Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA 2026: 40ನೇ ವಯಸ್ಸಿನಲ್ಲಿ ಯಾರೂ ಮರೆಯಲಾಗದ ದಾಖಲೆ ಮಾಡಿದ ಗೋಲ್‌ಕೀಪರ್ ವೊಜಿನ್ಹಾ

FIFA World Cup 2026: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಅತ್ಯಂತ ಸ್ಪೂರ್ತಿದಾಯಕ ದಾಖಲೆಯೊಂದು ಸೃಷ್ಟಿಯಾಗಿದೆ. ಕೇಪ್ ವರ್ಡೆ ರಾಷ್ಟ್ರೀಯ ಫುಟ್‌ಬಾಲ್ ತಂಡದ ಅನುಭವಿ ಗೋಲ್‌ಕೀಪರ್ ವೊಜಿನ್ಹಾ ಅವರು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿ, ತಮ್ಮ ಮೊದಲ ಪಂದ್ಯದಲ್ಲೇ ಎದುರಾಳಿ ತಂಡಕ್ಕೆ ಯಾವುದೇ ಗೋಲು ಬಿಟ್ಟುಕೊಡದೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಫುಟ್‌ಬಾಲ್ ಜಗತ್ತಿನ ಅತ್ಯುನ್ನತ ವೇದಿಕೆಯಾದ ಫಿಫಾ ವಿಶ್ವಕಪ್‌ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಜೀವಮಾನದ ಕನಸಾಗಿರುತ್ತದೆ. ಆದರೆ 40 ವರ್ಷದ ವೊಜಿನ್ಹಾ ಅವರಿಗೆ ಈ ಅವಕಾಶ ಸಿಕ್ಕಿದ್ದು ತಮ್ಮ ವೃತ್ತಿಜೀವನದ ಅದೃಷ್ಟದ ಸಂಕೇತವಾಗಿದೆ. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಅವರು, ಬಲಿಷ್ಠ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪುರುಷರ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಚೊಚ್ಚಲ ಪಂದ್ಯವನ್ನಾಡಿದ ಎರಡನೇ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

FIFA World Cup 2026 Cape Verde Goalkeeper Vozinha Creates History at 40 Know Complete details

ಎದುರಾಳಿಗೆ ಸಿಂಹಸ್ವಪ್ನವಾದ ವೊಜಿನ್ಹಾ

ಗ್ರೂಪ್ ಹಂತದ ಈ ಅತ್ಯಂತ ರೀಚಕ ಪಂದ್ಯದಲ್ಲಿ ಕೇಪ್ ವರ್ಡೆ ತಂಡವು 2010ರ ವಿಶ್ವ ಚಾಂಪಿಯನ್ಸ್ ಆದ ಸ್ಪೇನ್ ತಂಡವನ್ನು ಎದುರಿಸಿತ್ತು. ಪಂದ್ಯದುದ್ದಕ್ಕೂ ಸ್ಪೇನ್ ತಂಡದ ಸ್ಟಾರ್ ಆಟಗಾರರು ಕೇಪ್ ವರ್ಡೆ ವಿರುದ್ಧ ನಿರಂತರವಾಗಿ ಗೋಲು ಗಳಿಯಸು ಪ್ರಯತ್ನಿಸಿದರು. ಆದರೆ ಗೋಲು ಕಂಬದ ಮುಂದೆ ಗೋಡೆಯಂತೆ ನಿಂತ ವೊಜಿನ್ಹಾ, ಸ್ಪೇನ್ ತಂಡದ ಪ್ರತಿಯೊಂದು ಯತ್ನವನ್ನೂ ವಿಫಲಗೊಳಿಸಿದರು.

ಇಡೀ 90 ನಿಮಿಷಗಳ ಪಂದ್ಯದಲ್ಲಿ ಅವರು ಬರೋಬ್ಬರಿ 8 ಅದ್ಭುತ ಸೇವ್‌ಗಳನ್ನು ಮಾಡುವ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾದರು. ಅವರ ಈ ಅಸಾಧಾರಣ ಪ್ರದರ್ಶನದಿಂದಾಗಿ ಪಂದ್ಯವು 0-0 ಗೋಲುಗಳಿಂದ ಡ್ರಾಗೊಳ್ಳುವಲ್ಲಿ ಯಶಸ್ವಿ ಆಯಿತು. ಈ ಅದ್ಭುತ ಆಟದ ಮೂಲಕ ಅವರು ಸಾಧನೆಗೆ ವಯಸ್ಸಲ್ಲ, ಗುರಿ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

ಯಾರು ಈ ವೊಜಿನ್ಹಾ?

ಜೋಸಿಮರ್ ಜೋಸ್ ಎವೊರಾ ಡಿಯೋಸ್ ಎಂಬ ಪೂರ್ಣ ಹೆಸರನ್ನು ಹೊಂದಿರುವ ಇವರು, ಫುಟ್‌ಬಾಲ್ ಲೋಕದಲ್ಲಿ 'ವೊಜಿನ್ಹಾ' ಎಂದೇ ಪ್ರಸಿದ್ಧಿ ಪಡೆಸಿದ್ದಾರೆ. ಕೇಪ್ ವರ್ಡೆಯ ಮಿಂಡೆಲೋದಲ್ಲಿ ಜನಿಸಿದ ಇವರು ಕಳೆದ 10 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ದೇಶದ ಪ್ರಮುಖ ಗೋಲ್‌ಕೀಪರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಪಾದಾರ್ಪಣೆ ಯಾವಾಗ?

2012ರಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಪಾದಾರ್ಪಣೆ ಮಾಡಿದ್ದ ಇವರು, ಪ್ರಸ್ತುತ ವಿಶ್ವಕಪ್ ಟೂರ್ನಿಗೆ ಬರುವ ಮುನ್ನವೇ 81 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿದ್ದರು. ಆಫ್ರಿಕಾ ಕಪ್ ಆಫ್ ನೇಷನ್ಸ್‌ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಿದ್ದರೂ ವಿಶ್ವಕಪ್ ವೇದಿಕೆಯಲ್ಲಿ ಆಡುವ ಅವರ ಎರಡು ದಶಕಗಳ ಕನಸು ಈಗ ನನಸಾಗಿದೆ. 2007ರಲ್ಲಿ ಸ್ಥಳೀಯ ಕ್ಲಬ್ ಬಟುಕ್ ಎಫ್‌ಸಿಯೊಂದಿಗೆ ವೃತ್ತಿಪರ ಜರ್ನಿ ಆರಂಭಿಸಿದ ಇವರು ಆನಂತರ ಅಂಗೋಲಾ, ಮೊಲ್ಡೋವಾ, ಪೋರ್ಚುಗಲ್, ಸೈಪ್ರಸ್ ಮತ್ತು ಸ್ಲೋವಾಕಿಯಾ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಕ್ಲಬ್‌ಗಳ ಪರ ಆಡಿದ್ದಾರೆ. ಈಗ ಪೋರ್ಚುಗಲ್‌ನ ಎರಡನೇ ವಿಭಾಗದ ಕ್ಲಬ್ ಆದ 'ಚಾವೆಸ್' ಪರ ಆಡುತ್ತಿದ್ದಾರೆ.

ಕೇಪ್ ವರ್ಡೆ ತಂಡದ ಇತಿಹಾಸದಲ್ಲೇ ಇದು ಮೊದಲ ವಿಶ್ವಕಪ್ ಟೂರ್ನಿಯಾಗಿದ್ದು, ತಂಡದ ಚೊಚ್ಚಲ ಪಂದ್ಯದಲ್ಲೇ 40 ವರ್ಷದ ಹಿರಿಯ ಆಟಗಾರ ತೋರಿದ ಈ ಧೀರ ಹೋರಾಟ ಇಡೀ ಕ್ರೀಡಾ ಜಗತ್ತಿಗೆ ಮಾದರಿಯಾಗಿದ. 2026ರ ವಿಶ್ವಕಪ್‌ನ ಅತ್ಯಂತ ಸ್ಪೂರ್ತಿದಾಯಕ ಕಥೆಗಳಲ್ಲಿ ಒಂದಾಗಿ ದಾಖಲಾಗಿದೆ ಎಂದು ಹೇಳಬಹುದು.

Story first published: Tuesday, June 16, 2026, 15:47 [IST]
Other articles published on Jun 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+