Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಮೆಸ್ಸಿ, ರೊನಾಲ್ಡೊ, ನೇಮರ್‌, ಎಂಬಪ್ಪೆ ಮೈದಾನಕ್ಕೆ ಇಳಿಯುವುದು ಯಾವಾಗ?

ಫಿಫಾ ವಿಶ್ವಕಪ್2026 ಆರಂಭವಾಗಿದೆ. ಈ ವಿಶ್ವಕಪ್‌ನಲ್ಲಿ ಸ್ಟಾರ್‌ ಆಟಗಾರರು ಕಣಕ್ಕೆ ಇಳಿಯುತ್ತಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳನ್ನು ನೆಟ್ಟ ಆಟಗಾರರು ಇನ್ನು ಮೈದಾನವನ್ನು ಪ್ರವೇಶಿಸಿಲ್ಲ. ಅಭಿಮಾನಿಗಳಲ್ಲಿ ಇರುವ ಕುತೂಹಲ ಮೆಸ್ಸಿ, ರೊನಾಲ್ಡೊ, ನೇಮರ್‌ ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಉತ್ತರ ಇಲ್ಲಿದೆ.

ಅಮೆರಿಕ, ಕೆನಡಾ, ಮೆಕ್ಸಿಕೊದಲ್ಲಿ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಆರಂಭವಾಗಿದೆ. ಈ ವಿಶ್ವಕಪ್‌ನಲ್ಲಿ 48 ದೇಶಗಳು ಭಾಗವಹಿಸುತ್ತಿವೆ. ಈ ದೇಶಗಳನ್ನು 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿ ತಲಾ 4 ತಂಡಗಳು ಇರಲಿವೆ. ಲೀಗ್‌ ಹಂತದಲ್ಲಿ ತಂಡಗಳು ತಲಾ ಮೂರು ಪಂದ್ಯಗಳನ್ನು ಗುಂಪು ಹಂತದಲ್ಲಿ ಆಡಲಿವೆ. ಹಾಗಿದ್ದರೆ ಬ್ರೆಜಿಲ್, ಅರ್ಜೆಂಟೀನಾ, ಪೋರ್ಚುಗಲ್‌ ದೇಶಗಳು ಯಾವ ಗುಂಪಿನಲ್ಲಿವೆ ಇವು ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸುತ್ತದೆ.

FIFA World Cup 2026

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಈ ಬಾರಿಯೂ ತಂಡವನ್ನು ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮುನ್ನಡೆಸುತ್ತಿದ್ದಾರೆ. ಅನುಭವಿ ಆಟಗಾರರಿಂದ ಕೂಡಿರುವ ತಂಡ ಈ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ ಬ್ಯಾಕ್‌ ಟು ಬ್ಯಾಕ್ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ. ಇನ್ನು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಶೋಕೆಸ್‌ಗೆ ವಿಶ್ವಕಪ್‌ ಸೇರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ರೊನಾಲ್ಡೊ ಅವರು ಒಮ್ಮೆಯೂ ಫಿಫಾ ವಿಶ್ವಕಪ್‌ಗೆ ಗೆದ್ದಿಲ್ಲ.

ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ಯಾವ ಗುಂಪಿನಲ್ಲಿದೆ? ಹಾಗೂ ಈ ಗುಂಪಿನಲ್ಲಿ ಮತ್ತೆ ಯಾವೆಲ್ಲಾ ದೇಶಗಳು ಇವೆ?

ಈ ಬಾರಿಯ ಫಿಫಾ ವಿಶ್ವಕಪ್‌ ಫುಟ್ಬಾಲ್‌ನಲ್ಲಿ ಅರ್ಜೆಂಟೀನಾ ಜೆ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಅರ್ಜೆಂಟೀನಾ ಸೇರಿದಂತೆ ಆಲ್ಜೀರಿಯಾ, ಆಸ್ಟ್ರಿಯಾ ಮತ್ತು ಜೋರ್ಡಾನ್ ತಂಡಗಳು ಇವೆ.

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

ಅರ್ಜೆಂಟೀನಾ ತಂಡದ ವೇಳಾಪಟ್ಟಿ

  • ಜೂನ್ 17: ಆಲ್ಜೀರಿಯಾ ವಿರುದ್ಧ, ಬೆಳಗ್ಗೆ 6.30ಕ್ಕೆ
  • ಜೂನ್ 22: ಆಸ್ಟ್ರಿಯಾ ವಿರುದ್ಧ, ರಾತ್ರಿ 10.30ಕ್ಕೆ
  • ಜೂನ್ 28: ಜೋರ್ಡಾನ್ ವಿರುದ್ಧ, ಸಂಜೆ 7.30ಕ್ಕೆ

ಪೋರ್ಚುಗಲ್‌ ಯಾವ ಗುಂಪಿನಲ್ಲಿ ಸ್ಥಾನ ಪಡೆದಿದೆ?

ಗ್ರುಪ್ ಕೆ: ಪೋರ್ಚುಗಲ್, ಕೊಲಂಬಿಯಾ, ಉಜ್ಬೇಕಿಸ್ತಾನ್, ಡಿಆರ್ ಕಾಂಗೋ.

ಪೋರ್ಚುಗಲ್ ತಂಡದ ವೇಳಾಪಟ್ಟಿ

  • ಜೂನ್ 17: ಡಿಆರ್ ಕಾಂಗೋ ವಿರುದ್ಧ, ರಾತ್ರಿ 10.30ಕ್ಕೆ
  • ಜೂನ್ 23: ಉಜ್ಬೇಕಿಸ್ತಾನ್ ವಿರುದ್ಧ, ರಾತ್ರಿ 10.30ಕ್ಕೆ
  • ಜೂನ್ 28: ಕೊಲಂಬಿಯಾ ವಿರುದ್ಧ, ಮುಂಜಾನೆ 5.00ಕ್ಕೆ

ಬ್ರೆಜಿಲ್‌ ಜೊತೆಗೆ ಸಿ ಗುಂಪಿನಲ್ಲಿ ಸ್ಥಾನ ಪಡೆದ ದೇಶಗಳು ಯಾವುವು?

ಗ್ರುಪ್ ಸಿ: ಬ್ರೆಜಿಲ್, ಮೊರಾಕೊ, ಹೈಟಿ, ಸ್ಕಾಟ್‌ಲ್ಯಾಂಡ್.

ಬ್ರೆಜಿಲ್ ತಂಡದ ವೇಳಾಪಟ್ಟಿ

ಕೈಲ್‌ ಎಂಬಪ್ಪೆ ಮುಂದಾಳತ್ವದ ಫ್ರಾನ್ಸ್‌ ಯಾವ ಗುಂಪಿನಲ್ಲಿದೆ? ಫ್ರಾನ್ಸ್‌ ಯಾರ ವಿರುದ್ಧ ಗುಂಪು ವಿಭಾಗದಲ್ಲಿ ಕಾದಾಟ ನಡೆಸಲಿದೆ?

ಕೈಲ್ ಎಂಬಪ್ಪೆ ಮುಂದಾಳತ್ವದ ಫ್ರಾನ್ಸ್ ತಂಡವು ಗ್ರುಪ್ ಐ ನಲ್ಲಿದ್ದು, ಗುಂಪು ಹಂತದಲ್ಲಿ ಸೆನೆಗಲ್, ಇರಾಕ್ ಮತ್ತು ನಾರ್ವೆ ದೇಶಗಳ ವಿರುದ್ಧ ಕಾದಾಟ ನಡೆಸಲಿದೆ.

ಫ್ರಾನ್ಸ್ ತಂಡದ ವೇಳಾಪಟ್ಟಿ

  • ಜೂನ್ 17: ಸೆನೆಗಲ್‌ ವಿರುದ್ಧ, ಮಧ್ಯರಾತ್ರಿ 12.30ಕ್ಕೆ
  • ಜೂನ್ 23: ಇರಾಕ್ ವಿರುದ್ಧ, ಮಧ್ಯರಾತ್ರಿ 2.30ಕ್ಕೆ
  • ಜೂನ್ 27: ನಾರ್ವೆ ವಿರುದ್ಧ, ಮಧ್ಯರಾತ್ರಿ 12.30ಕ್ಕೆ

Story first published: Saturday, June 13, 2026, 7:57 [IST]
Other articles published on Jun 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+