Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World cup 2022: ಮೊಟ್ಟ ಮೊದಲ ಬಾರಿಗೆ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡ ಮೆಸ್ಸಿ-ರೊನಾಲ್ಡೊ!

Messi and Ronaldo

ಕತಾರ್‌ನಲ್ಲಿ ಇಂದಿನಿಂದ ಪ್ರಾರಂಭಗೊಳ್ಳಲಿರುವ ಫಿಫಾ ವಿಶ್ವಕಪ್ 2022ಕ್ಕೆ ಕ್ಷಣಗಣನೆ ಶುರುವಾಗಿದೆ. ಅಲ್ ಖೋರ್‌ನಲ್ಲಿರುವ ಅಲ್‌ ಬೇತ್ ಸ್ಟೇಡಿಯಂ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಸ್ಪರ್ಧೆ ನಡೆಸಲಿವೆ. ಇದರಲ್ಲಿ ಬ್ರೆಜಿಲ್, ಪೋರ್ಚುಗಲ್, ಸ್ಪೇನ್, ಫ್ರಾನ್ಸ್‌, ಜರ್ಮನಿ, ಅರ್ಜೆಂಟೀನಾದಂತಹ ಬಲಿಷ್ಟ ತಂಡಗಳನ್ನು ಕಾಣಬಹುದಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಆಟಗಾರರಾದ ಲಿಯೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊರನ್ನ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ವಿಶ್ವದ ಫುಟ್ಬಾಲ್ ದಿಗ್ಗಜರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಒಟ್ಟಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಫಿಫಾ ವಿಶ್ವಕಪ್‌ ಹಿನ್ನಲೆಯಲ್ಲಿ ಫ್ರಾನ್ಸ್‌ನ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಲೂಹಿಸ್ ವಿಟಾನ್‌ ಜಾಹೀರಾತಿಗೆ ಪೋಸ್‌ ನೀಡಿದ್ದಾರೆ.

ಈ ಫೋಟೋದಲ್ಲಿ ಇಬ್ಬರು ಸ್ಟಾರ್‌ಗಳು ಚೆಸ್‌ ಆಟವಾಡುತ್ತಿದ್ದು, ಬಹಳ ಆಳವಾಗಿ ಯೋಚಿಸಿ ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವಂತೆ ಕಂಡುಬಂದಿದೆ. ಈ ಇಬ್ಬರು ಆಟಗಾರರು ಫುಟ್ಬಾಲ್ ಇತಿಹಾಸದಲ್ಲಿ ಕಂಡಂತಹ ಅತ್ಯದ್ಭುತ ಆಟಗಾರರಾಗಿದ್ದು, ಇಬ್ಬರು ಒಟ್ಟಾಗಿ 12 ಬಾಲನ್ ಡಿ ಓರ್ ಪ್ರಶಸ್ತಿ ಗೆದ್ದಿದ್ದಾರೆ.

ಈಗಾಗಲೇ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಈ ಬಾರಿಯ ಫಿಫಾ ವಿಶ್ವಕಪ್‌ ಕೊನೆಯ ವಿಶ್ವಕಪ್‌ ಎಂದು ಖಚಿತಪಡಿಸಿದ್ದು, ಪೋರ್ಚುಗಲ್‌ನ ರೊನಾಲ್ಡೊ ಇನ್ನು ಕೆಲವು ವರ್ಷಗಳ ಕಾಲ ಆಡುವುದಾಗಿ ತಿಳಿಸಿದ್ದಾರೆ.

ಶನಿವಾರ ಲೂಹಿಸ್ ವಿಟಾನ್ ತನ್ನ ಹೊಸ ಬ್ರಾಂಡ್ ಅಂಬಾಸಿಡರ್ ಪ್ರಕಟಿಸಿದ್ದು, ಇಬ್ಬರು ಫುಟ್ಬಾಲ್ ದಿಗ್ಗಜರನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Story first published: Sunday, November 20, 2022, 12:35 [IST]
Other articles published on Nov 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+