ಸ್‌ಗೆ ತಿಳಿಸಿದೆ.
ದೋಹಾ ಮೂಲದ ಏರ್‌ವೇಸ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 45,000ದಿಂದ 55,000ಕ್ಕೆ ಹೆಚ್ಚಿಸಲು ಯೋಜಿಸಿದ್ದು, ಆದಷ್ಟು ಬೇಗನೆ ನೇಮಕಾತಿಗಳನ್ನ ಶುರು ಮಾಡಲಿದೆ ಎಂದು ತಿಳಿಸಿದೆ.
"ಕೋವಿಡ್ ನಂತರ ಕತಾರ್ ಏರ್‌ವೇಸ್ ಬೆಳವಣಿಗೆಯ ಪಥದಲ್ಲಿದೆ ಮತ್ತು ವಿಶ್ವಕಪ್ ಸಿದ್ಧತೆಗಳು ಪೂರ್ಣ ಹಂತದಲ್ಲಿದೆ. ಇದು ಏರ್‌ಲೈನ್‌ನಾದ್ಯಂತ ನೇಮಕಾತಿಯನ್ನು ಹೆಚ್ಚಿಸುತ್ತಿದೆ" ಎಂದು ಕಂಪನಿಯು ಈ ವಾರ ರಾಯಿಟರ್ಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ನೇಮಕಾತಿ ವಿಚಾರ ತಿಳಿಸಿರುವ ಏರ್‌ಲೈನ್ ಎಷ್ಟು ಹೊಸ ಹುದ್ದೆಗಳನ್ನು ಖಾಯಂ ಎಂದು ಹೇಳಲು ನಿರಾಕರಿಸಿದೆ. 2020 ರಲ್ಲಿ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ 33 ನಗರಗಳಿಗೆ ತನ್ನ ಪ್ರಯಾಣವನ್ನ ಕಡಿಮೆಗೊಳಿಸಿದ ನಂತರ ಇದು 2021 ರಲ್ಲಿ ಸಿಬ್ಬಂದಿ ಮಟ್ಟವನ್ನು 37,000 ಕ್ಕಿಂತ ಕಡಿಮೆಗೊಳಿಸಿತು. ಅಂದಿನಿಂದ ಇದು 150 ಕ್ಕೂ ಹೆಚ್ಚು ಸ್ಥಳಗಳಿಗೆ ಕಾರ್ಯಾಚರಣೆಯನ್ನು ಹೆಚ್ಚಿಸಿದೆ.
ಇನ್ನು ಹೊಸ ನೇಮಕಾತಿಗಳನ್ನ ಫಿಲಿಫೈನ್ಸ್, ಭಾರತ ಮತ್ತು ಇತರೆ ದೇಶಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು ಎಂದು ಕಂಪನಿಯು ತಿಳಿಸಿದೆ.
ನವೆಂಬರ್ 20ರಂದು ವಿಶ್ವಕಪ್‌ಗೆ ಚಾಲನೆ ಸಿಕ್ಕಾಗ ಎಷ್ಟು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಏರ್‌ಲೈನ್ಸ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications