ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ಕನಸು ಭಗ್ನಗೊಳಿಸಿದ ಕ್ರೊಯೇಶಿಯಾ

ಫಿಫಾ ವಿಶ್ವಕಪ್‌ನಲ್ಲಿ ಇಂದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ಹಾಗೂ ಕ್ರೊಯೇಶಿಯಾ ತಂಡಗಳು ಮುಖಾಖಾಮುಖಿಯಾಗಿದ್ದವು. ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ 1-1 ಅಂತರದಿಂದ ಸಮಬಲ ಸಾಧಿಸಿತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ಕಂಡುಕೊಳ್ಳಲಾಗಿದ್ದು ಜಪಾನ್ ತಂಡವನ್ನು ಕ್ರೊವೇಶಿಯಾ 3-1 ಅಂತರದಿಂದ ಮಣಿಸಿ ಕಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಹೆಚ್ಚುವರಿ ಅವಧಿಯಲ್ಲಿಯೂ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ ಬಳಿಕ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶದ ಮೊರೆ ಹೋಗಲಾಯಿತು. ಈ ಮೂಲಕ ಈ ವಿಶ್ವಕಪ್‌ನಲ್ಲಿ ಮೊದಲ ಫೆನಾಲ್ಟಿ ಶೂಟೌಟ್ ಫಲಿತಾಂಶ ಹೊರಬಿದ್ದಿದೆ. ಆದರೆ ಇದು ಜಪಾನ್ ಪಡೆಯ ವಿರುದ್ಧ ಬಂದಿದ್ದು ದ್ವೀಪ ರಾಷ್ಟ್ರದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅಲ್ಲದೆ ಏಷ್ಯಾ ಖಂಡದಿಂದ ಭರವಸೆಯ ತಂಡವಾಗಿದ್ದ ಜಪಾನ್ ಈ ಸೋಲಿನೊಂದಿಗೆ ಕತಾರ್ ವಿಶ್ವಕಪ್‌ನಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.
ಫೆನಾಲ್ಟಿ ಶೂಟೌಟ್‌ನಲ್ಲಿ ಕ್ರೊವೇಷಿಯಾದ ಗೋಲ್‌ಕೀಪರ್ ಡೊಮಿನಿಕ್ ಲಿವಾಕೋವಿಕ್ ಮೂರು ಸೇವ್‌ಗಳನ್ನು ಮಾಡಿದರು. ಇತ್ತ ನಿರ್ಣಾಯಕ ಪೆನಾಲ್ಟಿಯಲ್ಲಿ ಮಾರಿಯೋ ಪಸಾಲಿಕ್ ಚೆಂಡನ್ನು ಯಶಸ್ವಿಯಾಗಿ ಗೋಲ್ ಪೆಟ್ಟಿಗೆಗೆ ಸೇರ್ಪಡೆಗೊಳಿಸುವ ಮೂಲಕ ಗೆಲುವನ್ನು ಸಾರಿದರು.
ಆರಂಭದಿಂದಲೂ ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಜಪಾನ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಡಾನ್ ಅವರಿಂದ ಪಡೆದ ಚೆಂಡನ್ನು ಮೊರಿಟಾ ಗೋಲ್ ಪೋಸ್ಟ್‌ಗೆ ತಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಜಪಾನ್ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿತು. ಆದರೆ ಕ್ರೊಯೇಶಿಯಾ ಮೊದಲಾರ್ಧದಲ್ಲಿ ಗೋಲು ಗಳಿಸದೆಯೇ ಒತ್ತಡಕ್ಕೆ ಒಳಗಾಯಿತು.
ಇನ್ನು ದ್ವಿತಿಯಾರ್ಧ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕ್ರೋವೇಶಿಯಾ ಕೂಡ ಈ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಲಾವ್ರೆನ್ ಅವರಿಂದ ಬಂದ ಚೆಂಡನ್ನು ಹೆಡ್ಡರ್ ಮೂಲಕ ಪೆರಿಸಿಕ್ ಗೋಲ್ ಪೋಸ್ಟ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಈ ಪಂದ್ಯದಲ್ಲಿ ಸಮಬಲ ಸಾಧಿಸಿತು. ಬಳಿಕ ಎರಡು ತಂಡಗಳು ಕೂಡ ಸಾಕಷ್ಟು ಪ್ರಯತ್ನಗಳ್ನು ನಡೆಸಿದರೂ ಗೋಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಅವಧಿಯಲ್ಲಿಯೂ ಫಲಿತಾಂಶ ಟೈ ಆದ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ಹೊರಬೀಳುವಂತಾಯಿತು.
ಜಪಾನ್: ಗೊಂಡ, ಟೊಮಿಯಾಸು, ಯೋಶಿಡಾ, ತಾನಿಗುಚಿ, ಇಟೊ, ಮೊರಿಟಾ, ಜುನ್ಯಾ, ನಾಗಟೊಮೊ, ಡೋನ್, ಮೇದ, ಕಮಡ
ಸಬ್‌ಸ್ಟಿಟ್ಯುಶನ್: ಕವಾಶಿಮಾ, ಮಿಟೊಮಾ, ಸಾಯಿ, ಹಟೊ, ಸ್ಮಿತ್, ಮಿನಾಮಿನೊ, ಮಚಿನೊ, ಯಮಾನೆ, ತನಕಾ, ಉಯೆಡಾ, ಶಿಬಾಸಾಕಿ, ಅಸಾನೊ, ಸೊಮಾ
ಕ್ರೊಯೇಷಿಯಾ: ಲಿವಕೋವಿಕ್; ಜುರಾನೋವಿಕ್, ಲೊವ್ರೆನ್, ಗ್ವಾರ್ಡಿಯೋಲ್, ಬಾರಿಸಿಕ್; ಬ್ರೋಜೊವಿಕ್, ಕೊವಾಸಿಕ್, ಮೊಡ್ರಿಕ್; ಪೆಟ್ಕೊವಿಕ್, ಕ್ರಾಮರಿಕ್, ಪೆರಿಸಿಕ್.
ಸಬ್‌ಸ್ಟಿಟ್ಯುಶನ್: ಜಿರ್ಬಿಕ್, ಇವುಸಿಕ್, ಎಲ್ರಿಕ್, ಮಜೆರ್, ವ್ಲಾಸಿಕ್, ಲಿವಾಜಾ, ಪಸಾಲಿಕ್, ಬುಡಿಮಿರ್, ಓರ್ಸಿಕ್, ವಿಡಾ, ಸುಟಾಲೋ, ಸುಸಿಕ್, ಜಾಕಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications