FIFA World Cup Qualifiers: ಇಂದು ಭಾರತ vs ಕತಾರ್ ಪಂದ್ಯ

ದೋಹಾ: ಫೀಫಾ ವಿಶ್ವಕಪ್ ಕ್ವಾಲಿಫೈಯರ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಇಂದು ಭಾರತ ಮತ್ತು ಕತಾರ್ ತಂಡಗಳು ಮುಖಾಮುಖಿಯಾಗಲಿವೆ. ದೋಹಾದ ಜಾಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 10.30 PM ವೇಳೆ ಪಂದ್ಯ ಶುರುವಾಗಲಿದೆ.
ಗ್ರೂಪ್ 'ಇ'ಯಲ್ಲಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ಭಾರತ 3 ಅಂಕಗಳನ್ನು ಕಲೆ ಹಾಕಿದೆ. ಆರು ಪಂದ್ಯಗಳನ್ನಾಡಿರುವ ಏಷ್ಯನ್ ಚಾಂಪಿಯನ್ಸ್ ಕತಾರ್ 16 ಅಂಕಗಳನ್ನು ಕಲೆ ಹಾಕಿದೆ. ಐದು ಪಂದ್ಯಗಳಲ್ಲಿ 12 ಪಾಯಿಂಟ್ಸ್ ಗಳಿಸಿರುವ ಓಮನ್ ಪಾಯಿಂಟ್ಸ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಇದೇ ಗುಂಪಿನಲ್ಲಿರುವ ಅಫ್ಘಾನಿಸ್ತಾನ ಐದು ಪಂದ್ಯಗಳಲ್ಲಿ 4 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ 1 ಅಂಕ ಗಳಿಸಿರುವ ಬಾಂಗ್ಲಾದೇಶ ಕೊನೇ ಸ್ಥಾನದಲ್ಲಿದೆ. ಕ್ವಾಲಿಫೈಯರ್‌ನಲ್ಲಿ 8 ಗ್ರೂಪ್ ವಿನ್ನರ್ ತಂಡಗಳು ಮತ್ತು 4 ಬೆಸ್ಟ್ ಗ್ರೂಪ್ ರನ್ನರ್ಸ್ ತಂಡಗಳು ಮೂರನೇ ಸುತ್ತಿನ ವರ್ಲ್ಡ್ ಕಪ್ ಕ್ವಾಲಿಫಿಕೇಶನ್‌ಗೆ ಮುನ್ನಡೆ ಗಿಟ್ಟಿಸಲಿದೆ.
ಭಾರತ ಈಗಾಗಲೇ ವಿಶ್ವಕಪ್ ರೇಸ್‌ನಿಂದ ಹೊರ ಬಿದ್ದಿದೆ. ಆದರೆ ಏಷ್ಯಾಕಪ್ ಅರ್ಹತೆಗೆ ಇನ್ನೂ ಅವಕಾಶ ಇರುವುದರಿಂದ ಭಾರತ ಈಗಲೂ ಹೋರಾಡುತ್ತಿದೆ. ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಬಂದರೆ ಏಷ್ಯಕಪ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications