ಫಿಫಾ ವಿಶ್ವಕಪ್ ಕ್ವಾ. ಫೈನಲ್: ಬ್ರೆಜಿಲ್ ಸವಾಲು ಗೆಲ್ಲುತ್ತಾ ಕ್ರೊಯೇಶಿಯಾ: ಮೆಸ್ಸಿ ಪಡೆಗೆ ಡಚ್ಚರ ಪೈಪೋಟಿ

ಫಿಫಾ ವಿಶ್ವಕಪ್ ರೋಚಕ ಘಟ್ಟವನ್ನು ತಲುಪಿದೆ. ಕ್ವಾರ್ಟರ್‌ಫೈನಲ್ ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು ಸೆಮಿಫೈನಲ್ ಹಂತಕ್ಕೇರಲು 8 ತಂಡಗಳು ಹಣಾಹಣಿ ನಡೆಸಲಿದೆ. ಇಂದು ಎರಡು ಸೆಣೆಸಾಟಗಳು ನಡೆಯಲಿದ್ದು ಮೊದಲಿಗೆ ಬ್ರೆಜಿಲ್ ಹಾಗೂ ಕ್ರೊಯೇಶಿಯಾ ತಂಡಗಳ ಮಧ್ಯೆ ಸೆಣೆಸಾಟ ನಡೆಯಲಿದೆ. ಅದಾದ ಬಳಿಕ ಭಾರತೀಯ ಕಾಲಮಾನ ಮಧ್ಯರಾತ್ರಿ 12:30ಕ್ಕೆ ಅರ್ಜೆಂಟಿನಾ ಹಾಗೂ ನೆದರ್ಲೆಂಡ್ಸ್ ತಂಡಗಳ ಮಧ್ಯೆ ಸೆಣೆಸಾಟ ನಡೆಸಲಿದೆ.
ಬ್ರೆಜಿಲ್ vs ಕ್ರೊಯೇಶಿಯಾ
ಬ್ರೆಜಿಲ್ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಅಬ್ಬರಿಸಿದೆ. ಲೀಗ್ ಹಂತದಲ್ಲಿ ಕ್ಯಾಮರೂನ್ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲು ಹೊರತುಪಡಿಸಿದರೆ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಸಂಪೂರ್ಣ ಮೇಲುಗೈ ಸಾಧಿಸಿದ್ದು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ರೌಂಡ್ ಆಫ್ 16 ಹಂತದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಿದ ಬ್ರೆಜಿಲ್ 4-1 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.
ಇನ್ನು ಕೊಯೇಶಿಯಾಗೆ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಎದುರಾಗಿದ್ದು ಏಷ್ಯಾದ ಬಲಿಷ್ಠ ತಂಡ ಜಪಾನ್. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಫೆನಾಲ್ಟಿ ಶೂಟೌಟ್‌ನಲ್ಲಿ ಕ್ರಿಯೇಶಿಯಾ ಫಲಿತಾಂಶವನ್ನು ತಮ್ಮ ಪರವಾಗಿಸಿಕೊಂಡಿತು. ಕ್ರೊಯೇಷಿಯಾ ಗೋಲ್‌ಕೀಪರ್ ಡೊಮಿನಿಕ್ ಲಿವಾಕೊವಿಯಾ ಈ ಪಂದ್ಯದಲ್ಲಿ ಕ್ರೊಯೇಶಿಯಾ ಪರವಾಗಿ ನಿಜವಾದ ಸ್ಟಾರ್ ಆಗಿ ಹೊರಹೊಮ್ಮಿದ್ದರು.
ಅರ್ಜೆಂಟಿನಾ vs ನೆದರ್ಲೆಂಡ್ಸ್
ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲಿಯೇ ಸೌದಿ ಅರೇಬಿಯಾ ವಿರುದ್ಧ ಸೋಲು ಅನುಭವಿಸಿ ಆಘಾತಕ್ಕೆ ಒಳಗಾಗಿದ್ದು ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ. ಆದರೆ ಬಳಿಕ ಗೆಲುವಿನ ಲಯಕ್ಕೆ ಮರಳಿದ ಮೆಸ್ಸಿ ಪಡೆ ಉತ್ತಮ ಪ್ರದರ್ಶನ ನೀಡುತ್ತಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟಿನಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಗಮನ ಸೆಳೆಯುವ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಅರ್ಜೆಂಟೀನಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಇನ್ನು ಅರ್ಜೆಂಟಿನಾ ತಂಡಕ್ಕೆ ಎದುರಾಳಿಯಾಗಿ ಕಣಕ್ಕಿಳಿಯುತ್ತಿರುವ ನೆದರ್ಲೆಂಡ್ಸ್ ತಂಡ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿಯೇ ಉಳಿದಿಕೊಂಡಿರುವ ನೆದರ್ಲೆಂಡ್ಸ್ ತಂಡ ಗ್ರೂಪ್ ಆಫ್ 16 ಹಂತದಲ್ಲಿ ಅಮೆರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿ 3-1 ಅಂತರದಿಂದ ಗೆದ್ದು ಬೀಗಿತ್ತು. ಇದೀಗ ಸೆಮಿಫಯನಲ್ ಮೇಲೆ ಕಣ್ಣಿಟ್ಟಿರುವ ಡಚ್ಚರ ಬಳಗ ಮೆಸ್ಸಿ ಪಡೆಯ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ಈ ಎರಡು ಮುಖಾಮುಖಿ ಕೂಡ ಫುಟ್ಬಾಲ್ ಅಭಿಮಾನಿಗಳ ಪಾಲಿಗೆ ರೋಮಾಂಚನಕಾರಿ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ. ಈ ರೋಚಕ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಕತಾರ್ ಕ್ರೀಡಾಂಗಣ ಸಜ್ಜಾಗಿದೆ. ಕುತೂಹಲಕಾರಿ ಅಂಶವೆಂದರೆ ಎರಡು ಪಂದ್ಯಗಳು ಕೂಡ ದಕ್ಷಿಣ ಅಮೆರಿಕಾ ಮತ್ತು ಯುರೋಪ್ ಖಂಡಗಳ ಎರಡು ದೇಶಗಳ ನಡುವಿನ ಈ ಮೂಖಾಮುಖಿಯಾಗಿದ್ದು ಯಾರೊಇಗೆ ಮೇಲುಗೈ ದೊರೆಯಲಿದೆ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications